»   » ಬಚ್ಚನ್ ಡಬ್ಬಿಂಗ್ ಸೇರಿ ಒಂದೇ ದಿನ 13 ಚಿತ್ರಗಳು ತೆರೆಗೆ!

ಬಚ್ಚನ್ ಡಬ್ಬಿಂಗ್ ಸೇರಿ ಒಂದೇ ದಿನ 13 ಚಿತ್ರಗಳು ತೆರೆಗೆ!

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕನ್ನಡ ಕಿಚ್ಚ ಸುದೀಪ್ ಅಭಿನಯದ ಸೂಪರ್ ಹಿಟ್ ಚಿತ್ರ ಬಚ್ಚನ್ ತಮಿಳಿಗೆ ಡಬ್ಬಿಂಗ್ ಆಗಿರುವುದು ಹೊಸ ವಿಷಯವಲ್ಲ. ಈ ಚಿತ್ರಕ್ಕೆ ಮರತ್ತು ಖೈದಿ ಎಂದು ಹೆಸರಿಡಲಾಗಿದೆ. ಈ ಚಿತ್ರ ಮಾ.6ರಂದು ತಮಿಳುನಾಡಿನಲ್ಲಿ ಬಿಡುಗಡೆಯಾಗುತ್ತಿದೆ. ಇದರ ಜೊತೆಗೆ 12 ಚಿತ್ರಗಳು ಒಂದೇ ದಿನ ತೆರೆ ಕಾಣುತ್ತಿದೆ.

ಮಾ.6 ರಂದು ತಮಿಳು ಚಿತ್ರ ಪ್ರೇಮಿಗಳಿಗೆ ದೊಡ್ಡ ಹಬ್ಬ ಶುಕ್ರವಾರದಂದು 2 ಡಬ್ಬಿಂಗ್ ಚಿತ್ರಗಳು ಸೇರಿ ಸರಿ ಸುಮಾರು 13 ಚಿತ್ರಗಳು ತೆರೆ ಕಾಣುತ್ತಿವೆ. ಇದರಲ್ಲಿ ಕನ್ನಡದ ಲೂಸಿಯಾ ಚಿತ್ರದ ರಿಮೇಕ್ ಚಿತ್ರ ಎನ್ನಕ್ಕುಲ್ ಒರುವನ್ ಕೂಡಾ ಸೇರಿದೆ.

ಇದರ ಜೊತೆಗೆ ಆರ್ ಕೆ ಎನ್ ವಳಿ ಥನಿ ವಳಿ, ಶಾರ್ವಾನಂದ್, ನಿತ್ಯಾ ಮೆನನ್ ಅಭಿನಯದ ಮೈ ಆಟೋಗ್ರಾಫ್ ನಿರ್ದೇಶಕ ಚೇರನ್ ನಿರ್ದೇಶನದ ಎನುಂ ನಂಬನಿನ್ ವಳಕೈ ಪ್ರಮುಖ ಚಿತ್ರಗಳಾಗಿವೆ. [ತಮಿಳು 'ಲೂಸಿಯಾ' ಚಿತ್ರಕ್ಕೆ ಕಮಲ್ ಚಿತ್ರ ಶೀರ್ಷಿಕೆ]

OMG! This Weekend Is All Set To Witness 11 Tamil Movies!

ಇದಲ್ಲದೆ ಸಾಕಷ್ಟು ಲೋ ಬಜೆಟ್ ಚಿತ್ರಗಳು ಹಾಗೂ ಹೀಗೂ ಚಿತ್ರಮಂದಿರಗಳಲ್ಲಿ ಜಾಗ ಪಡೆದುಕೊಂಡಿವೆ. ಮಹಾ ಮಹಾ, ಕನಲ್, ರೊಂಭ ನಲ್ಲವನ್ ಡಾ ನೀ, ಇರುವಂ ಪಾಗಲುಂ, ಥೊಪ್ಪಿ, ಇಂಜಿ ಮುರುಪ್ಪಾ, ಆಯಾ ವಡಾ ಸುತ್ತಾ ಕಥೈ ಸೇರಿದೆ. [ತಮಿಳು ಕಡೆ 'ವಾಲಿ'ದ ರಾಕಿಂಗ್ ಸ್ಟಾರ್ ಯಶ್]

ತಮಿಳುನಾಡಿನಲ್ಲಿ ಸುಮಾರು 1,200 ಚಿತ್ರಮಂದಿರಗಳ ಪೈಕಿ ಸಿದ್ದಾರ್ಥ್ ಹಾಗೂ ದೀಪಾ ಸನ್ನಿಧಿ ಅಭಿನಯದ ಎನ್ನಕ್ಕುಲ್ ಒರುವನ್ ಚಿತ್ರಕ್ಕೆ 300 ಸ್ಕ್ರೀನ್ ಮೀಸಲಾಗಿದೆ. ಹೀಗಾಗಿ 11 ಚಿತ್ರಗಳ ರೇಸಿನಲ್ಲಿ ಯಾವ ಚಿತ್ರ ಗೆಲ್ಲುತ್ತದೆ ಎಂಬುದು ಪ್ರೇಕ್ಷಕರ ಕೈಲಿದೆ.

English summary
Yes, 6th of March 2015(Friday) will witness the release of eleven Tamil films apart from two dubbed movies which would then take the tally to thirteen, making it the first weekend of 2015 with so many releases.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada