»   » ಪಾರ್ವತಮ್ಮ ಸಮಾಧಿಗೆ ಕುಟುಂಬದವರಿಂದ ಹಾಲು ತುಪ್ಪ ಕಾರ್ಯ

ಪಾರ್ವತಮ್ಮ ಸಮಾಧಿಗೆ ಕುಟುಂಬದವರಿಂದ ಹಾಲು ತುಪ್ಪ ಕಾರ್ಯ

Posted By:
Subscribe to Filmibeat Kannada

ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಸಮಾಧಿಗೆ ಹಾಲು ತುಪ್ಪ ಬಿಡುವ ಕಾರ್ಯವನ್ನು ಇಂದು ನಡೆಸಲಾಗಿದೆ. ಇಂದು ಬೆಳಗ್ಗೆ 10.30ರ ಸುಮಾರಿಗೆ ಪಾರ್ವತಮ್ಮ ಅವರ ಸಮಾಧಿಗೆ ಕುಟುಂಬದವರು ವಿಶೇಷ ಪೂಜೆ ಸಲ್ಲಿಸಿದರು.

ಶಿವಣ್ಣ, ರಾಘಣ್ಣ, ಪುನೀತ್ ರಾಜ್ ಕುಮಾರ್ ಪೂಜಾ ಕಾರ್ಯಗಳನ್ನು ಮಾಡಿದರು. ಪಾರ್ವತಮ್ಮ ಸಹೋದರ ಚಿನ್ನೇಗೌಡ ಮತ್ತು ದಂಪತಿ, ಪಾರ್ವತಮ್ಮ ಪುತ್ರಿ ಲಕ್ಷ್ಮಿ ಮತ್ತು ಎಸ್ ಎ ಗೋವಿಂದರಾಜು ದಂಪತಿ, ಪಾರ್ವತಮ್ಮ ಮೊಮ್ಮಕ್ಕಳಾದ ವಿನಯ್ ರಾಜ್ ಕುಮಾರ್, ಗುರು ರಾಜ್, ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದರು.[ಪಾರ್ವತಮ್ಮ ಅವರ ಬಹುದಿನಗಳ ಈ ಆಸೆ ಕೊನೆಗೂ ಈಡೇರಲೇ ಇಲ್ಲ.!]

Raj family performed pooja to burial ground of 'Parvathamma Rajkumar'

ಇಂದು ಸಹ ಕಂಠೀರವ ಸ್ಟುಡಿಯೋದ ಬಳಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಪಾರ್ವತಮ್ಮ ಸಮಾಧಿ ಬಳಿ ಸಾಮಾನ್ಯರಿಗೆ ಪ್ರವೇಶವಿಲ್ಲದರಿಂದ ರಾಜ್ ಸ್ಮಾರಕದ ‌ಬಳಿ‌ಯೇ ನಿಂತು ಅಭಿಮಾನಿಗಳು ಪಾರ್ವತಮ್ಮ ಸಮಾಧಿಗೆ ನಮಸ್ಕಾರ ಮಾಡಿದರು.[ಮಣ್ಣಲ್ಲಿ ಮಣ್ಣಾದ ಕನ್ನಡ ಚಿತ್ರರಂಗದ 'ವಜ್ರೇಶ್ವರಿ' ಪಾರ್ವತಮ್ಮ ರಾಜ್ ಕುಮಾರ್]

Raj family performed pooja to burial ground of 'Parvathamma Rajkumar'

ಅಂದಹಾಗೆ, ಇಂದಿನ ಪೂಜಾ ಕಾರ್ಯದಲ್ಲಿ ರಾಜ್ ಕುಟುಂಬದೊಂದಿಗೆ ನಟ ಹೊನ್ನವಳ್ಳಿ ಕೃಷ್ಣ, ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ.ರಾ ಗೋವಿಂದು, ನಿರ್ಮಾಪಕ ರಾಮು, ಮತ್ತು ರಾಕ್ ಲೈನ್ ವೆಂಕಟೇಶ್ ಸಹ ಹಾಜರಾಗಿದ್ದರು.['ಶ್ರೇಷ್ಠ ಹೆಣ್ಣು' ಪಾರ್ವತಮ್ಮ ರನ್ನ ನೆನೆದು ಕಣ್ಣೀರಿಟ್ಟ ಹಿರಿಯ ನಟಿ ಲೀಲಾವತಿ ]

English summary
Rajkumar family members performed pooja to burial ground of 'Parvathamma Rajkumar' at Kanteerava Studio.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada