»   » ಟ್ರೋಲ್ ಪೇಜ್ ಗಳಿಗೆ ಆಹಾರವಾದ ರಕ್ಷಿತ್-ರಶ್ಮಿಕಾ ವಯಸ್ಸಿನ ಅಂತರ.!

ಟ್ರೋಲ್ ಪೇಜ್ ಗಳಿಗೆ ಆಹಾರವಾದ ರಕ್ಷಿತ್-ರಶ್ಮಿಕಾ ವಯಸ್ಸಿನ ಅಂತರ.!

Posted By:
Subscribe to Filmibeat Kannada

'ಸಿಂಪಲ್ ಸ್ಟಾರ್' ರಕ್ಷಿತ್ ಶೆಟ್ಟಿ ಹಾಗೂ ಮುದ್ದು ಮುಖದ ನಟಿ ರಶ್ಮಿಕಾ ಮಂದಣ್ಣ ವೈವಾಹಿಕ ಜೀವನಕ್ಕೆ ಕಾಲಿಡುವುದು ಪಕ್ಕಾ ಆಗಿದೆ. ಮುಂದಿನ ತಿಂಗಳು ಈ ಜೋಡಿಯ ನಿಶ್ಚಿತಾರ್ಥ ನಡೆಯಲಿದೆ.

ಜುಲೈ 3 ರಂದು ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಎಂಗೇಜ್ಮೆಂಟ್ ಕೊಡಗಿನಲ್ಲಿ ನಡೆಯುವುದು ಪಕ್ಕಾ ಆಗಿದೆ. ಈ ಸುದ್ದಿ ಕೆಲವರಿಗೆ ಬೆಲ್ಲ ಸವಿದಷ್ಟೇ ಸಿಹಿ ಆಗಿದ್ದರೆ, ಟ್ರೋಲ್ ಪೇಜ್ ಗಳು ಮಾತ್ರ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ನಡುವೆ ಇರುವ ವಯಸ್ಸಿನ ಅಂತರದ ಕುರಿತು ಕಾಲೆಳೆಯುವುದರಲ್ಲಿ ಬಿಜಿ ಅಗಿದೆ. ಮುಂದೆ ಓದಿರಿ....

ಇಬ್ಬರ ನಡುವೆ 13 ವರ್ಷ ಅಂತರ

ಮೊನ್ನೆಯಷ್ಟೇ ನಟ ರಕ್ಷಿತ್ ಶೆಟ್ಟಿ ತಮ್ಮ 34ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡರು. ನಟಿ ರಶ್ಮಿಕಾ ಮಂದಣ್ಣ ರವರಿಗೆ ಇನ್ನೂ 21 ವರ್ಷ. ಇಬ್ಬರ ನಡುವೆ 13 ವರ್ಷಗಳ ಅಂತರ ಇದೆ. ಇದನ್ನೇ ಗುರಿಯಾಗಿಸಿಕೊಂಡು ಕೆಲವರು ಟ್ರೋಲ್ ಮಾಡುತ್ತಿದ್ದಾರೆ.

[ಭಾವಿ ಅಳಿಯ ರಕ್ಷಿತ್ ಶೆಟ್ಟಿಗೆ ರಶ್ಮಿಕಾ ತಂದೆ ಕೊಟ್ಟ ದುಬಾರಿ ಉಡುಗೊರೆ ಏನ್ಗೊತ್ತೇ.?]

ಸೌಂದರ್ಯದ ಮುಂದೆ ವಯಸ್ಸು ಎಲ್ಲಿ.?

ಸೌಂದರ್ಯ ಇರುವಾಗ ವಯಸ್ಸು ಬರೀ ನೆಪ ಮಾತ್ರ ಎಂಬುದು ಟ್ರೋಲ್ ಹುಡುಗರು ಕಂಡುಕೊಂಡಿರುವ ಹೊಸ ಫಾರ್ಮುಲಾ. (ಚಿತ್ರಕೃಪೆ: ನಮ್ಮ ಕರ್ನಾಟಕ ಮೀಮ್ಸ್)

[ಅಂತೂ 'ಸುಳ್ಳು' ನಿಜ ಆಯ್ತು: ಜುಲೈ 3 ರಂದು ರಕ್ಷಿತ್-ರಶ್ಮಿಕಾ ನಿಶ್ಚಿತಾರ್ಥ ನಿಕ್ಕಿ ಆಯ್ತು.!]

ಹೈಸ್ಕೂಲ್ ಹುಡುಗನ ಕಥೆ

ರಕ್ಷಿತ್ ಶೆಟ್ಟಿ ತಮ್ಮ ಮಕ್ಕಳಿಗೆ ಏನ್ ಹೇಳ್ಬಹುದು.? ಈ ಟ್ರೋಲ್ ನೋಡಿ ಅರ್ಥ ಮಾಡಿಕೊಳ್ಳಿ.. (ಚಿತ್ರಕೃಪೆ: ನಮ್ಮ ಕರ್ನಾಟಕ ಮೀಮ್ಸ್)

[ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದಂದು ರಶ್ಮಿಕಾ ಬಾಯಿಂದ ಹೊರಬಂತು 'ದೊಡ್ಡ' ಸತ್ಯ.!]

ಟ್ಯಾಲೆಂಟ್ ಅಂದ್ರೆ ಇದು.!

'ರೀಲ್'ನಲ್ಲಿ ಸೀನಿಯರ್ ಹುಡುಗಿಯನ್ನು ಪಟಾಯಿಸುವುದು, ನಿಜ ಜೀವನದಲ್ಲಿ ಜ್ಯೂನಿಯರ್ ಹುಡುಗಿಯನ್ನು ಪಟಾಯಿಸುವುದೇ ನಿಜವಾದ ಟ್ಯಾಲೆಂಟ್ ಅಂತೆ.! (ಚಿತ್ರಕೃಪೆ: ನಮ್ಮ ಕರ್ನಾಟಕ ಮೀಮ್ಸ್)

English summary
Kannada Actor Rakshit Shetty and Rashmika Mandanna's age difference gets trolled on Social Media

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada