»   » ಅಮ್ಮನ ಆರೋಗ್ಯ ಸ್ಥಿತಿ ವಿವರಿಸಿದ ನಟ ಶಿವರಾಜ್ ಕುಮಾರ್

ಅಮ್ಮನ ಆರೋಗ್ಯ ಸ್ಥಿತಿ ವಿವರಿಸಿದ ನಟ ಶಿವರಾಜ್ ಕುಮಾರ್

Written By: Naveen
Subscribe to Filmibeat Kannada

ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಸದ್ಯ ಅವರಿಗೆ ಉಸಿರಾಟದ ತೊಂದರೆಯಾಗಿದ್ದು ವೆಂಟಿಲೇಟರ್ ವ್ಯವಸ್ಥೆ ಕಲ್ಪಿಸಲಾಗಿದೆ. ಆದ್ರೆ, ಯಾವುದೇ ಆತಂಕ ಪಡುವಂತಿಲ್ಲ ಎಂದು ಎಂ.ಎಸ್ ರಾಮಯ್ಯ ಆಸ್ಪತ್ರೆಯ ವೈದ್ಯರು ಸ್ಪಷ್ಟಡಿಸಿದ್ದಾರೆ.

ಮತ್ತೊಂದೆಡೆ ಡಾ.ರಾಜ್ ಕುಟುಂಬದ ಸದಸ್ಯರೆಲ್ಲಾ ಆಸ್ಪತ್ರೆಗೆ ಆಗಮಿಸಿದ್ದಾರೆ. ಇದು ಅಭಿಮಾನಿಗಳಿಗೆ ಆತಂಕ ಉಂಟು ಮಾಡಿತ್ತು. ತದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಶಿವರಾಜ್ ಕುಮಾರ್, ಅಮ್ಮನ ಆರೋಗ್ಯದ ಬಗ್ಗೆ ತಿಳಿಸಿದರು. ಅಷ್ಟೇ ಅಲ್ಲದೇ, ಸುಳ್ಳು ಸುದ್ದಿಗಳನ್ನ ಹಬ್ಬಿಸಬೇಡಿ ಎಂದು ಮನವಿ ಮಾಡಿಕೊಂಡರು. ಮುಂದೆ ಓದಿ.....

ಯಾರು ಆತಂಕ ಪಡಬೇಡಿ

''ಅಮ್ಮನ ಆರೋಗ್ಯ ಸ್ಥಿತಿಯ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ. ಡಾಕ್ಟರ್ ನೋಡಿಕೊಳುತ್ತಿದ್ದಾರೆ. ನಿನ್ನೆಗಿಂತ ಇಂದು ಬಿಪಿ ನಾರ್ಮಲ್ ಆಗಿದೆ'' -ಶಿವರಾಜ್ ಕುಮಾರ್, ನಟ

ಸುಳ್ಳು ಸುದ್ದಿ ಹಬ್ಬಿಸಬೇಡಿ

''ವೆಂಟಿಲೇಟರ್ ಅಂತ ಹೇಳಿದಾಗ ಎಲ್ಲರಿಗೆ ಭಯವಾಗುವುದು ಸಾಮಾನ್ಯ. ವೆಂಟಿಲೇಟರ್ ನಿಂದ ಹೊರ ಬರುವವರಿಗೂ ತುಂಬಾ ಚೆನ್ನಾಗಿದ್ದಾರೆ ಎಂದು ಹೇಳುವುದಕ್ಕೆ ಆಗಲ್ಲ. ಆದರೆ ಬೇರೆ ಯಾವುದೇ ರೀತಿಯ ಸುದ್ದಿ ಹಬ್ಬಿಸಬೇಡಿ''-ಶಿವರಾಜ್ ಕುಮಾರ್, ನಟ

ರಾಘವೇಂದ್ರ ರಾಜ್ ಕುಮಾರ್

''ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಅಮ್ಮನ ಆರೋಗ್ಯ ಸುಧಾರಿಸಲಿ ಅಂತ ದೇವರಲ್ಲಿ ಪ್ರಾರ್ಥಿಸಬೇಕು. ಈಗ ನಿಮ್ಮ ಪ್ರಾರ್ಥನೆಗಳ ಅಗತ್ಯವಿದೆ''- ರಾಘವೇಂದ್ರ ರಾಜ್ ಕುಮಾರ್, ನಟ

ವೈದ್ಯರು ಏನು ಹೇಳಿದರು

''ಬಹು ಅಂಗಾಗ ವೈಫಲ್ಯದಿಂದ ಬಳುತ್ತಿರುವ ಪಾರ್ವತಮ್ಮ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಸಿರಾಟದ ತೊಂದರೆಯಿಂದ ಹೆಚ್ಚು ಬಳಲುತ್ತಿದ್ದಾರೆ. ಹೀಗಾಗಿ ಕೃತಕ ಉಸಿರಾಟದ ವ್ಯವಸ್ಥೆಯನ್ನ ಮಾಡಲಾಗಿದೆ. ಸದ್ಯ, ಯಾವುದೇ ರೀತಿಯ ಆತಂಕ ಪಡುವಂತಿಲ್ಲ. ಇನ್ನು 24 ಗಂಟೆಗಳ ಕಾಲ ಅವರನ್ನ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತೆ''- ಡಾ.ನರೇಶ್ ಶೆಟ್ಟಿ, ಸಂಜಯ್ ಕುಲಕರ್ಣಿ

English summary
Actor Shiva RajKumar Gives Clarity About his Mother Parvatamma Rajkumar's health Condition

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada