»   » ಪುನೀತ್ 'ರಾಜಕುಮಾರ' ಸೆನ್ಸಾರ್ ಆಯ್ತು

ಪುನೀತ್ 'ರಾಜಕುಮಾರ' ಸೆನ್ಸಾರ್ ಆಯ್ತು

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯನದ 'ರಾಜಕುಮಾರ' ಚಿತ್ರದ ಸೆನ್ಸಾರ್ ಕಾರ್ಯ ಮುಗಿದಿದ್ದು, ಸಿನಿಮಾ U/A ಸರ್ಟಿಫಿಕೇಟ್ ಪಡೆದುಕೊಂಡಿದೆ.[ಪರಭಾಷೆಯಲ್ಲಿ 'ರಾಜಕುಮಾರ'ನ ಹವಾ ಹೇಗಿದೆ ನೋಡಿ ಸ್ವಾಮಿ!]

'ಕನ್ನಡ ರಾಜರತ್ನ' ಪುನೀತ್ ರಾಜ್ ಕುಮಾರ್ ಅವರ 'ರಾಜಕುಮಾರ' ಚಿತ್ರ ಮಾರ್ಚ್ 24 ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದ್ದು, ಅಭಿಮಾನಿಗಳು ತೆರೆ ಮೇಲೆ ಪುನೀತ್ ಅವರನ್ನು ಕಣ್ತುಂಬಿಕೊಳ್ಳಬಹುದು.


rajakumara

'ಮಿಸ್ಟರ್ ಅಂಡ್ ಮಿಸಸ್ ರಾಮಚಾರಿ' ಚಿತ್ರವನ್ನು ನಿರ್ದೇಶನ ಮಾಡಿದ್ದ ಸಂತೋಷ್ ಆನಂದ್ ರಾಮ್ 'ರಾಜಕುಮಾರ' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ವಿ ಹರಿಕೃಷ್ಣ ಸಂಗೀತ ಸಂಯೋಜನೆ ಚಿತ್ರಕ್ಕಿದೆ.[ಪುನೀತ್ 'ರಾಜಕುಮಾರ' ಟೀಸರ್ ನಲ್ಲಿವೆ ಹಲವು 'ಸರ್ಪ್ರೈಸ್'!]


puneeth

ಇದೇ ಮೊದಲ ಬಾರಿಗೆ ಸೌತ್ ಸುಂದರಿ ಪ್ರಿಯಾ ಆನಂದ್ ಕನ್ನಡ ಚಿತ್ರದಲ್ಲಿ ನಟಿಸಿದ್ದು, ಚೊಚ್ಚಲ ಚಿತ್ರದಲ್ಲೇ ಪುನೀತ್ ರಾಜ್ ಕುಮಾರ್ ಗೆ ನಾಯಕಿಯಾಗಿ ಕಾಣಿಸಿಕೊಡಿದ್ದಾರೆ. ವಿಶೇಷ ಅಂದ್ರೆ ಬಹು ದೊಡ್ಡ ತಾರಾಬಳಗವೇ ಇರುವ ಈ ಚಿತ್ರದಲ್ಲಿ ಯಾರ್ಯಾರು ಯಾವ್ಯಾವ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಈಗ ರಿವೀಲ್ ಆಗಿದೆ.


ತಮಿಳು ನಟ ಶರತ್ ಕುಮರ್ -ಅಶೋಕ್ ಪಾತ್ರದಲ್ಲಿ, ವಿಜಯ ಲಕ್ಷ್ಮಿ ಸಿಂಗ್-ಸುಜಾತ, ರಂಗಾಯಣ ರಘು-ವೆಂಕಿ, ದತ್ತಣ್ಣ-ಮೊಹಮ್ಮದ್ ರಫಿ, ಚಿಕ್ಕಣ್ಣ-ಚಿಕ್ಕ, ಅನಂತ್ ನಾಗ್-ವಿಶ್ವ ಜೋಶಿ, ಪ್ರಕಾಶ್ ರೈ- ಜಗನ್ನಾಥ್, ಸಾಧು ಕೋಕಿಲಾ-ಆಂಟೊನಿ ಗೊನ್ಸಲ್ವೆಸ್, ಅಚ್ಯುತ್ ಕುಮಾರ್-ಕೃಷ್ಣ, ಅನಿಲ್-ಸೂರಿ, ಅವಿನಾಶ್-ಜಗದೀಶ್, ಹೊನ್ನಾವಳ್ಳಿ ಕೃಷ್ಣ ಅವರು ಮುನಿಯಪ್ಪ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

English summary
Santhosh AnandRam Directorial, Puneeth Rajkumar starrer 'Rajakumara' Censored and has received 'U/A' certificate. 'Rajakumara' is all set to release on march 24th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada