»   » ಪಾರ್ವತಮ್ಮ ಅವರ ಬಹುದಿನಗಳ ಈ ಆಸೆ ಕೊನೆಗೂ ಈಡೇರಲೇ ಇಲ್ಲ.!

ಪಾರ್ವತಮ್ಮ ಅವರ ಬಹುದಿನಗಳ ಈ ಆಸೆ ಕೊನೆಗೂ ಈಡೇರಲೇ ಇಲ್ಲ.!

Posted By:
Subscribe to Filmibeat Kannada

ಪಾರ್ವತಮ್ಮ ರಾಜ್ ಕುಮಾರ್.....ಡಾ.ರಾಜ್ ಕುಮಾರ್ ಯಶಸ್ಸಿನ ಹಿಂದಿದ್ದ ದೊಡ್ಡ ಶಕ್ತಿ. ತಮ್ಮ ಮಕ್ಕಳಿಗೆ ಮಾತ್ರವಲ್ಲದೇ ಇಡಿ ಚಿತ್ರರಂಗಕ್ಕೇ ಮಾತೃತ್ವದ ಅನುಭೂತಿ ತುಂಬಿದ್ದವರು. ಹೀಗೆ, ತಾನು, ತನ್ನವರು ಎನ್ನದೇ ಎಲ್ಲರ ಯಶಸ್ಸಿಗೆ ಕಾರಣವಾಗಿದ್ದ ಪಾರ್ವತಮ್ಮ ಅವರ ಒಂದು ಆಸೆ ಈಡೇರಲಿಲ್ಲವಂತೆ.

ಹೌದು, ಡಾ ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಇಬ್ಬರಿಗೂ ಬಹುದಿನಗಳಿಂದ ಒಂದು ಆಸೆ ಇತ್ತಂತೆ. ಆದ್ರೆ ಆಸೆಯನ್ನ ಈಡೇರಿಸದೇ ಪಾರ್ವತಮ್ಮ ಅವರು ಹೋದರು ಎಂದು ಹಿರಿಯ ನಟ ಶ್ರೀನಿವಾಸ ಮೂರ್ತಿ ಅವರು ಕುತೂಹಲ ಕಾರಿ ಸಂಗಂತಿಯೊಂದನ್ನ ಬಿಚ್ಚಿಟ್ಟಿದ್ದಾರೆ.[ಮಣ್ಣಲ್ಲಿ ಮಣ್ಣಾದ ಕನ್ನಡ ಚಿತ್ರರಂಗದ 'ವಜ್ರೇಶ್ವರಿ' ಪಾರ್ವತಮ್ಮ ರಾಜ್ ಕುಮಾರ್]

ಖಾಸಗಿ ಸುದ್ದಿ ವಾಹಿನಿಯ ಜೊತೆ ಪಾರ್ವತಮ್ಮ ಅವರ ಬಗ್ಗೆ ಮಾತನಾಡುತ್ತಿದ್ದ ಶ್ರೀನಿವಾಸ ಮೂರ್ತಿ ಅವರು ಡಾ.ರಾಜ್ ದಂಪತಿಗಿದ್ದ ಆಸೆಯೊಂದನ್ನ ಹೊರಹಾಕಿದ್ದಾರೆ. ಏನದು? ಮುಂದೆ ಓದಿ......

ಇಂದಿರಾ ಗಾಂಧಿ ನಂತರ ಪಾರ್ವತಮ್ಮ

''ಭಾರತದಲ್ಲಿ ಕಂಡ ಅತ್ಯಂತ ಮೇಧಾವಿ ಮತ್ತು ಅತ್ಯುತ್ಕೃಷ್ಟ ಮಹಿಳೆ ಅಂದ್ರೆ ಇಂದಿರಾ ಗಾಂಧಿ. ಅವರನ್ನ ಬಿಟ್ಟರೇ, ಕರ್ನಾಟಕದಲ್ಲಿ, ಅದು ಕನ್ನಡ ಚಿತ್ರರಂಗದಲ್ಲಿ ಡಾ.ರಾಜ್ ಕುಮಾರ್ ಅವರ ಧರ್ಮಪತ್ನಿ ಪಾರ್ವತಮ್ಮ ರಾಜ್ ಕುಮಾರ್ ಎನ್ನಬಹುದು.''- ಶ್ರೀನಿವಾಸ ಮೂರ್ತಿ, ಹಿರಿಯ ನಟ['ದೊಡ್ಮನೆ ದೇವತೆ'ಯ ಜೀವನದ ಹಿನ್ನೋಟ]

ಪಾರ್ವತಮ್ಮ ಅವರಿಗೊಂದು ಆಸೆ ಇತ್ತು!

ಹಿರಿಯ ನಟಿ ಪಾರ್ವತಮ್ಮ ಹಾಗೂ ರಾಜ್ ಕುಮಾರ್ ಇಬ್ಬರಿಗೂ ಒಂದು ಆಸೆಯಿತ್ತಂತೆ. ಅದನ್ನ ಹಿರಿಯ ನಟ ಶ್ರೀನಿವಾಸ ಮೂರ್ತಿ ಅವರ ಬಳಿ ರಾಜ್ ದಂಪತಿ ಹೇಳಿಕೊಂಡಿದ್ದಂತೆ.[ಇದಕ್ಕೆ ವಿಚಿತ್ರ ಅಂತೀರೋ.. ಕಾಕತಾಳೀಯ ಅಂತೀರೋ.. ನಿಮಗೆ ಬಿಟ್ಟಿದ್ದು.!]

ಏನದು ಪಾರ್ವತಮ್ಮ ಅವರ ಆಸೆ

ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಮೂವರಿಂದ ಒಂದು ಪೌರಣಿಕ ನಾಟಕವನ್ನ ಮಾಡಿಸಬೇಕು ಎಂಬ ಆಶಯವನ್ನ ರಾಜ್ ಮತ್ತು ಪಾರ್ವತಮ್ಮ ಅವರು ಇಟ್ಟುಕೊಂಡಿದ್ದರಂತೆ. ಈ ನಾಟಕವನ್ನ ಮಾಡಿಸುವಂತೆ ಶ್ರೀನಿವಾಸ ಮೂರ್ತಿ ಅವರ ಬಳಿ ಹೇಳಿಕೊಂಡಿದ್ದರಂತೆ.[ಪಾರ್ವತಮ್ಮ ಪರಿಚಯಿಸಿದ ನಟಿಯರಿಂದು 'ದೊಡ್ಡ ಸ್ಟಾರ್'ಗಳು]

ನೆರವೇರದ ರಾಜ್ ದಂಪತಿಯ ಆಸೆ!

ಇದುವರೆಗೂ ಮೂವರು ಮಕ್ಕಳು ಒಂದೇ ಚಿತ್ರದಲ್ಲಿ ಅಭಿನಯಿಸಿಲ್ಲ. ಇನ್ನು ಪೌರಣಿಕ ನಾಟಕವನ್ನ ಮಾಡಿಸುವ ಆಸೆಯೂ ಈಡೇರಲಿಲ್ಲ. ಬಹುಶಃ ಮುಂದಿನ ದಿನಗಳಲ್ಲಿ ಈ ಆಸೆಯನ್ನ ಡಾ.ರಾಜ್ ಪುತ್ರರು ನೆರವೇರಿಸಬಹುದು ಎಂಬ ಸಣ್ಣ ಆಶಯ ಕಾಡುತ್ತಿದೆ.[ಪತಿಯ ಹಾದಿಯಲ್ಲಿ ಪತ್ನಿ: ಅಂಧರ ಬಾಳಲ್ಲಿ ಹೊಸಬೆಳಕು ಮೂಡಿಸಲಿರುವ 'ದೊಡ್ಮನೆ' ಅಮ್ಮ]

English summary
Parvathamma Rajkumar's Desire Was Not Fulfilled. Senior Actor Srinivasa Murthy Reveal The Desire of Late Parvathamma Rajkumar

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada