For Quick Alerts
  ALLOW NOTIFICATIONS  
  For Daily Alerts

  ರಾಜಣ್ಣ-ಪಾರ್ವತಮ್ಮರಲ್ಲಿ ಎರಡನೇ ತಂದೆ-ತಾಯಿ ಕಂಡಿದ್ದ ಜಗ್ಗೇಶ್

  By Bharath Kumar
  |

  ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಇಂದು ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದ್ದಾರೆ. ಇದರಿಂದ ಅಭಿಮಾನಿಗಳಲ್ಲಿ ಆತಂಕ ಮೂಡಿದೆ. ಡಾ.ರಾಜ್ ಕುಟುಂಬಸ್ಥರು ಆಸ್ಪತ್ರೆ ಬಳಿ ಅಮ್ಮನಿಗಾಗಿ ಕಾಯುತ್ತಿದ್ದಾರೆ.

  ಹೀಗಿರುವಾಗ, ಪಾರ್ವತಮ್ಮ ಅವರು ಆಸ್ಪತ್ರೆಗೆ ಸೇರಿರುವುದು ಕೇವಲ ರಾಜ್ ಕುಟುಂಬ ಹಾಗೂ ಅಭಿಮಾನಿಗಳಿಗೆ ಮಾತ್ರವಲ್ಲ, ಪಾರ್ವತಮ್ಮ ಅವರನ್ನ ತಾಯಿ ಎಂದೇ ಅಂದುಕೊಂಡಿದ್ದ ಕಲಾವಿದರಿಗೂ ಬೇಸರ ತರಿಸಿದೆ.[ಪಾರ್ವತಮ್ಮ ಆರೋಗ್ಯದಲ್ಲಿ ಚೇತರಿಕೆ: ಸುದ್ದಿಗೋಷ್ಠಿಯಲ್ಲಿ ವೈದ್ಯರ ಸ್ಪಷ್ಟನೆ]

  ಹೀಗೆ, ಪಾರ್ವತಮ್ಮ ಅವರಲ್ಲಿ ತಾಯಿಯನ್ನ ಕಂಡವರಲ್ಲಿ ನವರಸ ನಾಯಕ ಜಗ್ಗೇಶ್ ಕೂಡ ಒಬ್ಬರು. ಹೌದು, ಜಗ್ಗೇಶ್ ಅವರ ಬದುಕಿನಲ್ಲಿ ಪಾರ್ವತಮ್ಮ ಅವರು ಇನ್ನೊಂದು ತಾಯಿ ಇದ್ದಂತೆ. ಅದನ್ನ ಸ್ವತಃ ಅವರೇ ತಮ್ಮ ಪದಗಳಲ್ಲಿ ಬಣ್ಣಿಸಿದ್ದಾರೆ. ಅಷ್ಟೇ ಅಲ್ಲದೇ, ಪಾರ್ವತಮ್ಮ ಅವರು ಆದಷ್ಟೂ ಬೇಗ ಚೇತರಿಕೆಯಾಗಲಿ ಎಂದು ಪ್ರಾರ್ಥಿಸಿದ್ದಾರೆ. ಮುಂದೆ ಓದಿ.....[ಅಮ್ಮನ ಆರೋಗ್ಯ ಸ್ಥಿತಿ ವಿವರಿಸಿದ ನಟ ಶಿವರಾಜ್ ಕುಮಾರ್]

  ಅಮ್ಮನ ವಾತ್ಯಲ್ಯ ನನಗೆ ಕೊಟ್ಟರು

  ಅಮ್ಮನ ವಾತ್ಯಲ್ಯ ನನಗೆ ಕೊಟ್ಟರು

  ''ನನ್ನ ಅಮ್ಮನ ವಾತ್ಸಲ್ಯ ಬಿಟ್ಟರೆ ನಾನು ಕಂಡಿದ್ದು ಈ ಅಮ್ಮನಲ್ಲಿಯೇ. 1996 ರಲ್ಲಿ ನನ್ನ ಸಣ್ಣ ಸಿಟ್ಟಿಗೆ ಇಡೀ ಚಿತ್ರರಂಗವೇ ನನ್ನನ್ನು ಬಹಿಷ್ಕರಿಸಿತು. ಅನಾಥ ಭಾವ ಕಾಡಿದಾಗ ತಂದೆಯಂತೆ ರಾಜಣ್ಣ ನನ್ನ ಭುಜಬಲವಾಗಿ ಅಮ್ಮನನ್ನು ತಮ್ಮ ಪ್ರತಿನಿಧಿಯಾಗಿ ಕಳುಹಿಸಿದರು. ಅಂದೇ ನಾನು ಕಂಡಿದ್ದು ಇನ್ನೊಬ್ಬ ಅಮ್ಮನ ವಾತ್ಸಲ್ಯವನ್ನ''- ಜಗ್ಗೇಶ್, ನಟ

  ಅರ್ಜುನನಿಗೆ ಶ್ರೀಕೃಷ್ಟ, ನನಗೆ ಈ ಅಮ್ಮ

  ಅರ್ಜುನನಿಗೆ ಶ್ರೀಕೃಷ್ಟ, ನನಗೆ ಈ ಅಮ್ಮ

  ''ಇಡೀ ಚಿತ್ರರಂಗವೇ ನನ್ನ ವಿರುದ್ಧ ನಿಂತಾಗ ಅಣ್ಣನ ಪ್ರತಿನಿಧಿ ಅಮ್ಮ ನನ್ನ ಭಾಗಕ್ಕೆ "ಕುರುಕ್ಷೇತ್ರದಲ್ಲಿ ಅರ್ಜುನನ ಪರವಾಗಿ ನಿಂತ ಶ್ರೀಕೃಷ್ಣನಂತೆ" ನಿಂತರು. ಎಲ್ಲರನ್ನ ಹತ್ತಾರು ಬಾರಿ ಕರೆಸಿ ಮಾತಾಡಿ ಸಮಸ್ಯೆಗೆ ಪರಿಹಾರ ಕೊಡಿಸಿದರು''-ಜಗ್ಗೇಶ್, ನಟ[ಪಾರ್ವತಮ್ಮ ರಾಜ್ ಕುಮಾರ್ ಆರೋಗ್ಯ ಸ್ಥಿತಿ ಗಂಭೀರ: ವೈದ್ಯರ ಸ್ಪಷ್ಟನೆ]

  ರಾಯರು ಜೊತೆಯಲ್ಲಿದ್ದಾರೆ, ಬೇಗ ಮನೆಗೆ ಬಾ ಅಮ್ಮ

  ರಾಯರು ಜೊತೆಯಲ್ಲಿದ್ದಾರೆ, ಬೇಗ ಮನೆಗೆ ಬಾ ಅಮ್ಮ

  ''ಅಲ್ಲಿಯವರೆಗೂ ಸಾಮಾನ್ಯ ಹೆಣ್ಣಂತೆ ಕಂಡವನಿಗೆ ನನ್ನ ಅಮ್ಮನ ಸ್ಥಾನವನ್ನ ನನಗರಿಯದೆ ನೀಡಿಬಿಟ್ಟೆ. ರಾಜಣ್ಣನ ನೆರಳಿನಂತೆ ಬಾಳಿ ತ್ರಿಮೂರ್ತಿಗಳನ್ನು ಕನ್ನಡ ಸೇವೆಗೆ ಧೇಣಿಗೆ ನೀಡಿ ನೂರಾರು ಬಾಯಿಗೆ ತುತ್ತು ನೀಡಿದ ಈ ಅಮ್ಮ ಮಗುವಿನಂತೆ ರಾಯರ ಮಡಿಲಲ್ಲಿ ಮಲಗಿದ್ದಾರೆ...ಹುಷಾರಾಗಿ ಬೇಗ ಮನೆಗೆ ಬಾಮ್ಮಾ ಎಂದು ಬೇಡುವುದೊಂದೇ ನನಗೆ ಉಳಿದಿರುವ ಶಕ್ತಿ... ರಾಯರು ನಿಮ್ಮ ಜೊತೆಯಿರುತ್ತಾರೆ...''- ಜಗ್ಗೇಶ್, ನಟ[ಪಾರ್ವತಮ್ಮ ರಾಜ್ ಕುಮಾರ್ ಆರೋಗ್ಯದಲ್ಲಿ ಮತ್ತೆ ಏರುಪೇರು: ಅವರಿಗೆ ಏನಾಗಿದೆ.?]

  ಅಮ್ಮ ಎಂದರೇ.....

  ಅಮ್ಮ ಎಂದರೇ.....

  ''ಅಮ್ಮ ಈ ಪದಕ್ಕೆ ಸರಿಸಾಟಿ ಇನ್ನೊಂದು ಪದವಿಲ್ಲ. ಈ ಎರಡಕ್ಷರ ಸೃಷ್ಟಿಸಿದವನಿಗೆ ಕೋಟಿ ನಮನ ಯಾರು ಕರೆದರೋ ಮೊದಲು ಈ ಎರಡಕ್ಷರ. ಎಂಥ ಶಕ್ತಿಯುಂಟು ಈ ಅಮ್ಮ ಎಂಬ ಹೆಸರಿಗೆ. ಒಮ್ಮೆ ನೆನೆದರೆ ಈ ಅಮ್ಮನನ್ನ, ಎಲ್ಲಾ ಬಿಟ್ಟು ಓಡಬೇಕು ಅವಳ ಬಳಿಗೆ ಅನ್ನಿಸುತ್ತೆ. ಅದು ಪ್ರಾಣಿಯಾಗಲಿ, ಪಕ್ಷಿಯಾಗಲಿ, ಮನುಷ್ಯನಾಗಲಿ''['ಮದರ್ಸ್ ಡೇ' ವಿಶೇಷವಾಗಿ ಪಾರ್ವತಮ್ಮ ರಾಜ್ ಕುಮಾರ್ ಬಗ್ಗೆ ಹೊಸ ಹಾಡು]

  ಮುಕ್ಕೋಟಿ ದೇವರಿಗಿಂತ ಅಮ್ಮ ದೊಡ್ಡವಳು

  ಮುಕ್ಕೋಟಿ ದೇವರಿಗಿಂತ ಅಮ್ಮ ದೊಡ್ಡವಳು

  ''ಅಮ್ಮನ ನಿಸ್ವಾರ್ಥ ಹಾರೈಕೆ, ಅಕ್ಕರೆ, ತ್ಯಾಗ ನೆನೆದರೆ ಕಣ್ಣಲ್ಲಿ ನೀರು ಅಪ್ಪಣೆಯಿಲ್ಲದೆ ಹರಿವುದು. ಅದಕ್ಕೇ ಹಿರಿಯರು ಹೇಳಿದ್ದು, ಮುಕ್ಕೋಟಿ ದೇವರುಗಳು ಈ ಅಮ್ಮನ ಮುಂದೆ ನಿಲ್ಲರು ಎಂದು. ತನಗಾಗಿ ಏನೂ ಬಯಸದೆ ಮಕ್ಕಳು ಗಂಡನ ಒಳಿತು ಬಯಸೋ ತಾಳ್ಮೆಯ ಇನ್ನೊಂದು ಮಗ್ಗುಲೇ ಈ ಅಮ್ಮ. ಇಂಥ ದೇವರ ಪ್ರತಿರೂಪಕ್ಕೆ ಏನು ಮಾಡಿದರೂ ಅದು ತೃಣವೆ ಅನ್ನಿಸುತ್ತೆ''-ಜಗ್ಗೇಶ್, ನಟ

  ನಮ್ಮ ಜೀವನಕ್ಕೆ ಬೆಳಕು ಅಮ್ಮ

  ನಮ್ಮ ಜೀವನಕ್ಕೆ ಬೆಳಕು ಅಮ್ಮ

  ''ನಾವು ಖುಷಿಪಟ್ಟರೆ ಅವಳಿಗೆ ಖುಷಿ, ನಾವು ಅತ್ತರೆ ಕಾರಣ ಕೇಳದೆ ಅವಳು ಅಳುತ್ತಾಳೆ. ಆಯುಷ್ಯಪೂರ ಮಕ್ಕಳ ಸಂತಸ ಬಯಸಿ ಬಾಳುವ ದೈವ ಅಮ್ಮ. ಮೇಣದ ಬತ್ತಿ ಬೆಳಕು ಕೊಟ್ಟು ಕರಗಿದಂತೆ ಅವಳ ಬಾಳು. ದೇವರು ತಾನು ಬರಲಾಗದೆ ಕಳುಹಿಸಿದನಾ ಈ ಶಾಂತ ಮೂರ್ತಿಯನ್ನ. ಓ ಅಮ್ಮಂದಿರೆ ನಮ್ಮ ಆಯುಷ್ಯವು ನಿಮ್ಮದಾಗಲಿ. ನಿಮ್ಮ ಗುಣ ನಮ್ಮದಾಗಲಿ''- ಜಗ್ಗೇಶ್, ನಟ[ಅಮ್ಮನ ಬಗ್ಗೆ ಜಗ್ಗೇಶ್ ಮನದಿಂದ ಬಂದ ನುಡಿಮುತ್ತುಗಳು]

  English summary
  Kannada Actor Jaggesh Prayer for Parvathamma rajkumar Helth. Parvathamma Hospitalized From Last 4 Days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X