»   » ಅಂತೂ 'ಸುಳ್ಳು' ನಿಜ ಆಯ್ತು: ಜುಲೈ 3 ರಂದು ರಕ್ಷಿತ್-ರಶ್ಮಿಕಾ ನಿಶ್ಚಿತಾರ್ಥ ನಿಕ್ಕಿ ಆಯ್ತು.!

ಅಂತೂ 'ಸುಳ್ಳು' ನಿಜ ಆಯ್ತು: ಜುಲೈ 3 ರಂದು ರಕ್ಷಿತ್-ರಶ್ಮಿಕಾ ನಿಶ್ಚಿತಾರ್ಥ ನಿಕ್ಕಿ ಆಯ್ತು.!

Posted By:
Subscribe to Filmibeat Kannada

'ಸಿಂಪಲ್ ಸ್ಟಾರ್' ರಕ್ಷಿತ್ ಶೆಟ್ಟಿ ಮತ್ತು 'ಕಿರಿಕ್ ಪಾರ್ಟಿ' ಹೀರೋಯಿನ್ ರಶ್ಮಿಕಾ ಅವರ ಮಧ್ಯೆ ಲವ್ ಆಗಿದೆ, ಆದಷ್ಟೂ ಬೇಗ ಮದುವೆ ಆಗ್ತಿದ್ದಾರೆ ಎಂಬ ಸುದ್ದಿ ಇಡೀ ಇಂಡಸ್ಟ್ರಿಯಲ್ಲಿ ಹರಿದಾಡುತ್ತಿತ್ತು. ಇದೀಗ, ಈ ಸುದ್ದಿಯನ್ನ ಸ್ವತಃ ರಕ್ಷಿತ್ ಶೆಟ್ಟಿ ಅವರು ಅಧಿಕೃತ ಘೋಷಣೆ ಮಾಡಿದ್ದಾರೆ.

ಇಂದು (ಜೂನ್ 6) ರಕ್ಷಿತ್ ಶೆಟ್ಟಿ ತಮ್ಮ 34ನೇ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂತಸದ ಸಂದರ್ಭದಲ್ಲಿ ಸಿಂಪಲ್ ಸ್ಟಾರ್ ತಮ್ಮ ಮದುವೆ ಬಗ್ಗೆ ಮನಬಿಚ್ಚಿ ಮಾತನಾಡಿದ್ದು, ಕಿರಿಕ್ ನಾಯಕಿ ರಶ್ಮಿಕಾ ಅವರ ಜೊತೆ ಸಪ್ತಪದಿ ತುಳಿಯಲಿದ್ದೇನೆ ಎಂದು ಸರ್ಪ್ರೈಸ್ ಕೊಟ್ಟಿದ್ದಾರೆ.

ಹಾಗಾದ್ರೆ, 'ಕಿರಿಕ್ ಜೋಡಿ'ಯ ನಿಶ್ಚಿತಾರ್ಥ ಯಾವಾಗ? ಮದುವೆ ಯಾವಾಗ ಎಂದು ಮುಂದೆ ಓದಿ......

ರಕ್ಷಿತ್ ಬರ್ತ್ ಡೇ ಗೆ 'ಪ್ರೀತಿಯೇ' ಗಿಫ್ಟ್

ಇಷ್ಟು ದಿನ ರಕ್ಷಿತ್ ಹಾಗೂ ರಶ್ಮಿಕಾ ಮಂದಣ್ಣ ಅವರ ಮಧ್ಯೆ ಲವ್, ಪ್ರೀತಿ ಇದೆ ಎಂಬುದು ಬರಿ ವದಂತಿಗಳು ಎನ್ನಲಾಗುತ್ತಿತ್ತು. ಆದ್ರೀಗ, ಇದು ಅಧಿಕೃತವಾಗಿದೆ. ಈ ಮೂಲಕ ಗಾಸಿಪ್ ಗಳಿಗೆಲ್ಲಾ ಸ್ವತಃ ರಕ್ಷಿತ್ ಶೆಟ್ಟಿ ಅವರೇ ಬ್ರೇಕ್ ಹಾಕಿದ್ದಾರೆ.

