twitter
    For Quick Alerts
    ALLOW NOTIFICATIONS  
    For Daily Alerts

    2 ಹೆಲಿಕಾಪ್ಟರ್, ಪಟಾಕಿ, 10 ಜೆಸಿಬಿ, ಪೋಸ್ಟರ್, ಫ್ಲೆಕ್ಸ್‌ಗಳಿಗೆ ಅಪ್ಪು ಫ್ಯಾನ್ಸ್ ಖರ್ಚು ಮಾಡಿದ್ದೆಷ್ಟು?

    |

    ಪವರ್‌ಸ್ಟಾರ್ ಅಭಿಮಾನಿಗಳಿಗೆ 'ಜೇಮ್ಸ್' ಪ್ರತಿಷ್ಟೆಯ ಸಿನಿಮಾ. ಪುನೀತ್ ಅಭಿನಯದ ಕೊನೆಯ ಸಿನಿಮಾವನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲೇಬೇಕು ಅಂತ ಪಣತೊಟ್ಟು ನಿಂತಿದ್ದಾರೆ. ಈ ಕಾರಣಕ್ಕೆ ಕರ್ನಾಟಕದಲ್ಲಿರುವ ಅಪ್ಪು ಅಭಿಮಾನಿಗಳೇ ಸೇರಿಕೊಂಡು 'ಜೇಮ್ಸ್' ಜಾತ್ರೆ ಮಾಡುವುದಕ್ಕೆ ಸಿದ್ಧರಾಗಿದ್ದಾರೆ. ಮಾರ್ಚ್ 16ರ ರಾತ್ರಿಯಿಂದ ಹಿಡಿದು ಮಾರ್ಚ್ 20ರವರೆಗೆ ನೂರೆಂಟು ಪ್ಲ್ಯಾನ್‌ಗಳನ್ನು ಮಾಡಿಕೊಂಡಿದ್ದಾರೆ.

    'ಜೇಮ್ಸ್' ಜಾತ್ರೆಗೆ ಪುನೀತ್ ಅಭಿಮಾನಿಗಳು ಕಮ್ಮಿ ಅಂದ್ರೂ 30 ರಿಂದ 35 ಲಕ್ಷ ರೂಪಾಯಿ ಹಣವನ್ನು ಖರ್ಚು ಮಾಡುತ್ತಿದ್ದಾರೆ. ಇಷ್ಟು ದೊಡ್ಡ ಮೊತ್ತದ ಹಣವನ್ನು ಯಾರಿಂದಲೂ ಪಡೆದಿಲ್ಲ. ಕೇವಲ ಅಭಿಮಾನಿಗಳೇ ಸೇರಿಕೊಂಡು ಹಣ ಒಟ್ಟು ಮಾಡಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಎರಡು ಹೆಲಿಕಾಪ್ಟರ್‌ನಿಂದ ಹಿಡಿದು ಚಿತ್ರಮಂದಿರದ ಮುಂದೆ ಸೆಲೆಬ್ರೆಷನ್, ಮರೆವಣಿಗೆ, ಊಟದ ವ್ಯವಸ್ಥೆ ಎಲ್ಲದರ ಖರ್ಚು ಮಾಡುತ್ತಿರುವುದು ಪುನೀತ್ ಅಭಿಮಾನಿಗಳೇ. ಹಾಗಿದ್ದರೆ, ಪುನೀತ್ ಫ್ಯಾನ್ಸ್ ಯಾವುದಕ್ಕೆ ಎಷ್ಟೆಷ್ಟು ಹಣ ಖರ್ಚು ಮಾಡುತ್ತಿದ್ದಾರೆ. ಅನ್ನುವುದರ ಡಿಟೈಲ್ಸ್ ತಿಳಿಯಲು ಮುಂದೆ ಓದಿ.

    ವಿಶ್ವದಾದ್ಯಂತ 4 ಸಾವಿರ ಸ್ಕ್ರೀನ್‌ಗಳಲ್ಲಿ 'ಜೇಮ್ಸ್' ಜಾತ್ರೆ: ಚಿತ್ರಮಂದಿರದ ಮುಂದೆ ಹೇಗಿದೆ ಸಂಭ್ರಮ?ವಿಶ್ವದಾದ್ಯಂತ 4 ಸಾವಿರ ಸ್ಕ್ರೀನ್‌ಗಳಲ್ಲಿ 'ಜೇಮ್ಸ್' ಜಾತ್ರೆ: ಚಿತ್ರಮಂದಿರದ ಮುಂದೆ ಹೇಗಿದೆ ಸಂಭ್ರಮ?

     2 ಹೆಲಿಕಾಪ್ಟರ್‌ಗೆ ಮಾಡಿದ ಖರ್ಚು ಎಷ್ಟು?

    2 ಹೆಲಿಕಾಪ್ಟರ್‌ಗೆ ಮಾಡಿದ ಖರ್ಚು ಎಷ್ಟು?

    ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು 'ಜೇಮ್ಸ್' ಸಿನಿಮಾ ಬಿಡುಗಡೆ ಹಾಗೂ ಅಪ್ಪು ಹುಟ್ಟುಹಬ್ಬದ ಅಂಗವಾಗಿ ಎರಡು ಹೆಲಿಕಾಪ್ಟರ್‌ಗಳನ್ನು ಬುಕ್ ಮಾಡಿದ್ದಾರೆ. ಈ ಹೆಲಿಕಾಪ್ಟರ್ ಮೂಲಕ ವೀರೇಶ್ ಚಿತ್ರಮಂದಿರ, ಪ್ರಸನ್ನ ಹಾಗೂ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ವೀರೇಶ್ ಹಾಗೂ ಪ್ರಸನ್ನ ಚಿತ್ರಮಂದಿರಕ್ಕೆ ಒಂದು ಹೆಲಿಕಾಪ್ಟರ್ ಹಾಗೂ ಕಂಠೀರವ ಸ್ಟುಡಿಯೋ ಮತ್ತೊಂದು ಹೆಲಿಕಾಪ್ಟರ್ ಮೂಲಕ ಹೂವಿನ ಮಳೆಯನ್ನು ಸುರಿಸಲಿದ್ದಾರೆ. ಈ ಎರಡು ಚಾಪರ್‌ಗಳಿಗೆ ಅಭಿಮಾನಿಗಳು 7 ರಿಂದ 8 ಲಕ್ಷ ರೂಪಾಯಿ ಹಣವನ್ನು ಖರ್ಚು ಮಾಡುತ್ತಿದ್ದಾರಂತೆ.

    ಕೋಟಿ, ಕೋಟಿ ಆಫರ್ ಬಿಟ್ಟ 'ಜೇಮ್ಸ್' ನಿರ್ಮಾಪಕ!ಕೋಟಿ, ಕೋಟಿ ಆಫರ್ ಬಿಟ್ಟ 'ಜೇಮ್ಸ್' ನಿರ್ಮಾಪಕ!

     ಫ್ಲೆಕ್ಸ್- ಪೋಸ್ಟರ್‌ಗಳಿಗೆ ಎಷ್ಟು ಹಣ?

    ಫ್ಲೆಕ್ಸ್- ಪೋಸ್ಟರ್‌ಗಳಿಗೆ ಎಷ್ಟು ಹಣ?

    'ಜೇಮ್ಸ್' ಸಿನಿಮಾಗೆ ಹಾಗೂ ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಕರ್ನಾಟಕದಾದ್ಯಂತ ಫ್ಲೆಕ್ಸ್ ಹಾಗೂ ಪೋಸ್ಟರ್‌ಗಳನ್ನು ಹಾಕಲಿದ್ದಾರೆ. ಈ ಫ್ಲೆಕ್ಸ್ ಹಾಗೂ ಪೋಸ್ಟರ್‌ಗಳಿಗೆ ಎಂಟು ಲಕ್ಷ ಖರ್ಚಾಗಿದೆ. ಇದರಲ್ಲಿ 3 ಸಾವಿರದಷ್ಟು 'ಹ್ಯಾಪಿ ಬರ್ತ್‌ಡೇ ಅಪ್ಪು' ಎನ್ನುವ ಪೋಸ್ಟರ್ ಅನ್ನು ರಿಲೀಸ್ ಮಾಡಲಿದ್ದಾರೆ. ಇದಕ್ಕಾಗುವ ಸಂಪೂರ್ಣ ಹಣವನ್ನು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳೇ ಮಾಡುತ್ತಿದ್ದಾರೆ.

