»   » 'ಶ್ರೇಷ್ಠ ಹೆಣ್ಣು' ಪಾರ್ವತಮ್ಮ ರನ್ನ ನೆನೆದು ಕಣ್ಣೀರಿಟ್ಟ ಹಿರಿಯ ನಟಿ ಲೀಲಾವತಿ

'ಶ್ರೇಷ್ಠ ಹೆಣ್ಣು' ಪಾರ್ವತಮ್ಮ ರನ್ನ ನೆನೆದು ಕಣ್ಣೀರಿಟ್ಟ ಹಿರಿಯ ನಟಿ ಲೀಲಾವತಿ

Posted By:
Subscribe to Filmibeat Kannada

ಕನ್ನಡ ಚಿತ್ರ ನಿರ್ಮಾಪಕಿ, ವಿತರಕಿ, ವರನಟ ಡಾ.ರಾಜ್ ಕುಮಾರ್ ರವರ ಪತ್ನಿ ಪಾರ್ವತಮ್ಮ ರಾಜ್ ಕುಮಾರ್ ಇಂದು ಮುಂಜಾನೆ 4.40ರ ಸುಮಾರಿಗೆ ಹೃದಯಾಘಾತದಿಂದ ಕೊನೆಯುಸಿರೆಳೆದರು.

ಪಾರ್ವತಮ್ಮ ರಾಜ್ ಕುಮಾರ್ ರವರ ನಿಧನ ವಾರ್ತೆ ಕೇಳಿದ ಕೂಡಲೆ, ಅವರ ಸದಾಶಿವನಗರದ ನಿವಾಸಕ್ಕೆ ಧಾವಿಸಿದ ಹಿರಿಯ ನಟಿ ಲೀಲಾವತಿ ಕಂಬನಿ ಮಿಡಿದರು.[ಡಾ.ರಾಜ್ ಸಮಾಧಿ ಪಕ್ಕದಲ್ಲಿಯೇ ಪತ್ನಿ ಪಾರ್ವತಮ್ಮ ಅಂತ್ಯಕ್ರಿಯೆ]

ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ರವರನ್ನ 'ಶ್ರೇಷ್ಠ ಹೆಣ್ಣು' ಎಂದು ಬಣ್ಣಿಸಿದ ಹಿರಿಯ ನಟಿ ಲೀಲಾವತಿ ಮಾಧ್ಯಮದವರೊಂದಿಗೆ ಮಾತನಾಡಿದ್ದು ಇಷ್ಟು -

ಮೂವತ್ತು ವರ್ಷಗಳ ಹಿಂದೆ ನಡೆದದ್ದು...

''ನನಗೆ ಅವರೊಂದು ಹೂವು ಹಾಗೂ ತೆಂಗಿನ ಕಾಯಿ ಕೊಟ್ಟು, ''ಲೀಲಾವತಿ ನನ್ನ ಮನಸ್ಸು ನೋಯಿಸಿಲ್ಲ. ಅವರಿಗೆ ಈ ಪ್ರಸಾದ ಕೊಡಿ'' ಎಂದಿದ್ದರು ಮೂವತ್ತು ವರ್ಷಗಳ ಹಿಂದೆ. ಅದು ನನ್ನನ್ನ ಇಲ್ಲಿಯವರೆಗೆ ಅವರನ್ನ ನೋಡಲು ಕರೆದುಕೊಂಡು ಬಂದಿದೆ'' ಎಂದು ಹೇಳುತ್ತಾ ಹಿರಿಯ ನಟಿ ಲೀಲಾವತಿ ಕಣ್ಣೀರು ಸುರಿಸಿದರು.[ಆರಿದ 'ದೊಡ್ಮನೆ' ದೀಪ: ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಇನ್ನಿಲ್ಲ]

ಪಾರ್ವತಮ್ಮ ಆತ್ಮಕ್ಕೆ ಶಾಂತಿ ಸಿಗಲಿ

''ದೇವರು ಅವರ ಆತ್ಮಕ್ಕೆ ಶಾಂತಿ ಕೊಡಲಿ. ಅವರಿಗೆ ಮೋಕ್ಷ ಕೊಡಲಿ ಎಂದು ಪ್ರಾರ್ಥಿಸುತ್ತೇನೆ'' - ಲೀಲಾವತಿ, ಹಿರಿಯ ನಟಿ [ಪತಿಯ ಹಾದಿಯಲ್ಲಿ ಪತ್ನಿ: ಅಂಧರ ಬಾಳಲ್ಲಿ ಹೊಸಬೆಳಕು ಮೂಡಿಸಲಿರುವ 'ದೊಡ್ಮನೆ' ಅಮ್ಮ]

ಸಿಂಗಾಪುರಕ್ಕೆ ಹೋಗಬೇಕಿತ್ತು.!

''ಸರ್ಕಾರದ ಭಂಡಾರದಲ್ಲಿ ಹಣ ಇರಲಿಲ್ಲವೇ.? ಸಿಂಗಾಪುರಕ್ಕೆ ಅವರನ್ನ ಕಳುಹಿಸಬಹುದಾಗಿತ್ತು. ಯಾಕೆ ಹಾಗೆ ಮಾಡಲಿಲ್ಲ ಎಂದು ಕೋಪ ಬರುತ್ತಿದೆ ನನಗೆ. ಅಲ್ಲಿ ಹೋಗಿದ್ದರೆ, ಅವರು ಸರಿ ಹೋಗುತ್ತಿದ್ದರು ಎಂಬ ನಂಬಿಕೆ ನನಗೆ ಇತ್ತು'' - ಲೀಲಾವತಿ, ಹಿರಿಯ ನಟಿ

ಶ್ರೇಷ್ಠ ಹೆಣ್ಣು ಪಾರ್ವತಮ್ಮ

''ಪಾರ್ವತಮ್ಮ ಅವರು ಇದ್ದಿದ್ರೆ, ಕನ್ನಡ ಚಿತ್ರರಂಗವನ್ನು ಚೆನ್ನಾಗಿ ನಡೆಸಿಕೊಂಡು ಹೋಗುತ್ತಿದ್ದರು. ಅವರು ಒಂದು ಶ್ರೇಷ್ಠ ಹೆಣ್ಣು ಮಗಳಾಗಿ ಬಾಳಿದವರು. ಅವರ ಶ್ರೇಷ್ಠತೆ ಎಲ್ಲರಿಗೂ ಬರಲಿ'' - ಲೀಲಾವತಿ, ಹಿರಿಯ ನಟಿ

ಮಕ್ಕಳಿಗೆ ಶಕ್ತಿ ಕೊಡಲಿ

''ಅವರ ಮಕ್ಕಳಿಗೆ ಧೈರ್ಯವಾಗಿ ಬಾಳುವಂತಹ ಶಕ್ತಿ ಕೊಡಲಿ. ಅವರ ಮಕ್ಕಳನ್ನು ನಿಮ್ಮ ಮಕ್ಕಳಂತೆ ಭಾವಿಸಿ, ಪ್ರೀತಿಯಿಂದ ಕಾಣಿರಿ. ಯಾರೂ ದ್ವೇಷ ಕಟ್ಟಿಕೊಳ್ಳಬೇಡಿ'' - ಲೀಲಾವತಿ, ಹಿರಿಯ ನಟಿ

English summary
Parvathamma Rajkumar, wife of Late Dr.Rajkumar, Kannada Movie Producer, passes away in Bengaluru today (May 31st). Kannada Actress Leelavathi condoles death of Parvathamma Rajkumar

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada