»   » ಪಾರ್ವತಮ್ಮಗೆ ಮುಂದುವರೆದ ಚಿಕಿತ್ಸೆ: ಪ್ರತಿ 3 ಗಂಟೆಗೊಮ್ಮೆ ಡಯಾಲಿಸಿಸ್

ಪಾರ್ವತಮ್ಮಗೆ ಮುಂದುವರೆದ ಚಿಕಿತ್ಸೆ: ಪ್ರತಿ 3 ಗಂಟೆಗೊಮ್ಮೆ ಡಯಾಲಿಸಿಸ್

Posted By:
Subscribe to Filmibeat Kannada

ಕಳೆದ ಒಂದು ವಾರದಿಂದ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡಾ.ಪಾರ್ವತಮ್ಮ ರಾಜ್ ಕುಮಾರ್ ಅವರ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲವೆಂದು ಎಂ.ಎಸ್ ರಾಮಯ್ಯ ಆಸ್ಪತ್ರೆಯ ವ್ಯದ್ಯರು ಸ್ಪಷ್ಟಪಡಿಸಿದ್ದಾರೆ.[ಪಾರ್ವತಮ್ಮ ರಾಜ್ ಕುಮಾರ್ ಆರೋಗ್ಯ ಸ್ಥಿತಿ ಗಂಭೀರ: ವೈದ್ಯರ ಸ್ಪಷ್ಟನೆ]

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವ ಪಾರ್ವತಮ್ಮ ಅವರು ಸದ್ಯ, ವೆಂಟೀಲೆಟರ್ ಮೂಲಕವೇ ಉಸಿರಾಟ ಮಾಡುತ್ತಿದ್ದಾರೆ. ಯೂರಿನ್ ಔಟ್ ಪುಟ್ ಕಮ್ಮಿಯಿರುವುದರಿಂದ ಅವರಿಗೆ ಡಯಾಲಿಸಿಸ್ ಶುರು ಮಾಡಲಾಗಿದೆ. ಪಾರ್ವತಮ್ಮ ಅವರಿಗೆ ಬಿಪಿ 140, ಕ್ರಿಯೋಟಿನ್ 1.2 ಇದೆ. ಪ್ರತಿ ಮೂರು ಗಂಟೆಗೊಮ್ಮೆ ಡಯಾಲಿಸಿಸ್ ಮಾಡಲಾಗುತ್ತಿದೆ. ನಿನ್ನೆಗೆ ಹೋಲಿಸಿದರೆ ಇಂದು ಯಾವುದೇ ವ್ಯತ್ಯಾಸವಿಲ್ಲ. ಪಾರ್ವತಮ್ಮ ಅವರು ಯಥಾಸ್ಥಿತಿಯಲ್ಲಿದ್ದಾರೆ, ವೆಂಟೀಲೆಟರ್ ನಿಂದ ಹೊರಗಡೆ ಬರುವವರಿಗೂ ಸೇಪ್ ಎಂದು ಹೇಳಲು ಸಾಧ್ಯವಿಲ್ಲ ಎಂದು ಎಂ.ಎಸ್. ಆಸ್ಪತ್ರೆಯ ಹಿರಿಯ ವೈದ್ಯ ಡಾ.ಸಂಜಯ್ ಕುಲಕರ್ಣಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.[ಪಾರ್ವತಮ್ಮ ರಾಜ್ ಕುಮಾರ್ ಆರೋಗ್ಯದಲ್ಲಿ ಮತ್ತೆ ಏರುಪೇರು: ಅವರಿಗೆ ಏನಾಗಿದೆ.?]

Doctors Gives Clarity About Parvathamma Health Condition

ಮೇ 14 ರಂದು ಪಾರ್ವತಮ್ಮ ರಾಜ್ ಕುಮಾರ್ ಅವರು ಆಸ್ಪತ್ರೆ ಸೇರಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಆಸ್ಪತ್ರೆ ಬಳಿ ಡಾ.ರಾಜ್ ಪುತ್ರರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಸೇರಿದಂತೆ ಡಾ.ರಾಜ್ ಕುಟುಂಬಸ್ಥರು ಇದ್ದಾರೆ.[ಪಾರ್ವತಮ್ಮ ಜೊತೆ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್]

English summary
MS Ramaiah Hospital Doctors Gives Clarity About his Mother Parvatamma Rajkumar's health Condition.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada