ನಟ ನಾಗಭೂಷಣ್ ಕಾರು ಅಪಘಾತ ಪ್ರಕರಣ: ಬಂಧನದ ಬಳಿಕ ಸ್ಟೇಷನ್ ಬೇಲ್.. ಡಿಸಿಪಿ ಹೇಳಿದ್ದೇನು ?

ಸ್ಯಾಂಡಲ್‌ವುಡ್‌ನ ಹಾಸ್ಯ ನಟ ನಾಗಭೂಷಣ್ ಕಾರು ಅಪಘಾತವಾಗಿದೆ. ನಿನ್ನೆ (ಸೆಪ್ಟಬಂರ್ 30) ನಾಗಭೂಷಣ್ ಆರ್‌ಆರ್ ನಗರದಿಂದ ಜೆಪಿ ನಗರದಲ್ಲಿರುವ ತಮ್ಮ ಮನೆಗೆ ಆಗಮಿಸುತ್ತಿದ್ದರು. ಈ ವೇಳೆ ಪಾದಾಚಾರಿಗೆ ದಂಪತಿಗೆ ಡಿಕ್ಕಿ ಹೊಡೆದಿದ್ದರು. ಈ ಘಟನೆಯಲ್ಲಿ ಪತ್ನಿ ಪ್ರೇಮ್ (48) ಸಾವನ್ನಪ್ಪಿದ್ದಾರೆ. ಪತಿ ಕೃಷ್ಣ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಪಘಾತದ ಬಳಿಕ ನಾಗಭೂಷಣ್ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಪೊಲೀಸರಿಗೆ ಶರಣಾಗಿದ್ದಾರೆ. ಈ ಬಗ್ಗೆ ಸಂಚಾರ ವಿಭಾಗದ ದಕ್ಷಿಣದ ಡಿಸಿಪಿ ಶಿವಪ್ರಕಾಶ್ ದೇವರಾಜ್ ಹೇಳಿಕೆ ಕೊಟ್ಟಿದ್ದಾರೆ. ನಾಗಭೂಷಣ್ ಕಾರು ಅಪಘಾತದ ಘಟನೆಯನ್ನು ವಿವರಿಸಿದ್ದಾರೆ.

Nagabhushan Accident case: Actor got station bail Dcp Shivaprakash

ನಿನ್ನೆ (ಸೆಪ್ಟೆಂಬರ್ 30) ರಾತ್ರಿ ಸರಿ ಸುಮಾರು 9.30ಕ್ಕೆ ಉತ್ತರಹಳ್ಳಿಯ ವಸಂತಪುರ ಮುಖ್ಯ ರಸ್ತೆಯಲ್ಲಿ ಅಪಘಾತ ಸಂಭವಿಸಿತ್ತು. ಸಮೀಪದ ಅಪಾರ್ಟ್‌ಮೆಂಟ್ ನಿವಾಸಿಗಳಾದ ಕೃಷ್ಣ ಮತ್ತು ಪ್ರೇಮಾ ದಂಪತಿ ಊಟದ ಬಳಿಕ ವಾಕಿಂಗ್‌ಗೆಂದು ಹೊಸಬಂದಿದ್ದರು. ಈ ವೇಳೆ ನಾಗಭೂಷಣ್ ಕಾರು ಅವರಿಗೆ ಡಿಕ್ಕಿ ಹೊಡೆದು ಅಪಘಾತವಾಗಿದೆ.

"ಅತಿವೇಗ ಮತ್ತು ನಿರ್ಲಕ್ಷ್ಯತೆಯಿಂದ ಕಾರು ಓಡಿಸಿದ್ದೇ ಅಪಘಾತಕ್ಕೆ ಕಾರಣವಾಗಿದೆ. ಅಪಘಾತ ನಡೆದ ಸ್ಥಳದಲ್ಲಿಯೇ ಪ್ರೇಮಾ ಮೃತಪಟ್ಟಿದ್ದಾರೆ. ಇನ್ನು ಕೃಷ್ಣ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರು ಚಾಲಕ ಸಿನಿಮಾ ನಟ ನಾಗಭೂಷಣ್ ಅವರನ್ನು ಬಂಧಿಸಿ ಬಳಿಕ ಸ್ಟೇಷನ್‌ ಬೇಲ್ ನೀಡಿ ಕಳಿಸಲಾಗಿದೆ." ಎಂದು ಡಿಸಿಪಿ ಶಿವಪ್ರಕಾಶ್ ದೇವರಾಜ್ ಹೇಳಿದ್ದಾರೆ.

ಹಾಗೇ "ನಟ ನಾಗಭೂಷಣ್ ಅವರನ್ನು ಮುಂದಿನ ವಿಚಾರಣೆಗೆ ಮತ್ತೆ ಕರೆಯಲಾಗುತ್ತೆ. ಪ್ರಾಥಮಿಕ ತನಿಖೆಯಲ್ಲಿ ಅತಿಯಾದ ವೇಗ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ. ರಾತ್ರಿಯೇ ಆಲ್ಕೊಹಾಲ್ ಟೆಸ್ಟ್ ಮಾಡಲಾಗಿದೆ. ಆದರೆ ಮೀಟರ್‌ನಲ್ಲಿ ಕುಡಿದಿಲ್ಲ ಅನ್ನೋದು ಪತ್ತೆಯಾಗಿದೆ. ಜೊತೆಗೆ ಬ್ಲಡ್ ತೆಗೆದು ಟೆಸ್ಟ್ ಮಾಡಲಾಗಿದ್ದು ಅದರಲ್ಲಿಯೂ ಕುಡಿದಿಲ್ಲ ಅನ್ನೋದು ಪತ್ತೆಯಾಗಿದೆ. ಅಪಘಾತ ಮಾಡಿದ ಬಳಿಕ ಸ್ಥಳೀಯರ ಜೊತೆ ಸೇರಿ ಚಾಲಕ ಅಂದರೆ ನಟ ನಾಗಭೂಷಣ್ ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ" ಸಂಚಾರ ವಿಭಾಗದ ದಕ್ಷಿಣ ವಲಯದ ಡಿಸಿಪಿ ಶಿವಪಕ್ರಾಶ್ ದೇವರಾಜ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

More from Filmibeat

English summary
Nagabhushan Accident case: Actor got station bail Dcp Shivaprakash:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X