For Quick Alerts
  ALLOW NOTIFICATIONS  
  For Daily Alerts

  'ದಿಯಾ' ಹೀರೋ ಪೃಥ್ವಿ ಅಂಬಾರ್‌ಗೆ ಪುನೀತ್ ರಾಜ್ ಕುಮಾರ್ ನೀಡಿದ ಅಚ್ಚರಿ

  |

  'ದಿಯಾ' ಚಿತ್ರದ ಮೂಲಕ ಸಿನಿಮಾ ರಸಿಕರಿಗೆ ಮತ್ತಷ್ಟು ಹತ್ತಿರವಾದವರು ಕರಾವಳಿ ಪ್ರತಿಭೆ ಪೃಥ್ವಿ ಅಂಬಾರ್. 'ದಿಯಾ'ದ ಗೆಲುವಿನ ಬೆನ್ನಲ್ಲೇ ಅವರಿಗೆ ಅನೇಕ ಅವಕಾಶಗಳು ಅರಸಿ ಬರುತ್ತಿವೆ. 'ರಾಧಾ ಕಲ್ಯಾಣ', 'ಸಾಗರ ಸಂಗಮ', 'ಲವಲವಿಕೆ' ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದ ಅವರು, ಕೆಲವು ಸಿನಿಮಾಗಳಲ್ಲಿ ಕೂಡ ಅಭಿನಯಿಸಿದ್ದರು.

  ನಟಿ ಪ್ರಣೀತಾ ಸುಭಾಷ್ ಮತ್ತೊಮ್ಮೆ ಬಡವರ ಹಸಿವಿಗೆ ಸ್ಪಂದಿಸಿದ್ದು ಹೀಗೆ | Oneindia Kannada

  ಅವರ ವೃತ್ತಿ ಜೀವನಕ್ಕೆ ತಿರುವು ನೀಡಿದ್ದು 'ಪಿಲಿಬೈಲ್ ಯಮುನಕ್ಕ' ಎಂಬ ತುಳು ಸಿನಿಮಾ. ಕೇರಳದ ಕಾಸರಗೋಡಿನ ಉಪ್ಪಳದವರಾದ ಅವರು, ಕರಾವಳಿಗರಿಗೆ ಹಾಗೂ ಟೆಲಿವಿಷನ್ ವೀಕ್ಷಕರಿಗೆ ಪರಿಚಿತರಾಗಿದ್ದರೂ, ಜನಪ್ರಿಯತೆ ತಂದುಕೊಟ್ಟಿದ್ದು 'ದಿಯಾ' ಸಿನಿಮಾ. ಈ ಚಿತ್ರ ಫೆಬ್ರವರಿ ತಿಂಗಳಲ್ಲಿ ಬಿಡುಗಡೆಯಾಗಿತ್ತು. ಉತ್ತಮ ವಿಮರ್ಶೆ ವ್ಯಕ್ತವಾದರೂ ಚಿತ್ರರಂಗದಲ್ಲಿ ಉಳಿದುಕೊಳ್ಳಲು ಸಾಧ್ಯವಾಗಲಿಲ್ಲ. ಓಟಿಟಿ ಮೂಲಕ ಬಿಡುಗಡೆಯಾದ ಚಿತ್ರ ಬಳಿಕ ಜನರ ಮನಗೆದ್ದಿತು. ಈಗ ಪೃಥ್ವಿ ಅಂಬಾರ್ ಅವರಿಗೆ ಸಾಲು ಸಾಲು ಅವಕಾಶಗಳು ಎದುರಾಗುತ್ತಿವೆ. ಮುಂದೆ ಓದಿ...

  ರೋಮ್ಯಾಂಟಿಕ್ ಮೂಡ್ ನಲ್ಲಿ 'ದಿಯಾ' ಸಿನಿಮಾದ ಹೀರೋ ಆದಿ

  ಊರಲ್ಲಿರುವ ಪೃಥ್ವಿ

  ಊರಲ್ಲಿರುವ ಪೃಥ್ವಿ

  ಲಾಕ್ ಡೌನ್ ನಡುವೆ ಆರಂಭದಲ್ಲಿಯೇ ಹಾಗೂ ಹೀಗೂ ಬೆಂಗಳೂರಿಂದ ಹೊರಟು ಪೃಥ್ವಿ, ಕಾಸರಗೋಡಿನ ಉಪ್ಪಳದಲ್ಲಿನ ತಮ್ಮ ಮನೆ ಸೇರಿಕೊಂಡಿದ್ದರು. ಅಲ್ಲಿಂದಲೇ ತಮ್ಮ ಸಿನಿಮಾದ ಯಶಸ್ಸಿನ ಖುಷಿಯನ್ನು ಸಂಭ್ರಮಿಸುತ್ತಿದ್ದರು.

