ಡೈನಾಮಿಕ್ ಪ್ರಿನ್ಸ್ 40ನೇ ಸಿನಿಮಾ ಅನೌನ್ಸ್: 'ಅಂಬಿ ನಿಂಗೆ ವಯಸಾಯ್ತೋ' ನಿರ್ದೇಶಕ ಆಕ್ಷನ್ ಕಟ್
ನವರಾತ್ರಿ ಆರಂಭ ಆಗಿದೆ. ಈ ಶುಭ ಸಮಾರಂಭದಂದು ಸಿನಿಮಾ ಮಂದಿ ಫುಲ್ ಆಕ್ಟೀವ್ ಆಗುತ್ತಾರೆ. ಹೊಸ ಹೊಸ ಸಿನಿಮಾಗಳನ್ನು ಅನೌನ್ಸ್ ಮಾಡುತ್ತಾರೆ. ಕೆಲವು ಸಿನಿಮಾ ಶೂಟಿಂಗ್ ಶುರು ಮಾಡುತ್ತಾರೆ. ಸ್ಯಾಂಡಲ್‌ವುಡ್ ಮಂದಿನೂ ನವರಾತ್ರಿಗೆ ಸಿನಿಮಾ ಹೊಸ ಸಿನಿಮಾಗಳನ್ನು ಘೋಷಣೆ ಮಾಡುತ್ತಾರೆ.
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ 40ನೇ ಸಿನಿಮಾ ನವರಾತ್ರಿಯ ಮೊದಲ ದಿನ ಅನೌನ್ಸ್ ಆಗಿದೆ. ಈಗಾಗಲೇ ರಿಲೀಸ್ ಆಗಿರೋ ಪೋಸ್ಟರ್ ಇಂಪ್ರೆಸಿವ್ ಆಗಿದೆ. ಈ ಹಿಂದೆ ಬಂದ ಪ್ರಜ್ವಲ್ ಸಿನಿಮಾಗಳಿಗೆ ಹೋಲಿಸಿದರೆ, ಈ ಸಿನಿಮಾ ವಿಭಿನ್ನ ಅನ್ನೋದು ಗೊತ್ತಾಗುತ್ತಿದೆ.

ಪ್ರಜ್ವಲ್ ದೇವರಾಜ್ ಬಳಿ ಕೈ ತುಂಬಾ ಸಿನಿಮಾಗಳಿವೆ. ಈಗಾಗಲೇ 'ಮಾಫಿಯಾ' ಸೇರಿದಂತೆ ಇನ್ನೂ ಹೆಸರಿಡದ ಎರಡು ಸಿನಿಮಾಗಳ ಕೆಲಸ ನಡೆಯುತ್ತಿವೆ. ಇದರ ಜೊತೆಗೆ 40ನೇ ಸಿನಿಮಾ ಕೂಡ ಅನೌನ್ಸ್ ಆಗಿದೆ. ಸದ್ಯಕ್ಕೆ ಇನ್ನೂ ಸಿನಿಮಾದ ಟೈಟಲ್ ಫೈನಲ್ ಆಗಿಲ್ಲ. ಕೇವಲ ಪೋಸ್ಟರ್ ಮೂಲಕವೇ ಸಿನಿಪ್ರಿಯರ ಗಮನ ಸೆಳೆಯುವುದಕ್ಕೆ ಚಿತ್ರತಂಡ ಸಜ್ಜಾಗಿದೆ.
ಸಿನಿಮಾ ತಂಡದ ಪ್ರಕಾರ, ಇದು ಪ್ರಜ್ವಲ್ ದೇವರಾಜ್ ಸಿನಿ ಜೀವನದಲ್ಲೇ ಇದೊಂದು ವಿಭಿನ್ನವಾದ ಸಿನಿಮಾ. ಇದೂವರೆಗೂ ಡೈನಾಮಿಕ್ ಪ್ರಿನ್ಸ್ ಕಾಣಿಸಿಕೊಳ್ಳದೆ ಇರುವ ಪಾತ್ರದಲ್ಲಿ ನಟಿಸುತ್ತಿರೋದು ವಿಶೇಷ. ಈ ಸಿನಿಮಾದ ಮತ್ತೊಂದು ವಿಶೇಷ ಅಂದರೆ, ರೆಬೆಲ್ ಸ್ಟಾರ್ ಅಂಬರೀಶ್ ನಟಿಸಿದ್ದ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾವನ್ನು ನಿರ್ದೇಶಿಸಿದ್ದ ಗುರುದತ್ ಗಾಣಿಗ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಅಂದ್ಹಾಗೆ, ಇದು ಗುರುದತ್ ನಿರ್ದೇಶನದ 2ನೇ ಸಿನಿಮಾ. 2018ರಲ್ಲಿ 'ಅಂಬಿ ನಿಂಗೆ ವಯಸಾಯ್ತೋ' ಸಿನಿಮಾ ರಿಲೀಸ್ ಆಗಿತ್ತು. ಆ ಬಳಿಕ ಗುರುದತ್ ಹೊಸ ಸಿನಿಮಾಗೆ ಆಕ್ಷನ್ ಕಟ್ ಹೇಳಿರಲಿಲ್ಲ. ಮೊದಲ ಸಿನಿಮಾದಲ್ಲೇ ರೆಬಲ್ ಸ್ಟಾರ್ ಅಂಬರೀಶ್, ಕಿಚ್ಚ ಸುದೀಪ್, ಸುಹಾಸಿನಿ ಅಂತಹ ಸ್ಟಾರ್‌ಗಳಿಗೆ ಆಕ್ಷನ್ ಕಟ್ ಹೇಳಿದ್ದರು. ಈ ತಮ್ಮ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಕೆರಳಿಸಿದ್ದಾರೆ.
ಮತ್ತೊಂದು ಕರಾವಳಿ ಭಾಗದ ಕಥೆಯನ್ನು ತೆರೆಮೇಲೆ ತರುವುದಕ್ಕೆ ಗುರುದತ್ ಗಾಣಿಗ ಹೊರಟಿದ್ದಾರೆ. ಪೋಸ್ಟರ್ ಹೇಳುವಂತೆ ಇದು ಕಂಬಳದ ಮೇಲಿರುವ ಕಥೆ ಎಂಬುದು ಸ್ಪಷ್ಟವಾಗುತ್ತೆ. ಈ ಸಿನಿಮಾವನ್ನು ವಿಕೆ ಫಿಲ್ಮ್ಸ್ ಜೊತೆ ಸೇರಿ ಗುರುದತ್ ಗಾಣಿಗ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾಗೆ ಸಚಿನ್ ಬಸ್ರೂರು ಸಂಗೀತ ನೀಡುತ್ತಿದ್ದಾರೆ. ಅಭಿಮನ್ಯು ಸದಾನಂದ್ ಕ್ಯಾಮರಾ ಕೈ ಚಳಕವಿದೆ. ಸದ್ಯದಲ್ಲೇ ಟೈಟಲ್, ಟೀಸರ್ ಮೂಲಕ ಟೈಟಲ್ ಅನೌನ್ಸ್ ಮಾಡುವ ಸಾಧ್ಯತೆಯಿದೆ.


Click it and Unblock the Notifications











