ಪಾರ್ವತಮ್ಮ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದ ರಾಜ್ ಪುತ್ರರು
ಅನಾರೋಗ್ಯದಿಂದ ಎಂ.ಎಸ್ ರಾಮಯ್ಯ ಆಸ್ಪತ್ರೆ ಸೇರಿರುವ ಪಾರ್ವತಮ್ಮ ರಾಜ್ ಕುಮಾರ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಮಕ್ಕಳಾದ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ತಿಳಿಸಿದರು. ಪಾರ್ವತಮ್ಮ ಅವರ ಆರೋಗ್ಯದ ಬಗ್ಗೆ ಇಂದು (ಮೇ 22) ಸುದ್ದಿಗೋಷ್ಠಿ ನಡೆಸಿದ ರಾಜ್ ಪುತ್ರರು ಅಮ್ಮನ ಆರೋಗ್ಯ ಸ್ಥಿತಿ ಬಗ್ಗೆ ವಿವರಿಸಿದರು.
''ಅಮ್ಮನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಹೆಚ್ಚಿನ ಮಾಹಿತಿ ಇದ್ದರೆ ಖಂಡಿತಾ ನಾವೇ ತಿಳಿಸುತ್ತೇವೆ, ಅಮ್ಮನ ಕಣ್ಣುಗಳು ತುಂಬಾ ಬ್ರೈಟ್ ಆಗಿವೆ, ಅಮ್ಮನೇ ಸ್ವಯಂ ಆಗಿ ಎಕ್ಸ್ ಪ್ರೆಶನ್ಸ್ ಕೊಡಬೇಕು, ಹಾಗೆ ಮಾಡುವಂತೆ ನಾವೇ ಒತ್ತಡ ಹೇರುತ್ತೇವೆ'' ಎಂದು ನಟ ಶಿವರಾಜ್ ಕುಮಾರ್ ತಿಳಿಸಿದ್ದಾರೆ.[ಪಾರ್ವತಮ್ಮಗೆ ಮುಂದುವರೆದ ಚಿಕಿತ್ಸೆ: ಪ್ರತಿ 3 ಗಂಟೆಗೊಮ್ಮೆ ಡಯಾಲಿಸಿಸ್]

''ಮೊದಲ ದಿನಕ್ಕಿಂತ ಅಮ್ಮನ ಆರೋಗ್ಯದ ಚೇತರಿಕೆ ಕಂಡು ಬಂದಿದೆ. ಯಾವುದೇ ಸಂದರ್ಭದಲ್ಲಿ ಏನು ಬೇಕಾದರೂ ಆಗಬಹುದು. ಅದನ್ನ ಊಹಿಸಲು ಸಾಧ್ಯವಿಲ್ಲ, ನಾವು ತುಂಬಾ ಭರವಸೆ ನೀಡಲು ಸಾಧ್ಯವಿಲ್ಲ, ಮಕ್ಕಳಾಗಿ ಅವರಿಗೆ ಉತ್ತಮ ಚಿಕಿತ್ಸೆ ಕೊಡಿಸುತ್ತಿದ್ದೇವೆ. ವೆಂಟಿಲೇಟರ್ ನಿಂದ ಹೊರ ಬರುವವರೆಗೂ ನಿರಂತರ ಚಿಕಿತ್ಸೆ ನೀಡಲಾಗುವುದು'' ಎಂದು ಪಾರ್ವತಮ್ಮ ಪುತ್ರ ರಾಘವೇಂದ್ರ ರಾಜ್ ಕುಮಾರ್ ತಿಳಿಸಿದ್ದಾರೆ.[ಪಾರ್ವತಮ್ಮ ಜೊತೆ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್]

ಇನ್ನು ಪಾರ್ವತಮ್ಮ ಅವರ ಚಿಕಿತ್ಸೆ ಫೋಟೋ ಬಿಡುಗಡೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್ ''ಅಮ್ಮನನ್ನು ಆ ಸ್ಥಿತಿಯಲ್ಲಿ ಜನರು ನೋಡುವುದು ಸರಿಯಲ್ಲಾ, ವಾರ್ಡ್ ಗೆ ಶಿಫ್ಟ್ ಮಾಡಿದಾಗ ನಾವೇ ತೋರಿಸುತ್ತೇವೆ ಎಂದರು.[ಪಾರ್ವತಮ್ಮ ಆರೋಗ್ಯದಲ್ಲಿ ಚೇತರಿಕೆ: ಸುದ್ದಿಗೋಷ್ಠಿಯಲ್ಲಿ ವೈದ್ಯರ ಸ್ಪಷ್ಟನೆ]
ಬಹು ಅಂಗಾಂಗ ವೈಫಲ್ಯ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿರುವ 77 ವರ್ಷದ ಪಾರ್ವತಮ್ಮ ಅವರು, ಕಳೆದ ಒಂದು ವಾರದಿಂದ ಎಂ.ಎಸ್ ರಾಮಯ್ಯ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.[ಅಮ್ಮನ ಆರೋಗ್ಯ ಸ್ಥಿತಿ ವಿವರಿಸಿದ ನಟ ಶಿವರಾಜ್ ಕುಮಾರ್]


Click it and Unblock the Notifications











