ಪಾರ್ವತಮ್ಮ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ, ವದಂತಿ ಹಬ್ಬಿಸಬೇಡಿ: ವೈದ್ಯರ ಸ್ಪಷ್ಟನೆ

By Bharath Kumar

ಕಳೆದ ಕೆಲ ದಿನಗಳಿಂದ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 77 ವರ್ಷದ ಡಾ.ಪಾರ್ವತಮ್ಮ ರಾಜ್ ಕುಮಾರ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಎಂ.ಎಸ್ ರಾಮಯ್ಯ ಆಸ್ಪತ್ರೆಯ ವ್ಯದ್ಯರು ಸ್ಪಷ್ಟಪಡಿಸಿದ್ದಾರೆ.

ಪಾರ್ವತಮ್ಮ ಅವರ ಆರೋಗ್ಯದ ಕುರಿತು ಇಂದು (ಮೇ 27) ಸುದ್ದಿಗೋಷ್ಠಿ ನಡೆಸಿದ ಎಂ.ಎಸ್ ರಾಮಯ್ಯ ಆಸ್ಪತ್ರೆಯ ವ್ಯದ್ಯರು ''ಪಾರ್ವತಮ್ಮ ಅನಾರೋಗ್ಯದ ಬಗ್ಗೆ ವದಂತಿಗಳು ಹಬ್ಬಿಸಬೇಡಿ. ಅವರು ಆರೋಗ್ಯವಾಗಿದ್ದಾರೆ. ನಿನ್ನೆಗಿಂತ ಇಂದು ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ವೆಂಟಿಲೇಟರ್ ಮೂಲಕ ಉಸಿರಾಡುತ್ತಿದ್ದಾರೆ. ಹೆಸರು ಕೇಳಿದ್ರೆ, ಹೇಳಲು ಪ್ರಯತ್ನ ಪಡುತ್ತಿದ್ದಾರೆ. ಬಿ.ಪಿ ಶುಗರ್ ನಾರ್ಮಲ್ ಇದೆ. ಡಯಾಲಿಸಿಸ್ ನಡೆಸಲಾಗುತ್ತಿದೆ'' ಎಂದು ಡಾ.ಸಂಜಯ್ ಕುಲಕರ್ಣಿ ತಿಳಿಸಿದರು.[ಪಾರ್ವತಮ್ಮಗೆ ಮುಂದುವರೆದ ಚಿಕಿತ್ಸೆ: ಪ್ರತಿ 3 ಗಂಟೆಗೊಮ್ಮೆ ಡಯಾಲಿಸಿಸ್]

MS Ramaiah Doctors Talk About Parvathamma Health

ಸುದ್ದಿಗೋಷ್ಠಿಯಲ್ಲಿ ನಟ ರಾಘವೇಂದ್ರ ರಾಜ್ ಕುಮಾರ್ ಕೂಡ ಭಾಗಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಕೇವಲ ವದಂತಿ. ಅಮ್ಮನ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು ಸ್ಪಷ್ಟಪಡಿಸಿದರು.[ಪಾರ್ವತಮ್ಮ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದ ರಾಜ್ ಪುತ್ರರು]

ಉಸಿರಾಟದ ತೊಂದರೆಯಿಂದ ಬಳುತ್ತಿರುವ ಪಾರ್ವತಮ್ಮ ರಾಜ್ ಕುಮಾರ್ ಅವರು ಮೇ 14 ರಂದು ಚಿಕಿತ್ಸೆಗಾಗಿ ಎಂ.ಎಸ್ ರಾಮಯ್ಯ ಆಸ್ಪತ್ರೆ ಸೇರಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

More from Filmibeat

English summary
MS Ramaiah Hospital Doctors Gives Clarity About Dr Parvatamma Rajkumar's health Condition.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X