ಸೂಪರ್ ಮ್ಯಾನ್ ರೀತಿ ಜಿಗಿಯುತ್ತಾರೆ ಪುನೀತ್: ವೈರಲ್ ಆಯ್ತು ಮತ್ತೊಂದು ವಿಡಿಯೋ

ಕೆಲವು ದಿನಗಳ ಹಿಂದೆ ವರ್ಕೌಟ್ ವಿಡಿಯೋವೊಂದರ ಮೂಲಕ ಅಭಿಮಾನಿಗಳಿಗೆ ಸ್ಫೂರ್ತಿ ನೀಡಿದ್ದ ಪುನೀತ್ ರಾಜ್ ಕುಮಾರ್, ಮತ್ತೊಂದು ವಿಡಿಯೋ ಹಂಚಿಕೊಂಡಿದ್ದಾರೆ.

Recommended Video

ಬೆಳಿಗ್ಗೆ 4:30ಕ್ಕೆ ಶುರುವಾಯ್ತು ಅಪ್ಪು ಪವರ್ ಫುಲ್ ವರ್ಕೌಟ್..! | Puneeth Rajkumar

ಲಾಕ್ ಡೌನ್ ಅವಧಿಯಲ್ಲಿ ಪುನೀತ್ ರಾಜ್ ಕುಮಾರ್, ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ಮುಖ್ಯಮಂತ್ರಿಗಳ ನಿಧಿಗೆ ದೇಣಿಗೆ ನೀಡಿದ್ದ ಅವರು, ಅಭಿಮಾನಿಗಳ ಸಂಘದ ಮೂಲಕ ಜನರಿಗೆ ನೆರವಾಗುವ ಕಾರ್ಯ ಮಾಡುತ್ತಿದ್ದಾರೆ. ಹಾಗೆಯೇ ಅನೇಕ ಜಾಗೃತಿ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ವರ್ಚುವಲ್ ವಿಡಿಯೋ ಮೀಟಿಂಗ್‌ನಲ್ಲಿ ದೇಶ ವಿದೇಶದ ಅಭಿಮಾನಿಗಳ ಜತೆಗೆ ಅವರು ಮಾತುಕತೆ ನಡೆಸಿದ್ದರು. ವಿಶೇಷ ಅಭಿಮಾನಿಯೊಬ್ಬರ ಜತೆ ಅವರ ಮಾತುಕತೆಯ ವಿಡಿಯೋ ವೈರಲ್ ಆಗಿತ್ತು.

ಫಿಟ್ನೆಸ್‌ಗೆ ಗಮನ

ಫಿಟ್ನೆಸ್‌ಗೆ ಗಮನ

ಹಾಗೆಂದು ಅವರು ತಮ್ಮ ಸಿನಿಮಾ ಬದ್ಧತೆಯನ್ನು ಮರೆತಿಲ್ಲ. ತಮ್ಮ ನಟನೆಯ, ನಿರ್ಮಾಣದ ಚಿತ್ರಗಳಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜತೆಗೆ ನಟನಾಗಿ ದೇಹದ ಫಿಟ್ನೆಸ್ ಕಾಪಾಡಿಕೊಳ್ಳುವುದರಲ್ಲಿಯೂ ಬಿಜಿಯಾಗಿದ್ದಾರೆ.

ಪುನೀತ್ ವರ್ಕೌಟ್ ವಿಡಿಯೋ

ಪುನೀತ್ ವರ್ಕೌಟ್ ವಿಡಿಯೋ

ಮನೆಯಲ್ಲಿಯೇ ದೇಹವನ್ನು ದಂಡಿಸುತ್ತಾ ಮೈ ಹುರಿಗಟ್ಟಿಸಿಕೊಳ್ಳುವ ಸಾಹಸ ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ಪುನೀತ್ ತಮ್ಮ ವರ್ಕೌಟ್ ಬಗ್ಗೆ ಹೆಚ್ಚು ಹೇಳಿಕೊಳ್ಳುತ್ತಿರಲಿಲ್ಲ. ಆದರೆ ಅವರ ವರ್ಕೌಟ್ ವಿಡಿಯೋಗಳು ಇತ್ತೀಚೆಗೆ ವೈರಲ್ ಆಗುತ್ತಿವೆ. ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕಾದ ಈ ಸಂದರ್ಭದಲ್ಲಿ ವರ್ಕೌಟ್‌ನ ಮಹತ್ವವನ್ನು ಅವರ ವಿಡಿಯೋಗಳು ತಿಳಿಸುತ್ತಿವೆ.

ಸೂಪರ್ ಮ್ಯಾನ್ ಜಂಪ್

ಸೂಪರ್ ಮ್ಯಾನ್ ಜಂಪ್

ಓವರ್ ಹೆಡ್ ಬರ್ಪಿ, ಸೂಪರ್ ಮ್ಯಾನ್ ಬರ್ಪಿ, ಜಂಪಿಂಗ್ ಟೋ ಟಚಿಂಗ್ ಬರ್ಪಿಯ ಕರಾತಮತ್ತುಗಳನ್ನು ತೋರಿಸುವ 22 ಸೆಕೆಂಡುಗಳ ವಿಡಿಯೋ ರೋಮಾಂಚನ ಮೂಡಿಸುತ್ತದೆ. ಎರಡು ಕೈ ಮತ್ತು ಕಾಲುಗಳನ್ನು ಒಂದೇ ಸಲಕ್ಕೆ ಊರಿ ಸೂಪರ್ ಮ್ಯಾನ್‌ ರೀತಿ ಜಂಪ್ ಮಾಡುವ ವಿಡಿಯೋ ಅಭಿಮಾನಿಗಳಿಗೆ ಮುದ ನೀಡಿದೆ.

ಪುನೀತ್ ದೇಹದ ಚಲನೆ

ಪುನೀತ್ ದೇಹದ ಚಲನೆ

ಅವರ ಜಂಪಿಂಗ್ ಟೋ ಟಚಿಂಗ್ ಚಲನೆಯಂತೂ ಬೆರಗು ಹುಟ್ಟಿಸುತ್ತದೆ. 45ನೇ ವಯಸ್ಸಿನಲ್ಲಿ ಪುನೀತ್ ತಮ್ಮ ದೇಹ ಎಷ್ಟು ಫಿಟ್ ಆಗಿದೆ ಎಂದು ತೋರಿಸಿದ್ದಾರೆ. ಪುನೀತ್ ಅವರ ದೇಹದ ಚಲನೆ ಮತ್ತು ಶಕ್ತಿ ಯುವಕರನ್ನೂ ನಾಚಿಸುವಂತಿದೆ.

More from Filmibeat

English summary
Power Star Puneeth Rajkumar has shared one more workout video of him went viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X