'ಮಾರ್ಚ್ 22' ಚಿತ್ರದಲ್ಲಿ ಅನಂತನಾಗ್ ಜೋಡಿಯಾಗಿ ಲಕ್ಷ್ಮಿ ನಟಿಸುತ್ತಿಲ್ಲ
ಇತ್ತೀಚೆಗಷ್ಟೆ ನೀರಿನ ಸಮಸ್ಯೆ ಬಗ್ಗೆ ನಿರ್ದೇಶಕ ಕೋಡ್ಲು ರಾಮಕೃಷ್ಣ 'ಮಾರ್ಚ್ 22' ಎಂಬ ಸಿನಿಮಾ ಮಾಡುತ್ತಿರುವ ಬಗ್ಗೆ ಹೇಳಿದ್ವಿ. ಹಾಗೆ ಚಿತ್ರದಲ್ಲಿ ಅನಂತನಾಗ್ ಜೋಡಿಯಾಗಿ ಲಕ್ಷ್ಮಿ ಅವರು ನಟಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈಗ ಲಕ್ಷ್ಮಿ ಅವರು ಈ ಚಿತ್ರದಲ್ಲಿ ನಟಿಸುತ್ತಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ.['ಮಾರ್ಚ್ 22': 15 ವರ್ಷದ ಬಳಿಕ ಒಂದೇ ಚಿತ್ರದಲ್ಲಿ ಅನಂತನಾಗ್, ಲಕ್ಷ್ಮೀ]
ಹೌದು, ಹದಿನೈದು ವರ್ಷಗಳ ನಂತರ ಅನಂತನಾಗ್ ಮತ್ತು ಲಕ್ಷ್ಮಿ ಅವರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಈಗ ಸುಳ್ಳಾಗಿದೆ. ನಟಿ ಲಕ್ಷ್ಮಿ ಬದಲಾಗಿ ಅವರ ಕಾಲಘಟ್ಟದ ಖ್ಯಾತ ನಟಿ ಗೀತಾ ಅವರು ಅನಂತನಾಗ್ ಗೆ ಜೋಡಿಯಾಗಿ ಅಭಿನಯಿಸಲಿದ್ದಾರೆ.

ನೀರಿನ ಸಮಸ್ಯೆ ಬಗ್ಗೆ ವಿಶ್ವ ಜಲ ದಿನವನ್ನೇ ಶೀರ್ಷಿಕೆಯಾಗಿಟ್ಟುಕೊಂಡು, ನಿರ್ಮಾಣ ಮಾಡುತ್ತಿರುವ 'ಮಾರ್ಚ್ 22' ಚಿತ್ರವನ್ನು ಕಥೆ, ಚಿತ್ರಕಥೆ ಬರೆದು ಕೋಡ್ಲು ರಾಮಕೃಷ್ಣ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಗೆ ಉದ್ಯಮಿ ಹರೀಶ್ ಶೆರಿಗಾರ್ ಬಂಡಬಾಳ ಹೂಡಿದ್ದಾರೆ.[ಅನಂತ್ ನಾಗ್ ಜೊತೆ ಕಳೆದು ಹೋದ ವಿಮರ್ಶಕರು]
'ಮಾರ್ಚ್ 22' ಚಿತ್ರದಲ್ಲಿ ನಟಿ ಮೇಘಶ್ರೀ ರವರು ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಹಿರಿಯ ನಟ ನಟಿಯರಾದ ಜೈಜಗದೀಶ್, ನಟಿ ವಿನಯಾ ಪ್ರಸಾದ್, ಶರತ್ ಲೋಹಿತಾಶ್ವ, ಪದ್ಮಜಾರಾವ್, ಸಾಧು ಕೋಕಿಲ, ಶಾಂತಾ ಆಚಾರ್ಯ, ದುಬೈ ಸುವರ್ಣಾ, ಆಶಿಷ್ ವಿದ್ಯಾರ್ಥಿ, ಪ್ರಶೋಭಿತ ಮಂಗಳೂರು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.


Click it and Unblock the Notifications