  ಪೃಥ್ವಿ ನಟನೆ ಅದ್ಭುತ

  ಪೃಥ್ವಿ ನಟನೆ ಅದ್ಭುತ

  ಈ ನಡುವೆ ಪೃಥ್ವಿ ಅಂಬಾರ್ ಅವರಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಊಹಿಸಲಾಗದ ಅಚ್ಚರಿಯೊಂದನ್ನು ನೀಡಿದ್ದಾರೆ. 'ದಿಯಾ' ಸಿನಿಮಾ ಮತ್ತು ಅದರಲ್ಲಿನ ಪೃಥ್ವಿ ಅಭಿನಯವನ್ನು ಕೊಂಡಾಡಿದ್ದಾರೆ. ನೀವು ಬಹಳ ಅದ್ಭುತವಾಗಿ ನಟಿಸಿದ್ದೀರಿ ಎಂದು ಹೇಳಿದ್ದಾರೆ.

  ನಮ್ಮ ಸಿನಿಮಾದಲ್ಲಿ ಪಾತ್ರ

  ನಮ್ಮ ಸಿನಿಮಾದಲ್ಲಿ ಪಾತ್ರ

  ಇಷ್ಟೇ ಅಲ್ಲ ತಮ್ಮ ನಿರ್ಮಾಣದ ಸಿನಿಮಾದಲ್ಲಿ ಅವಕಾಶ ನೀಡುವ ಭರವಸೆಯನ್ನೂ ಸ್ವತಃ ನೀಡಿದ್ದಾರೆ. ಕೊರೊನಾ ಹಾವಳಿ ಮುಗಿದ ಬಳಿಕ ಬೆಂಗಳೂರಿಗೆ ಬನ್ನಿ. ಭೇಟಿಯಾಗಿ ಮಾತನಾಡೋಣ. ನಮ್ಮ ಪ್ರಾಜೆಕ್ಟ್‌ಗಳಲ್ಲಿ ನಿಮಗೆ ಒಂದು ಪಾತ್ರ ಇರುತ್ತದೆ ಎಂದು ಆಹ್ವಾನ ನೀಡಿದ್ದಾರಂತೆ.

  ‍ಖುಷಿಗೆ ಪಾರವೇ ಇಲ್ಲ: 'ದಿಯಾ' ನಾಯಕಿಯ ವಿಶೇಷ ಸಂದರ್ಶನ‍ಖುಷಿಗೆ ಪಾರವೇ ಇಲ್ಲ: 'ದಿಯಾ' ನಾಯಕಿಯ ವಿಶೇಷ ಸಂದರ್ಶನ

  ಮಾತುಗಳೇ ಹೊರಡಲಿಲ್ಲ

  ಮಾತುಗಳೇ ಹೊರಡಲಿಲ್ಲ

  ಪುನೀತ್ ಅವರ ಫೋನ್ ಕರೆ ಕಂಡು ಪೃಥ್ವಿ ಮೂಕವಿಸ್ಮಿತರಾಗಿದ್ದಾರೆ. ಇದೊಂದು ನಂಬಲಾರದ ಸನ್ನಿವೇಶ. ಅವರ ನೃತ್ಯ, ಸಾಹಸಗಳನ್ನು ನೋಡಿ ಅನುಕರಣೆ ಮಾಡುತ್ತಾ ಬೆಳೆದು ಬಂದವನು ನಾನು. ಅವರೇ ಸಾಕ್ಷಾತ್ ಕರೆ ಮಾಡಿದಾಗ ಮಾತುಗಳೇ ಹೊರಡಲಿಲ್ಲ ಶಬ್ಧಗಳಿಂದ ವಿವರಿಸಲಾಗದ ಅದ್ಭುತ ಗಳಿಗೆಯದು ಎಂದು ಹೇಳಿಕೊಂಡಿದ್ದಾರೆ.

  ಅವರ ಒಳ್ಳೆಯ ಮನಸಿಗೆ ಸಾಕ್ಷಿ

  ಅವರ ಒಳ್ಳೆಯ ಮನಸಿಗೆ ಸಾಕ್ಷಿ

  ಅಷ್ಟು ದೊಡ್ಡ ಸ್ಟಾರ್ ನನ್ನಂತಹ ಸಾಮಾನ್ಯನನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕರೆ ಮಾಡಿ ಪ್ರೀತಿ ತೋರಿಸುವುದು ಅವರ ಒಳ್ಳೆಯ ಹಾಗೂ ದೊಡ್ಡ ಮನಸಿಗೆ ಸಾಕ್ಷಿ. ಪುನೀತ್ ಸರ್ ನಿಜಕ್ಕೂ ಗ್ರೇಟ್ ಎಂದು ಪೃಥ್ವಿ ಸಂತಸ ಹಂಚಿಕೊಂಡಿದ್ದಾರೆ.

  English summary
  Actor Puneeth Rajkumar called Dia hero Pruthvi Ambaar to praise his acting in the movie and offered him a role in his project.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X