»   » ತಮಿಳು ಕಡೆ 'ವಾಲಿ'ದ ರಾಕಿಂಗ್ ಸ್ಟಾರ್ ಯಶ್

ತಮಿಳು ಕಡೆ 'ವಾಲಿ'ದ ರಾಕಿಂಗ್ ಸ್ಟಾರ್ ಯಶ್

Posted By:
Subscribe to Filmibeat Kannada

ನೀವು ಕಾಲಿವುಡ್ ಚಿತ್ರ ಪ್ರಿಯರಾಗಿದ್ದರೆ, 'ವಾಲು' ಸಿನಿಮಾ ಬಗ್ಗೆ ನಿಮಗೆ ಖಂಡಿತ ಗೊತ್ತೇ ಇರುತ್ತೆ. ಕಳೆದ ವರ್ಷದಿಂದ ತಮಿಳು ಸಿನಿ ಅಂಗಳದಲ್ಲಿ ಭರ್ಜರಿಯಾಗಿ ಸಿದ್ಧವಾಗುತ್ತಿರುವ 'ವಾಲು' ಸಿನಿಮಾ ಇದೇ ವರ್ಷದ ಮಾರ್ಚ್ ನಲ್ಲಿ ಅದ್ದೂರಿಯಾಗಿ ತೆರೆಗೆ ಬರಲಿದೆ.

ಯೂಟ್ಯೂಬ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿ, ದಾಖಲೆಯ ಮೊತ್ತಕೆ ಸ್ಯಾಟೆಲೈಟ್ ಹಕ್ಕುಗಳು ಮಾರಾಟವಾಗಿರುವ 'ವಾಲು' ಚಿತ್ರದ ರೀಮೇಕ್ ಹಕ್ಕು ಬಿಡುಗಡೆಯಾಗುವ ಮುನ್ನವೇ ಸೋಲ್ಡ್ ಔಟ್ ಆಗಿದೆ.

Yash roped in to play lead in remake of Simbu's Vaalu

ಇದರಲ್ಲಿ ವಿಶೇಷತೆ ಏನಪ್ಪಾ ಅಂದ್ರೆ, ಹಾಗೆ 'ವಾಲು' ಚಿತ್ರದ ರೀಮೇಕ್ ರೈಟ್ಸ್ ಸೇಲಾಗಿರುವುದು ಕನ್ನಡಕ್ಕೆ! ಗಾಂಧಿನಗರದ ನಿರ್ಮಾಪಕರೊಬ್ಬರು ಅದಾಗಲೇ 'ವಾಲು' ಚಿತ್ರದ ರೀಮೇಕ್ ಹಕ್ಕುಗಳನ್ನ ಪಡೆದುಕೊಂಡು ಬಂದಿದ್ದಾರಂತೆ.

ಮೂಲಗಳ ಪ್ರಕಾರ, ತಮಿಳಿನಲ್ಲಿ ಸಿಂಬು ನಿರ್ವಹಿಸಿರುವ ಪಾತ್ರವನ್ನ ಕನ್ನಡದಲ್ಲಿ ರಾಕಿಂಗ್ ಸ್ಟಾರ್ ಯಶ್ ನಿಭಾಯಿಸಲಿದ್ದಾರಂತೆ. ಹಕ್ಕುಗಳನ್ನ ಹೊತ್ತು ತಂದಿರುವ ನಿರ್ಮಾಪಕರು ಅದಾಗಲೇ ಯಶ್ ಜೊತೆ ಮಾತುಕತೆ ನಡೆಸಿ ಒಪ್ಪಿಸಿದ್ದಾರಂತೆ. [ಇನ್ನೆರಡು ವರ್ಷ ರಾಕಿಂಗ್ ಸ್ಟಾರ್ ಯಶ್ ಫುಲ್ ಬಿಜಿ]

'ಮಾಸ್ಟರ್ ಪೀಸ್' ಮುಗಿದ ನಂತ್ರ ಇನ್ನೂ ಮೂರ್ನಾಕು ಚಿತ್ರಗಳನ್ನ ಓಕೆ ಮಾಡಿರುವ ಯಶ್, 'ವಾಲು' ರೀಮೇಕ್ ಮಾಡುವುದು ಯಾವಾಗ ಅನ್ನುವುದಿನ್ನೂ ಫೈನಲ್ ಆಗಿಲ್ಲ. ಹಾಗೆ, ಅದನ್ನ ಮಾಡೋಕೆ ಹೊರಟಿರುವ ನಿರ್ಮಾಪಕರ ಹೆಸರೂ ಬಹಿರಂಗವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ.

English summary
Vaalu's Kannada remake rights has been sold for a whopping price and Yash is roped in to play the lead in the remake of Simbu's Vaalu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada