ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನೀಡಿದ ಹೊಸ ಸೂತ್ರ

ನಟ ಪುನೀತ್ ರಾಜ್ ಕುಮಾರ್ ಲಾಕ್ ಡೌನ್ ಅವಧಿಯಲ್ಲಿ ಸಾಕಷ್ಟು ಬದಲಾಗಿದ್ದಾರೆ. ಅದನ್ನು ಅವರು ಸ್ವತಃ ಹೇಳಿಕೊಂಡಿದ್ದಾರೆ. ಅಡುಗೆ ಮಾಡುವುದನ್ನು ಈ ಸಂದರ್ಭದಲ್ಲಿ ಕಲಿತಿದ್ದಾಗಿ, ಅನೇಕ ಸಿನಿಮಾ ಮತ್ತು ವೆಬ್ ಸೀರೀಸ್‌ಗಳನ್ನು ನೋಡಿದ್ದಾಗಿ ಅವರು ತಿಳಿಸಿದ್ದಾರೆ. ಹಾಗೆಯೇ ಅವರ ಲುಕ್ ಕೂಡ ಬದಲಾಗಿದೆ. ಪುನೀತ್ ಅವರ ಕುರುಚಲು ಗಡ್ಡ ಅಭಿಮಾನಿಗಳಿಗೆ ಇಷ್ಟವಾಗಿತ್ತು. ಲಾಕ್ ಡೌನ್ ಅವಧಿಯಲ್ಲಿ ಅವರು ಬಿಟ್ಟ ಗಡ್ಡ ಕಂಡು ಖುಷಿಯಾಗಿದ್ದ ನಿರ್ದೇಶಕ ಸಂತೋಷ್ ಅನಂದ್ ರಾಮ್ 'ಯುವರತ್ನ' ಚಿತ್ರದ ಬಾಕಿ ಉಳಿದಿರುವ ಹಾಡೊಂದಕ್ಕೆ ಆ ಗೆಟಪ್ ಬಳಸಿಕೊಳ್ಳಲು ನಿರ್ಧರಿಸಿದ್ದಾರೆ.

Recommended Video

Kaanadante Maayavadanu Behind The scenes Part 01 | Vikas | Filmibeat Kannada

ಈ ನಡುವೆ ಪುನೀತ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪುನೀತ್ ಎಂದಿಗೂ ಸುದೀರ್ಘ ಬರಹಗಳನ್ನು ಬರೆಯುವುದಿಲ್ಲ. ಒಂದೆರಡು ಸಾಲುಗಳಲ್ಲಿಯೇ ಹೇಳಬೇಕಿರುವುದನ್ನು ಮುಗಿಸುತ್ತಾರೆ. ಉಳಿದ ಕೆಲಸವನ್ನು ಅವರು ಹಾಕಿರುವ ಫೋಟೊ ಅಥವಾ ವಿಡಿಯೋ ವಿವರಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ಪುನೀತ್ ತಮ್ಮ ವರ್ಕೌಟ್ ವಿಡಿಯೋಗಳನ್ನು ಹೆಚ್ಚು ಹೆಚ್ಚು ಹಂಚಿಕೊಳ್ಳುತ್ತಿದ್ದಾರೆ. ಇದು ಅನೇಕರಿಗೆ ಸ್ಫೂರ್ತಿ ನೀಡುತ್ತಿದೆ. ಮುಂದೆ ಓದಿ...

ಸ್ಫೂರ್ತಿಯಾಗುತ್ತಿರುವ ಪುನೀತ್

ಸ್ಫೂರ್ತಿಯಾಗುತ್ತಿರುವ ಪುನೀತ್

ಪುನೀತ್ ರಾಜ್ ಕುಮಾರ್ ಲಾಕ್ ಡೌನ್ ಅವಧಿಯಲ್ಲಿ ಸಿನಿಮಾ ಚಟುವಟಿಕೆಗಳಿಲ್ಲದೆ ಇದ್ದರೂ ತಮ್ಮ ದೇಹದ ಫಿಟ್ನೆಸ್ ಬಗ್ಗೆ ಮೈಮರೆತಿಲ್ಲ. ಮೊದಲಿನಿಂದಲೂ ತಮ್ಮ ದೇಹದ ಆಕಾರವನ್ನು ಆದಷ್ಟು ಒಂದೇ ರೀತಿ ಉಳಿಸಿಕೊಂಡಿರುವ ಪುನೀತ್, ಅದು ಹೆಚ್ಚು ಪ್ಲೆಕ್ಸಿಬಲ್ ಆಗಿರುವಂತೆ ನೋಡಿಕೊಳ್ಳುತ್ತಿದ್ದಾರೆ. ಈ ಮೂಲಕ ಯುವಜನರಿಗೆ ಸ್ಫೂರ್ತಿಯಾಗುತ್ತಿದ್ದಾರೆ.

ವಿಭಿನ್ನ ಕಸರತ್ತುಗಳು

ವಿಭಿನ್ನ ಕಸರತ್ತುಗಳು

ಪ್ರತಿದಿನವೂ ಅವರು ವರ್ಕೌಟ್ ಅಂತೂ ಮಿಸ್ ಮಾಡುವುದಿಲ್ಲ. ಅದೂ ಎಂತೆಂತಹ ವರ್ಕೌಟ್? ಹೆಚ್ಚಿನ ನಟರಂತೆ ಪುನೀತ್ ಓಡುವ, ಭಾರ ಎತ್ತುವ ವಿಡಿಯೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದಿಲ್ಲ. ಅವರ ಹೆಚ್ಚಿನ ವಿಡಿಯೋಗಳು ಹಾರುವ, ಜಿಗಿಯುವ ಕಸರತ್ತುಗಳನ್ನು ತೋರಿಸುತ್ತದೆ. ಅದು 45ನೇ ವಯಸ್ಸಿನಲ್ಲಿಯೂ ಹೀಗೆಲ್ಲ ಮಾಡಲು ಸಾಧ್ಯವೇ ಎಂದು ಬೆರಗು ಮೂಡಿಸುತ್ತದೆ.

ದಿನ ವ್ಯರ್ಥ ಮಾಡಿದಂತೆ

ಪುನೀತ್ ಬುಧವಾರ ಮತ್ತೊಂದು ವರ್ಕೌಟ್ ವಿಡಿಯೋ ಶೇರ್ ಮಾಡಿದ್ದಾರೆ. ಇದು ಕೂಡ ಅವರ ಫಿಟ್ನೆಸ್ ತಾಕತ್ತಿನ ಕುರಿತು ಅಚ್ಚರಿ ಉಂಟುಮಾಡುತ್ತದೆ. ಈ ವಿಡಿಯೋದ ಜತೆಗೆ ಪುನೀತ್ ಬದುಕಿನ ವಿಶೇಷ ಸೂತ್ರವನ್ನು ಹಂಚಿಕೊಂಡಿದ್ದಾರೆ. 'ವರ್ಕೌಟ್ ಮಾಡದೆ ಇರುವ ದಿನ ಒಂದು ದಿನವನ್ನು ವ್ಯರ್ಥ ಮಾಡಿದಂತೆ' ಎಂಬ ಸಾಲನ್ನು ಪುನೀತ್ ಹೇಳಿದ್ದಾರೆ. ಇದು ಖ್ಯಾತ ಹಾಸ್ಯ ಕಲಾವಿದ ಚಾರ್ಲಿ ಚಾಪ್ಲಿನ್ ಅವರ 'ನಗದೆ ಇರುವ ದಿನ ಒಂದು ದಿನವನ್ನು ವ್ಯರ್ಥ ಮಾಡಿದಂತೆ' ಎಂಬ ಹೇಳಿಕೆಯಿಂದ ಪ್ರೇರಣೆ ಪಡೆದುಕೊಂಡಿದೆ.

ಸ್ಟೇ ಫಿಟ್, ಸ್ಟೇ ಹೆಲ್ದಿ

ಕೆಲವು ದಿನಗಳ ಹಿಂದಷ್ಟೇ ಪುನೀತ್ ಮತ್ತೊಂದು ವರ್ಕೌಟ್ ವಿಡಿಯೋ ಶೇರ್ ಮಾಡಿದ್ದರು. ಈ ವಿಡಿಯೋ ಕೂಡ ವೈರಲ್ ಆಗಿತ್ತು. ಅದರಲ್ಲಿಯೂ ಪುನೀತ್ ತಮ್ಮ ವಿಶೇಷ ಕಸರತ್ತಿನ ಸಾಮರ್ಥ್ಯವನ್ನು ಪ್ರದರ್ಶಿಸಿದ್ದರು. ವರ್ಕೌಟ್ ಮಾಡಿ. ಫಿಟ್ ಆಗಿರಿ, ಆರೋಗ್ಯವಂತರಾಗಿರಿ ಎಂದು ಪುನೀತ್ ಸಲಹೆ ನೀಡಿದ್ದರು.

More from Filmibeat

English summary
A day without workout is a day wasted, Power Star Puneeth Rajkumar has shared his fitness manthra.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X