ಸತ್ಯ ಒಪ್ಪಿಕೊಂಡ ರಕ್ಷಿತ್ ಶೆಟ್ಟಿ

ಇಂದು (ಜೂನ್ 6) ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಅವರನ್ನ ಮದುವೆ ಆಗುತ್ತಿರುವುದಾಗಿ ಬಹಿರಂಗವಾಗಿ ಮಾಧ್ಯಮಗಳ ಮುಂದೆ ಒಪ್ಪಿಕೊಂಡಿದ್ದಾರೆ.

ಜುಲೈ 3 ರಂದು ನಿಶ್ಚಿತಾರ್ಥ ಪಕ್ಕಾ

ಈ ಮೂಲಕ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಜುಲೈ 3 ರಂದು ನಡೆಯಲಿರುವುದು ಪಕ್ಕಾ ಆಗಿದೆ. ಕೂರ್ಗ್ ನಲ್ಲಿರುವ ರಶ್ಮಿಕಾ ಅವರ ಮನೆಯಲ್ಲಿ ನಿಶ್ಚಿತಾರ್ಥ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಕುಟುಂಬದವರಿಗೆ ಮಾತ್ರ ಆಹ್ವಾನ ನೀಡಲಾಗುವುದಂತೆ.[ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ ಬಗ್ಗೆ ಕಿವಿಗೆ ಬಿದ್ದ ಹೊಸ ಸುದ್ದಿ ಇದು.!]

ರಶ್ಮಿಕಾ ಮನೆಯಲ್ಲಿ ಮಾತನಾಡಿದ್ದ ರಕ್ಷಿತ್

ಪರಸ್ಪರ ಇಬ್ಬರಲ್ಲೂ ಪ್ರೀತಿ ಇತ್ತು. ಆದ್ರೆ, ಯಾರೊಬ್ಬರು ಹೊರಗೆ ಹೇಳಿಕೊಂಡಿರಲಿಲ್ಲ. ಆದ್ರೆ, ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಸಾರವಾದ ಮೇಲೆ, ಸ್ವತಃ ರಕ್ಷಿತ್ ಶೆಟ್ಟಿ ಅವರೇ ರಶ್ಮಿಕಾ ಮಂದಣ್ಣ ಅವರ ಮನೆಯಲ್ಲಿ ಹೋಗಿ ಈ ಬಗ್ಗೆ ಮಾತನಾಡಿದ್ದರಂತೆ.

2 ವರ್ಷದ ನಂತರ ಮದುವೆ!

ಈಗ ನಿಶ್ಚಿತಾರ್ಥ ಮಾಡಿಕೊಳ್ಳಲು ನಿರ್ಧರಿಸಿರುವ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ, 2 ವರ್ಷದ ನಂತರ ಮದುವೆ ಆಗಲು ಯೋಚನೆ ಮಾಡಿದ್ದಾರಂತೆ.

ರಶ್ಮಿಕಾ ಮಂದಣ್ಣ ಕೊಟ್ಟ ಸುಳಿವು

ಇದಕ್ಕೂ ಮುಂಚೆ ನಟಿ ರಶ್ಮಿಕಾ ಮಂದಣ್ಣ ಅವರು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕುವುದರ ಮೂಲಕ ಈ ಬಗ್ಗೆ ಸುಳಿವು ಕೊಟ್ಟಿದ್ದರು. ''ನೀವು ಪ್ರಯತ್ನ ಪಡದೆ ಇದ್ದರೂ ಜನ ನಿಮ್ಮನ್ನು ಪ್ರೀತಿಸುತ್ತಾರೆ. ಅದರಲ್ಲಿ ನನ್ನ ತಂದೆ-ತಾಯಿ ಕೂಡ ಒಬ್ಬರು. ನಮ್ಮ ಪುಟಾಣಿ ಪರಿವಾರಕ್ಕೆ ನಿಮಗೆ ಆತ್ಮೀಯ ಸ್ವಾಗತ'' ಎಂದು ರಕ್ಷಿತ್ ಅವರನ್ನ ಮದುವೆಯಾಗುತ್ತಿದ್ದೇನೆ ಎಂದು ಪರೋಕ್ಷವಾಗಿ ಹೇಳಿದ್ದರು.[ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದಂದು ರಶ್ಮಿಕಾ ಬಾಯಿಂದ ಹೊರಬಂತು 'ದೊಡ್ಡ' ಸತ್ಯ.!]

English summary
Actor Rakshit Shetty And Rashmika Mandanna Marriage Fixed

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada