For Quick Alerts
  ALLOW NOTIFICATIONS  
  For Daily Alerts

  'ಮಾರ್ಚ್‌ 22': 15 ವರ್ಷದ ಬಳಿಕ ಒಂದೇ ಚಿತ್ರದಲ್ಲಿ ಅನಂತನಾಗ್, ಲಕ್ಷ್ಮೀ

  By Suneel
  |

  ನೀರಿನ ಸಮಸ್ಯೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುವ ಮಹತ್ವ ಪೂರ್ಣ ಸಮಸ್ಯೆ. ನೀರಿನ ಬಗ್ಗೆಯೇ ಒಂದು ಪ್ರಯೋಗಾತ್ಮಕ ಸಿನಿಮಾ ಮಾಡುವುದು ಎಂದರೆ ಇನ್ನೂ ದೊಡ್ಡ ಸಮಸ್ಯೆ ಅಲ್ವಾ. ಆದ್ರೆ ಅದೇ ನೀರಿನ ಮಹತ್ವದ ಬಗ್ಗೆ ಕಥೆ ಮಾಡಿ ಆಕ್ಷನ್‌ ಕಟ್ ಹೇಳುತ್ತಿದ್ದಾರೆ ಕೋಡ್ಲು ರಾಮಕೃಷ್ಣ.

  ಹೌದು, ಸಾಂಡಲ್‌ ವುಡ್‌ ನಲ್ಲಿ ಈಗ ಪ್ರಯೋಗಾತ್ಮಕವಾಗಿ ನಿರ್ಮಾಣ ವಾಗುತ್ತಿರುವ ಚಿತ್ರ ಕೋಡ್ಲು ರಾಮಕೃಷ್ಣ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿದೆ. ಇವರ ಈ ಚಿತ್ರಕ್ಕೆ ವಿಶ್ವ ಜಲ ದಿನವನ್ನೇ ಶೀರ್ಷಿಕೆಯಾಗಿಟ್ಟುಕೊಂಡು 'ಮಾರ್ಚ್‌ 22' ಎಂದು ಹೆಸರಿಡಲಾಗಿದೆ. ಸಿನಿಮಾಗೆ ಕೋಡ್ಲು ರಾಮಕೃಷ್ಣ ರವರೇ ಕಥೆ. ಚಿತ್ರಕಥೆ ಬರೆದಿದ್ದು ಅವರೇ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  'ನೀರು' ಎಂಬ ಸಂಕೀರ್ಣ ಸಮಸ್ಯೆಯ ಬಗ್ಗೆ ವಿವಿಧ ಆಯಾಮಗಳಲ್ಲಿ ರೋಚಕವಾಗಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ, ವಿಶೇಷವಾಗಿ ಅನಂತನಾಗ್ ಮತ್ತು ಲಕ್ಷ್ಮೀ ರವರು ಹದಿನೈದು ವರ್ಷಗಳ ನಂತರ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಯಾರೆಲ್ಲಾ ನಟಿಸುತ್ತಿದ್ದಾರೆ, ಮತ್ತು ಸಿನಿಮಾದ ವಿಶೇಷತೆ ಬಗ್ಗೆ ಮುಂದೆ ಓದಿರಿ.(ಅನಂತ್ ನಾಗ್ ಜೊತೆ ಕಳೆದು ಹೋದ ವಿಮರ್ಶಕರು)

  ನೀರಿನ ಕಾಳಜಿಯ 'ಮಾರ್ಚ್‌ 22'

  ನೀರಿನ ಕಾಳಜಿಯ 'ಮಾರ್ಚ್‌ 22'

  ನೀರಿನ ಸಮಸ್ಯೆ ಎಂಬುದು ಪ್ರಪಂಚದಾದ್ಯಂತ ವ್ಯಾಪಿಸಿಕೊಂಡಿದೆ. ಆದ್ದರಿಂ ನೀರಿನ ಜಾಗೃತಿ ಮೂಡಿಸಲೆಂದೇ ಮಾರ್ಚ್‌ 22 ರಂದು ವಿಶ್ವ ಜಲ ದಿನವನ್ನಾಗಿ ಆಚರಿಸಲಾಗುತ್ತಿದೆ. ವಿಶ್ವ ಜಲದಿನವನ್ನೇ ಶೀರ್ಷಿಕೆಯಾಗಿಟ್ಟುಕೊಂಡು ಖ್ಯಾತ ನಿರ್ದೇಶಕ ಕೋಡ್ಲು ರಾಮಕೃಷ್ಣ ರವರು 'ಮಾರ್ಚ್‌ 22' ಎಂಬ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಇದು ಸಂಪೂರ್ಣ ಜಲದ ಬಗ್ಗೆ ಕೇಂದ್ರಿಕರಿಸಿದ ಸಿನಿಮಾ.

  ಅನಂತ್ ಮತ್ತು ಲಕ್ಷ್ಮೀ ವಿಶೇಷ ಪಾತ್ರದಲ್ಲಿ

  ಅನಂತ್ ಮತ್ತು ಲಕ್ಷ್ಮೀ ವಿಶೇಷ ಪಾತ್ರದಲ್ಲಿ

  ಕೋಡ್ಲು ರಾಮಕೃಷ್ಣ ರವರ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಅನಂತನಾಗ್ ಮತ್ತು ಲಕ್ಷ್ಮೀ ರವರು ಕಾಣಿಸಿಕೊಳ್ಳುತ್ತಿದ್ದಾರೆ. 15 ವರ್ಷಗಳ ನಂತರ ಒಂದೇ ಸಿನಿಮಾದಲ್ಲಿ ಈ ಇಬ್ಬರು ಸ್ಟಾರ್‌ ಗಳು ನಟಿಸುತ್ತಿರುವುದು ಇನ್ನೂ ವಿಶೇಷತೆ ಎನಿಸಿದೆ.('ಬೆಳ್ಳಿ ಹೆಜ್ಜೆ': 'ಜೂಲಿ' ಲಕ್ಷ್ಮಿ ಅವರ ಹಳೇ ನೆನಪುಗಳತ್ತ ಒಂದು ಇಣುಕು ನೋಟ)

  ಯೂನಿವರ್ಸಲ್ ಸಬ್ಜೆಕ್ಟ್ ಆಧಾರಿತ ಕಥೆ ಇದಾಗಿದ್ದು, 15 ವರ್ಷಗಳ ಬಳಿಕ ಲಕ್ಷ್ಮೀ ರವರ ಜೊತೆ ನಟಿಸಲು ಅವಕಾಶ ಸಿಕ್ಕಿರುವುದರಿಂದ ಮಿಸ್‌ ಮಾಡಿಕೊಳ್ಳಲು ಇಷ್ಟವಾಗಲಿಲ್ಲ ಎಂದು ಅನಂತನಾಗ್‌ ಹೇಳಿದ್ದಾರೆ.

  15 ವರ್ಷಗಳ ಹಿಂದೆ ಹೊಳೆದಿದ್ದ ಕಥೆ

  15 ವರ್ಷಗಳ ಹಿಂದೆ ಹೊಳೆದಿದ್ದ ಕಥೆ

  ಅಂದಹಾಗೆ ರಾಮಕೃಷ್ಣ ರವರಿಗೆ 'ಮಾರ್ಚ್‌ 22' ಸಿನಿಮಾದ ಕಥೆ ಹೊಳೆದಿದ್ದು 15 ವರ್ಷಗಳ ಹಿಂದೆ. ಆದರೆ ಸಿನಿಮಾ ಮಾಡಲು ಅಂದಿನಿಂದ ಇಲ್ಲಿಯವರೆಗೆ ಯಾರು ಸಹ ನಿರ್ಮಾಣಕ್ಕೆ ಮುಂದೆ ಬಂದಿರಲಿಲ್ಲ. ಆದರೆ ಈಗ ಗಲ್ಫ್‌ನಲ್ಲಿ ನೆಲೆಸಿರುವ ಉದ್ಯಮಿ ಹರೀಶ್ ಶೆರಿಗಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

  ನಟಿ ಮೇಘಶ್ರೀ ಸ್ಟಾರ್‌ ನಟ ನಟಿಯರೊಂದಿಗೆ ಅಭಿನಯ

  ನಟಿ ಮೇಘಶ್ರೀ ಸ್ಟಾರ್‌ ನಟ ನಟಿಯರೊಂದಿಗೆ ಅಭಿನಯ

  ಅನಂತನಾಗ್ ಮತ್ತು ಲಕ್ಷ್ಮೀ ರವರು ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ, ನಟಿ ಮೇಘಶ್ರೀ ರವರು ಕಾಣಿಸಿಕೊಳ್ಳುತ್ತಿದ್ದಾರೆ. ಹಿರಿಯ ನಟ ನಟಿಯರಾದ ಜೈಜಗದೀಶ್, ನಟಿ ವಿನಯಾ ಪ್ರಸಾದ್, ಶರತ್ ಲೋಹಿತಾಶ್ವ, ಪದ್ಮಜಾರಾವ್, ಸಾಧು ಕೋಕಿಲ, ಶಾಂತಾ ಆಚಾರ್ಯ, ದುಬೈ ಸುವರ್ಣಾ, ಆಶಿಷ್ ವಿದ್ಯಾರ್ಥಿ, ಪ್ರಶೋಭಿತ ಮಂಗಳೂರು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ('ಉಪೇಂದ್ರ ಅತೃಪ್ತ ವ್ಯಕ್ತಿ' - ಸಾಧು ಕೋಕಿಲ ಕಾಮೆಂಟ್!)

  ಮಾರ್ಚ್‌ 22 ನಲ್ಲಿ ಹೊಸ ಪರಿಚಯ

  ಮಾರ್ಚ್‌ 22 ನಲ್ಲಿ ಹೊಸ ಪರಿಚಯ

  ಮೇಘಶ್ರೀ, ಆರ್ಯವರ್ಧನ್, ಕಿರಣ್‌ ರಾಜ್, ಚಿದಾನಂದ್ ದುಬೈ, ದೀಪ್ತಿ ಶೆಟ್ಟಿ ಹೊಸ ಕಲಾವಿದರು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

  English summary
  After 15 years Ananthanaag and lakshmi acitng in one movie which is March 22. This movie is directing by Kodlu Ramakrishna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X