     4 ದಿನವೂ ಪಟಾಕಿ ಸದ್ದು

    4 ದಿನವೂ ಪಟಾಕಿ ಸದ್ದು

    'ಜೇಮ್ಸ್' ಬಿಡುಗಡೆಯಾಗುತ್ತಿರುವ ವೀರೇಶ್‌ ಚಿತ್ರಮಂದಿರ. ಪ್ರಸನ್ನ ಚಿತ್ರಮಂದಿರ ಹಾಗೂ ಮತ್ತೂ ಕೆಲವೆಡೆ ನಾಲ್ಕು ದಿನ ಪ್ರತಿ ಶೋಗಳಿಗೂ ಪಟಾಕಿ ಸಿಡಿಸಲು ನಿರ್ಧರಿಸಿದ್ದಾರೆ. ಅಭಿಮಾನಿಗಳ ಲೆಕ್ಕಾಚಾರದ ಪ್ರಕಾರ ಪಟಾಕಿಗೆ ಅಂತ ಸುಮಾರು 2 ಲಕ್ಷ ಖರ್ಚು ಮಾಡಲಾಗಿದೆ. ಈಗಾಗಲೇ ಪಟಾಕಿ ಖರೀದಿ ಕೂಡ ಆಗಿದೆ ಎನ್ನಲಾಗಿದೆ. ಇದರೊಂದಿಗೆ ನಾಲ್ಕು ದಿನವೂ ವೀರೇಶ್ ಚಿತ್ರಮಂದಿರದಲ್ಲಿ ಸಿಹಿ ಹಂಚಲಿದ್ದಾರೆ. ಇದರೊಂದಿಗೆ ಕೆಲವೆಡೆ ನಾಲ್ಕು ಶೋಗಳಿಗೆ ಊಟದ ವ್ಯವಸ್ಥೆ ಮಾಡಿದೆ ಚಿತ್ರತಂಡ.

    ಶಿವರಾಜ್ ಕುಮಾರ್ 'ವೇದ' ಚಿತ್ರದಲ್ಲಿ ಪುನೀತ್‌ ರಾಜ್‌ಕುಮಾರ್!
     ಪಲ್ಲಕ್ಕಿ ಮೆರವಣಿಗೆಗೆ 10 ಜೆಸಿಬಿ

    ಪಲ್ಲಕ್ಕಿ ಮೆರವಣಿಗೆಗೆ 10 ಜೆಸಿಬಿ

    ಮಾರ್ಚ್ 20ರಂದು ಭಾನುವಾರ ಬೆಂಗಳೂರಿನ ರಾಜಾಜಿನಗರದ 6ನೇ ಹಂತದಿಂದ ವೀರೇಶ್ ಚಿತ್ರಮಂದಿರದವರೆಗ ಬೃಹತ್ ಮೆರವಣಿಗೆ ಹಮ್ಮಿಕೊಂಡಿದ್ದಾರೆ. ಹೂವಿನ ಪಲ್ಲಕ್ಕಿ ಮೂಲಕ ಅಪ್ಪು ಭಾವಚಿತ್ರ ಹಿಡಿದು ಸಾವಿರಾರು ಅಭಿಮಾನಿಗಳು ಭಾಗವಹಿಸಲಿದ್ದಾರೆ. ಮೆರವಣಿಗೆ ಹಾದು ಹೋಗುವ ದಾರಿಯಲ್ಲಿ, ಟೋಲ್‌ಗೇಟ್ ಬಳಿಕ 10 ಜೆಸಿಬಿಗಳ ಮೂಲಕ ಅಪ್ಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ವೀರೇಶ್ ಚಿತ್ರಮಂದಿರದಲ್ಲಿ 30 ಕಟೌಟ್ ನಿಲ್ಲಿಸಿಲಿದ್ದು, ಇದರಲ್ಲಿ 'ಜೇಮ್ಸ್' ಕಟೌಟ್ ಎಲ್ಲದಕ್ಕಿಂತ ಎತ್ತರದಲ್ಲಿರುತ್ತೆ. ಈ ಎಲ್ಲಾ ಕಾರ್ಯಕ್ರಮಕ್ಕೆ ಪುನೀತ್ ಅಭಿಮಾನಿಗಳು ತಮ್ಮ ಸ್ವಂತ ಹಣವನ್ನು ವಿನಿಯೋಗಿಸುತ್ತಿದ್ದಾರೆ.

    English summary
    Puneeth Fans spending own money of 30-35 lakhs to celebrate James Movie. They are celebrating 4 days from March 17th.
    Tuesday, March 8, 2022, 16:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X