»   » ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದಂದು ರಶ್ಮಿಕಾ ಬಾಯಿಂದ ಹೊರಬಂತು 'