»   » ರಕ್ಷಿತ್ ಶೆಟ್ಟಿ ಗೆ ಮತ್ತೆ ತಂದೆ ಆಗ್ತಿದಾರೆ ಅನಂತ್ ನಾಗ್

ರಕ್ಷಿತ್ ಶೆಟ್ಟಿ ಗೆ ಮತ್ತೆ ತಂದೆ ಆಗ್ತಿದಾರೆ ಅನಂತ್ ನಾಗ್

Posted By:
Subscribe to Filmibeat Kannada

ರಕ್ಷಿತ್ ಶೆಟ್ಟಿ ಅಂದ್ರೆ ಕಿರಿಕ್, ಕಿರಿಕ್ ಅಂದ್ರೆ ರಕ್ಷಿತ್ ಶೆಟ್ಟಿ. ಹೀಗೆ ಹೇಳಲು ಕಾರಣ ಅವರ 'ಕಿರಿಕ್ ಪಾರ್ಟಿ' ಚಿತ್ರ. ಯಾಕಂದ್ರೆ ಸ್ಯಾಂಡಲ್ ವುಡ್‌ ನಲ್ಲಿ ಈಗ ಟ್ರೆಂಡಿಂಗ್ ನಲ್ಲಿ ರನ್‌ ಆಗುತ್ತಿರುವ ಚಿತ್ರ ಇದು. ಅಲ್ಲದೇ ಈ ಚಿತ್ರದಲ್ಲಿ ಅವರದೇ ಆದ ಕಿರಿಕ್‌ ಗಳನ್ನು ತೆರೆ ಮೇಲೆ ತೋರಿಸಿರುವುದರಿಂದ ಕಿರಿಕ್ ರಕ್ಷಿತ್ ಶೆಟ್ಟಿ ಅಂತ ಅನ್ನಬಹುದು.['ಕಿರಿಕ್ ಪಾರ್ಟಿ' ವಿಮರ್ಶೆ: ಮತ್ತೆ ನೆನಪಾಗುತ್ತಿದೆ ಕಾಲೇಜಿನ 'ಜಾಲಿಲೈಫ್'!]

ಅಂದಹಾಗೆ ರಕ್ಷಿತ್ ಶೆಟ್ಟಿ 'ಕಿರಿಕ್ ಪಾರ್ಟಿ' ಯಶಸ್ಸಿನಲ್ಲಿ ಇರುವಾಗಲೇ ಅವರ ಬಗ್ಗೆ ಈಗೊಂದು ಹೊಸ ಸುದ್ದಿ ಹರಿದಾಡುತ್ತಿದೆ. 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರ ಮೂಲಕ ಒಂದಾಗಿದ್ದ ರಕ್ಷಿತ್ ಶೆಟ್ಟಿ ಮತ್ತು ಅನಂತ್ ನಾಗ್ ಮತ್ತೊಮ್ಮೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ..

ರಕ್ಷಿತ್ ಶೆಟ್ಟಿ ಮತ್ತು ಅನಂತ್ ನಾಗ್ ಮತ್ತೆ ಒಂದೇ ಚಿತ್ರದಲ್ಲಿ

ಅನಂತ್ ನಾಗ್ ಮತ್ತು ರಕ್ಷಿತ್ ಶೆಟ್ಟಿ ಅಪ್ಪ-ಮಗ ನ ಪಾತ್ರದಲ್ಲಿ ಅಭಿನಯಿಸಿದ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸ್ಯಾಂಡಲ್ ವುಡ್‌ ನಲ್ಲಿ ಉತ್ತಮ ಮೆಸೇಜ್ ನೀಡುವ ಸಿನಿಮಾ ಆಗಿ ಪ್ರಶಂಸೆ ಪಡೆದಿತ್ತು. ಈ ಚಿತ್ರ ಈಗ 9ನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕನ್ನಡ ವಿಭಾಗದಲ್ಲಿ ಪ್ರದರ್ಶನಕ್ಕೆ ಆಯ್ಕೆ ಆಗಿದೆ. ಈಗ ಇದೇ ಜೋಡಿ ಮತ್ತೊಮ್ಮೆ ತೆರೆ ಮೇಲೆ ಬರಲು ಸಿದ್ಧತೆಗಳು ನಡೆಯುತ್ತಿವೆ.['ಗೋಧಿ ಬಣ್ಣ' ವಿಮರ್ಶೆ: ಅಪ್ಪ-ಮಗನ ಅ'ಸಾಧಾರಣ' ಭಾವ-ಬಂಧ]

ಚಿತ್ರ ಯಾವುದು?

ಅಂದಹಾಗೆ ನಿರ್ದೇಶಕನಾಗಿ ಪ್ರಮೋಶನ್ ಪಡೆದಿರುವ ಖ್ಯಾತ ಸಂಕಲನಕಾರ ಸಚಿನ್ ಅವರ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಮತ್ತು ಅನಂತ್ ನಾಗ್ ಮತ್ತೆ ಒಂದಾಗಿ ನಟಿಸುತ್ತಿದ್ದಾರೆ. ಆದರೆ ಸಿನಿಮಾದ ಹೆಸರು ಇನ್ನೂ ಬಹಿರಂಗವಾಗಿಲ್ಲ.

ಚಿತ್ರೀಕರಣ ಯಾವಾಗ?

ಹೆಸರಿಡದ ಈ ಚಿತ್ರಕ್ಕೆ ರಕ್ಷಿತ್ ಶೆಟ್ಟಿ 'ಕಿರಿಕ್ ಪಾರ್ಟಿ' ಪ್ರಚಾರ ಪ್ರವಾಸ ಮುಗಿಸಿದ ನಂತರ, ಫೆಬ್ರವರಿಯಿಂದ ಚಿತ್ರೀಕರಣ ಆರಂಭವಾಗುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಅನಂತ್ ನಾಗ್ ಅವರು ಸ್ಕ್ರಿಪ್ಟ್ ಒಪ್ಪಿದ್ದಾರೆ ಎಂದು ತಿಳಿಯಲಾಗಿದೆ. ಚಿತ್ರದ ಹಿರೋಯಿನ್ ಯಾರು ಗೊತ್ತೇ? ಮುಂದೆ ಓದಿ..

ರಕ್ಷಿತ್ ಶೆಟ್ಟಿಗೆ ಇವರೇ ಹಿರೋಯಿನ್‌...

ಇದೇ ಮೊದಲ ಬಾರಿಗೆ ರಕ್ಷಿತ್ ಶೆಟ್ಟಿ ಗೆ ಕಾಂಬಿನೇಷನ್‌ ಆಗಿ ಶಾನ್ವಿ ಶ್ರೀವಾಸ್ತವ, ಸಚಿನ್ ಅವರ ಚಿತ್ರದ ಮೂಲಕ ನಟಿಸಲಿದ್ದಾರೆ.

ಅನಂತ್ ನಾಗ್ ಮತ್ತೆ ಅಪ್ಪನ ಪಾತ್ರದಲ್ಲಿ

ವಿಶೇಷ ಅಂದ್ರೆ ಅನಂತ್ ನಾಗ್ ಮತ್ತೆ ರಕ್ಷಿತ್ ಶೆಟ್ಟಿ ಗೆ ತಂದೆ ಆಗಿ ಪಾತ್ರ ನಿರ್ವಹಿಸಲಿದ್ದಾರೆ. ಜೊತೆಗೆ ಶಾನ್ವಿ ಶ್ರೀವಾಸ್ತವ ನಾಯಕ ನಟಿ ಆಗಿ ಕಾಣಿಸಿಕೊಳ್ಳುತ್ತಿರುವುದರಿಂದ ಸಿನಿಮಾ ಬಗ್ಗೆ ಕುತೂಹಲ ಮೂಡಲು ಕಾರಣವಾಗಿದೆ.

ಸಚಿನ್ ರವಿ ಆಕ್ಷನ್‌ ಕಟ್ ಹೇಳಲಿರುವ, ಅನಂತ್ ನಾಗ್ ಮತ್ತೆ ರಕ್ಷಿತ್ ಶೆಟ್ಟಿ ಅಭಿನಯದ ಚಿತ್ರವನ್ನು ಎಚ್‌ ಕೆ ಪ್ರಕಾಶ್ ನಿರ್ಮಿಸಲಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಅವರು ಸಂಗೀತ ಸಂಯೋಜನೆ ಮಾಡಲಿದ್ದಾರೆ.

English summary
'Godhi Banna Sadharana Mykattu' Stars Anant Nag and Rakshit Shetty Coming together with Sachin Ravi Upcoming Movie. Here is full details of the their next movie.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X