»   » ಪುನೀತ್ ನಿರ್ಮಾಣದ 'ಕವಲು ದಾರಿ' ಕುರಿತ ಲೇಟೆಸ್ಟ್ ಸುದ್ದಿ ಇದು..

ಪುನೀತ್ ನಿರ್ಮಾಣದ 'ಕವಲು ದಾರಿ' ಕುರಿತ ಲೇಟೆಸ್ಟ್ ಸುದ್ದಿ ಇದು..

Posted By:
Subscribe to Filmibeat Kannada

'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ಹೇಮಂತ್ ಕುಮಾರ್ ತಮ್ಮ ಎರಡನೇ ಸಿನಿಮಾಗೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಈ ಹಿಂದೆ ತಮ್ಮ ಎರಡನೇ ಚಿತ್ರಕ್ಕೆ 'ಅರ್ಧಸತ್ಯ' ಟೈಟಲ್ ನೀಡಿದ್ದ ಹೇಮಂತ್ ರಾವ್ ಈಗ ಅದರ ಬದಲಾಗಿ 'ಕವಲು ದಾರಿ' ಎಂಬ ಟೈಟಲ್ ನೀಡಿರುವ ಬಗ್ಗೆ ನಿನ್ನೆ ತಾನೆ ನಿಮಗೆ ಹೇಳಿದ್ವಿ. ಇದೇ ಚಿತ್ರದ ಬಗ್ಗೆ ಈಗ ಇನ್ನೊಂದು ಲೇಟೆಸ್ಟ್ ಸುದ್ದಿ ಹೊರಬಿದ್ದಿದೆ.[ಪವರ್ ಸ್ಟಾರ್ ಮೊದಲ ಚಿತ್ರಕ್ಕೆ ಆರಂಭದಲ್ಲೇ ವಿಘ್ನ!]

ಸಿಂಪಲ್ ಸುನಿ ನಿರ್ದೇಶನದ 'ಆಪರೇಷನ್ ಅಲಮೇಲಮ್ಮ' ಸಿನಿಮಾದಲ್ಲಿ ನಟಿಸಿರುವ ಮನೀಶ್ ರಿಷಿ 'ಕವಲು ದಾರಿ' ಚಿತ್ರದಲ್ಲಿ ನಾಯಕ ನಟನಾಗಿ ಬಣ್ಣಹಚ್ಚುತ್ತಿದ್ದಾರೆ. ಈ ಥ್ರಿಲ್ಲರ್ ಸಿನಿಮಾದಲ್ಲಿ ಅವರ ಪಾತ್ರ ಏನು ಎಂಬುದು ಈಗ ರಿವೀಲ್ ಆಗಿದೆ. ಅಂದಹಾಗೆ ರಿಷಿ ಪೊಲೀಸ್ ಅಧಿಕಾರಿಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸ್ವತಃ ನಿರ್ದೇಶಕ ಹೇಮಂತ್ ರಾವ್ ಹೇಳಿದ್ದಾರೆ.

Manish Rishi to play police officer in Hemanth Rao's 'Kavalu Daari' film

'ಕವಲು ದಾರಿ'ಯಲ್ಲಿ ಮನೀಶ್ ರಿಷಿ ಪೊಲೀಸ್ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಕೇಳಿದ ನಂತರ ಈಗ ಹೊಸ ಕುತೂಹಲಕಾರಿ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಅದೇನಂದ್ರೆ ಈ ಹಿಂದೆ 'ಅರ್ಧಸತ್ಯ' ಟೈಟಲ್ ನೊಂದಿಗೆ ಪೋಸ್ಟರ್ ಪ್ರಕಟಿಸಿದ್ದ ವೇಳೆ ಹೇಮಂತ್ ಈ ಚಿತ್ರ ಶಾಲಾ ದಿನಗಳ ಹಳೇ ನೆನಪುಗಳನ್ನು ಕುರಿತ ಥ್ರಿಲ್ಲಿಂಗ್ ಚಿತ್ರ ಎಂದು ಹೇಳಿದ್ದರು. ಆದರೆ ಅದೇ ಕಥೆಗೆ ಈಗ 'ಕವಲು ದಾರಿ' ಟೈಟಲ್ ನೀಡಲಾಗಿದ್ದು, ಚಿತ್ರದ ನಾಯಕ ಪೊಲೀಸ್ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಹೊಸ ಕುತೂಹಲಕ್ಕೆ ಕಾರಣವಾಗಿದೆ.

ರಿಷಿ ಪಾತ್ರದ ಕುರಿತು ಮಾತನಾಡಿರುವ ನಿರ್ದೇಶಕರು 'ಕವಲು ದಾರಿ' ಎಂದರೇ ಕ್ರಾಸ್ ರೋಡ್. ಆದ್ದರಿಂದ ಪೊಲೀಸ್ ಅಧಿಕಾರಿಯೊಬ್ಬನ ಸತ್ಯ ಮತ್ತು ಸುಳ್ಳಿನ ನಡುವಿನ ಜೀವನದ ಕಥೆಯನ್ನೊಳಗೊಂಡ ಚಿತ್ರವಾಗಿದೆ ಎಂದಿದ್ದಾರೆ.

Manish Rishi to play police officer in Hemanth Rao's 'Kavalu Daari' film

ಪುನೀತ್ ರಾಜ್ ಕುಮಾರ್ ರವರ ಪಿಆರ್‌ಕೆ ಪ್ರೊಡಕ್ಷನ್ ಮತ್ತು ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ನಿರ್ಮಾಣ ಆಗುತ್ತಿರುವ ಈ ಚಿತ್ರಕ್ಕೆ ಸದ್ಯ ನಾಯಕ ನಟನ ಆಯ್ಕೆ ಮಾತ್ರ ಆಗಿದ್ದು, ನಟಿ ಮತ್ತು ಉಳಿದ ತಾರಾಬಳಗದ ಆಯ್ಕೆ ಆಗಿಲ್ಲ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ಮತ್ತು ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಇದೆ.[ಹೇಮಂತ್ ರಾವ್-ಪುನೀತ್ ಕಾಂಬಿನೇಷನ್ ಚಿತ್ರಕ್ಕೆ ಹೊಸ ಟೈಟಲ್!]

English summary
'Godhi Banna Sadharana Maikattu' fame director Hemanth Rao's next film, which is being produced by Puneeth Rajakumar has been titled as 'Kavalu Daari'. In this Movie Actor Manish Rishi will Play as police officer.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X