»   »  ಪಾರ್ವತಮ್ಮ ಜೊತೆ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್

ಪಾರ್ವತಮ್ಮ ಜೊತೆ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್

Posted By: Naveen
Subscribe to Filmibeat Kannada

ಹಿರಿಯ ನಿರ್ಮಾಪಕಿ, ದೊಡ್ಮನೆ ಅಮ್ಮ ಪಾರ್ವತಮ್ಮ ರಾಜ್ ಕುಮಾರ್(77) ಆರೋಗ್ಯ ಇಂದು ಸ್ವಲ್ಪ ಮಟ್ಟಿನ ಚೇತರಿಕೆ ಕಂಡಿದೆ. ವೆಂಟಿಲೇಟರ್ ಮೂಲಕ ಉಸಿರಾಡುತ್ತಿರುವ ಅವರು ಮಧ್ಯರಾತ್ರಿಯಿಂದ ಕಣ್ಣು ತೆರೆದು ನೋಡುತ್ತಿದ್ದಾರಂತೆ.

ಪಾರ್ವತಮ್ಮ ಅವರ ಆರೋಗ್ಯದ ಬಗ್ಗೆ ಇಂದು ಬೆಳ್ಳಿಗೆ 10.30ಕ್ಕೆ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿಯನ್ನ ನಡೆಸಲಾಯಿತು. ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ವೈದ್ಯರಾದ ಡಾ. ಸಂಜಯ್ ಕುಲಕರ್ಣಿ, ಡಾ.ಮಹೇಶ್, ಡಾ.ನಳಿನಾ ಮತ್ತು ಪುತ್ರ ರಾಘವೇಂದ್ರ ರಾಜ್ ಕುಮಾರ್ ಭಾಗಿಯಾಗಿದ್ದು, ಪಾರ್ವತಮ್ಮ ಅವರ ಆರೋಗ್ಯದಲ್ಲಿ ಚೇತರಿಕೆಯಾಗಿರುವ ಮಾಹಿತಿಯನ್ನ ನೀಡಿದರು. ಮುಂದೆ ಓದಿ......[ಪಾರ್ವತಮ್ಮ ಆರೋಗ್ಯದಲ್ಲಿ ಚೇತರಿಕೆ: ಸುದ್ದಿಗೋಷ್ಠಿಯಲ್ಲಿ ವೈದ್ಯರ ಸ್ಪಷ್ಟನೆ]

ಅಮ್ಮನನ್ನ ಮಾತಾಡಿಸಿಕೊಂಡು ಬಂದೆ

''ನಿನ್ನೆಗಿಂತ ಇಂದು ಅಮ್ಮನ ಆರೋಗ್ಯದಲ್ಲಿ ತುಂಬ ಚೇತರಿಕೆ ಕಂಡಿದೆ. ಇವತ್ತು ಬೆಳ್ಳಗೆ ಅಮ್ಮ ನನ್ನು ನೋಡಿದೆ, ನನ್ನ ಮಾತಿಗೆ ಅವರು ಸನ್ನೆಯ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕಣ್ಣು ಬಿಟ್ಟು ನೋಡುತ್ತಿದ್ದಾರೆ''-ರಾಘವೇಂದ್ರ ರಾಜ್ ಕುಮಾರ್, ಮಗ

ಸಾಕಷ್ಟು ಸುಧಾರಿಸಿದೆ

''ಅಮ್ಮನ ಆರೋಗ್ಯ ಸ್ಥಿತಿ ಸಹಜವಾಗಿದೆ ಅಂತ ಸದ್ಯಕ್ಕೆ ಹೇಳುವುದಕ್ಕೆ ಆಗುವುದಲ್ಲ. ಆದರೆ, ನಿನ್ನೆಗಿಂತ ಇಂದು ಆರೋಗ್ಯ ಸಾಕಷ್ಟು ಸುಧಾರಿಸಿದೆ. ಅಮ್ಮ ಬೇಗ ಅವರು ಗುಣವಾಗಲಿ ಎನ್ನುವುದೇ ಎಲ್ಲರ ಆಸೆ.'' - ರಾಘವೇಂದ್ರ ರಾಜ್ ಕುಮಾರ್, ಮಗ[ಅಮ್ಮನ ಆರೋಗ್ಯ ಸ್ಥಿತಿ ವಿವರಿಸಿದ ನಟ ಶಿವರಾಜ್ ಕುಮಾರ್]

ವೈದ್ಯರ ಪ್ರಕಾರ

''ನಿನ್ನೆ ಉಸಿರಾಟದ ತೊಂದರೆಯಿಂದ ವೆಂಟಿಲೇಟರ್ ವ್ಯವಸ್ಥೆ ಮಾಡಿದ್ವಿ. ಆದರೆ ಇವತ್ತು ಅದನ್ನ ಕಡಿಮೆ ಮಾಡಿದ್ದೀವಿ. ನಿನ್ನೆಗಿಂತ ಇಂದು ಆರೋಗ್ಯದಲ್ಲಿ ಚೇತರಿಕೆ ಆಗಿದೆ. ರಾಘವೇಂದ್ರ ರಾಜ್ ಕುಮಾರ್ ಸಹ ತಾಯಿಯನ್ನ ಮಾತನಾಡಿಸಿಕೊಂಡು ಬಂದಿದ್ದಾರೆ. ಅವರು ಚಿಕಿತ್ಸೆಗೆ ತುಂಬ ಚೆನ್ನಾಗಿ ಸ್ಪಂದಿಸುತ್ತಿದ್ದಾರೆ''-ವೈದ್ಯರು-ಎಂ.ಎಸ್ ರಾಮಯ್ಯ ಆಸ್ಪತ್ರೆ

ಎಲ್ಲ ಪಾಸಿಟಿವ್ ಆಗಿದೆ

''ಇವತ್ತು ಅವರಿಗೆ ಜ್ಞಾನ ಬಂದಿದೆ. ಆರೋಗ್ಯ ಚೆನ್ನಾಗಿ ಸುಧಾರಣೆ ಆಗುತ್ತಿದೆ. ಕಿಡ್ನಿ ಸಹ ಚೆನ್ನಾಗಿ ಕೆಲಸ ಮಾಡುತ್ತಿದೆ. ಇದೆಲ್ಲ ಪಾಸಿಟಿವ್ ಲಕ್ಷಣಗಳು. ಜನ ಇದ್ದಾರೆ.. ದೇವರು ಇದ್ದಾರೆ... ಒಳ್ಳೆಯದಾಗುತ್ತೆ. ಅವರ ಆರೋಗ್ಯದ ಬಗ್ಗೆ ಮತ್ತೆ ಸುದ್ದಿಗೋಷ್ಠಿ ಮಾಡಿ ಹೆಚ್ಚಿನ ಮಾಹಿತಿ ಹೇಳುತ್ತೇವೆ.''- ವೈದ್ಯರು-ಎಂ.ಎಸ್ ರಾಮಯ್ಯ ಆಸ್ಪತ್ರೆ[ರಾಜಣ್ಣ-ಪಾರ್ವತಮ್ಮರಲ್ಲಿ ಎರಡನೇ ತಂದೆ-ತಾಯಿ ಕಂಡಿದ್ದ ಜಗ್ಗೇಶ್]

ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ

ಕಳೆದ ನಾಲ್ಕು ದಿನಗಳಿಂದ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 77 ವರ್ಷದ ಪಾರ್ವತಮ್ಮ ರಾಜ್ ಕುಮಾರ್ ಅವರ ಆರೋಗ್ಯದಲ್ಲಿ ನಿನ್ನೆ ಏರುಪೇರಾಗಿತ್ತು. ಇಂದು ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಸದ್ಯ, ಪಾರ್ವತಮ್ಮ ಅವರು ಉಸಿರಾಟದ ತೊಂದರೆಯಿಂದ ಬಳುತ್ತಿದ್ದಾರೆ.

English summary
Actor Raghavendra Rajkumar Gives Clarity About his Mother Parvathamma Rajkumar's health Condition Today (May 20th)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada