»   » 'ರಾಜಕುಮಾರ' ಚಿತ್ರದ ಕಡೆಯಿಂದ ಬಂದ ಸಿಹಿ ಸುದ್ದಿ ಇದು..

'ರಾಜಕುಮಾರ' ಚಿತ್ರದ ಕಡೆಯಿಂದ ಬಂದ ಸಿಹಿ ಸುದ್ದಿ ಇದು..

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಈ ವರ್ಷದ ಬಹು ನಿರೀಕ್ಷಿತ ಸಿನಿಮಾ 'ರಾಜಕುಮಾರ' ಇತ್ತೀಚೆಗಷ್ಟೇ ಚಿತ್ರೀಕರಣ ಮುಗಿಸಿತ್ತು. ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬಿಜಿಯಾಗಿದ್ದ ಚಿತ್ರತಂಡ ಪುನೀತ್ ಅವರ ಹೈ ವೋಲ್ಟೇಜ್ ಫಸ್ಟ್ ಲುಕ್ ಬಿಡುಗಡೆ ಮಾಡಿ ಚಿತ್ರದ ರಿಚ್ ನೆಸ್ ಬಗ್ಗೆ ಇನ್ನಷ್ಟು ಎಕ್ಸ್ ಪೆಕ್ಟೇಶನ್ ಮೂಡಿಸಿದೆ.[ಪುನೀತ್ 'ರಾಜಕುಮಾರ' ಟೀಸರ್ ನಲ್ಲಿವೆ ಹಲವು 'ಸರ್ಪ್ರೈಸ್'!]

ಈ ಹಿಂದೆ ಟೀಸರ್ ಮೂಲಕವೇ ಹಲವು ಸರ್ ಪ್ರೈಸ್ ಗಳನ್ನು ನೀಡಿ ಚಿತ್ರದ ಬಗ್ಗೆ ಕ್ರೇಜ್ ಹೆಚ್ಚಿಸಿದ್ದ 'ರಾಜಕುಮಾರ' ಚಿತ್ರತಂಡ, ಈಗೊಂದು ಸಿಹಿ ಸುದ್ದಿ ನೀಡಿದೆ. ಅದೇನಂದ್ರೆ 'ರಾಜಕುಮಾರ' ಚಿತ್ರದ ಆಡಿಯೋ ಮತ್ತು ಟ್ರೈಲರ್ ನಾಳೆ(ಮಾರ್ಚ್ 6) ರಂದು ಬಿಡುಗಡೆ ಆಗುತ್ತಿದೆ. ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ನಾಳೆ ಡಿಬೀಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಟ್ರೈಲರ್ ನೋಡಬಹುದು.

Puneeth Rajkumar Starrer 'Rajakumara' Audio and Trailer releasing on march 6

'ರಾಜಕುಮಾರ' ಡಬ್ಬಿಂಗ್ ವೇಳೆ ಭೇಟಿ ನೀಡಿದ್ದ ಜಗ್ಗೇಶ್, ಇಂಟರ್ ವಲ್ ಸೀನ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಇಂಟರ್ ವಲ್ ಸೀನ್ ನ ಸಣ್ಣ ಝಲಕ್ ಟ್ರೈಲರ್ ನಲ್ಲಿ ಇರಬಹುದಾ ಎನ್ನುವ ಕುತೂಹಲವು ಅಭಿಮಾನಿಗಳಲ್ಲಿ ಹೆಚ್ಚಿದೆ. ಈ ಹಿಂದೆ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರ ನಿರ್ದೇಶನ ಮಾಡಿದ್ದ ಸಂತೋಷ್ ಆನಂದ್ ರಾಮ್ 'ರಾಜಕುಮಾರ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.[ಪುನೀತ್ 'ರಾಜಕುಮಾರ' ಹೈ ವೋಲ್ಟೇಜ್ ಟೀಸರ್ ಔಟ್]

rajakumara

ಚಿತ್ರ ಬಹುದೊಡ್ಡ ತಾರಾಬಳಗ ಹೊಂದಿದೆ. ಸೌತ್ ಸುಂದರಿ ಪ್ರಿಯಾ ಆನಂದ್, ಇದೇ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ನಟಿಸಿದ್ದು, ಚೊಚ್ಚಲ ಚಿತ್ರದಲ್ಲೇ ಪುನೀತ್ ರಾಜ್ ಕುಮಾರ್ ಗೆ ನಾಯಕಿಯಾಗಿ ಕಾಣಿಸಿಕೊಡಿದ್ದಾರೆ. ಬಹುಭಾಷಾ ನಟ ಪ್ರಕಾಶ್ ರೈ, ತಮಿಳು ಟ ಶನರತ್ ಕುಮಾರ್, ಅನಂತ್ ನಾಗ್, ರಂಗಾಯಣ ರಘು, ದತ್ತಣ್ಣ, ಅಚ್ಯುತ್ ಕುಮಾರ್, ಸಾಧುಕೋಕಿಲಾ, ಚಿಕ್ಕಣ್ಣ ಹಾಗೂ 'ಮಾಸ್ತಿಗುಡಿ' ಚಿತ್ರದ ಕ್ಲೈಮ್ಯಾಕ್ಸ್ ದುರಂತದಲ್ಲಿ ಸಾವುಗೀಡಾಗಿದ್ದ ಖಳನಟ ಅನಿಲ್ ಸೇರಿದಂತೆ ಹಲವರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

English summary
Puneeth Rajkumar Starrer 'Rajakumara' Audio and Trailer releasing tomorrow (march 6) on DBeats Youtube Channel.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada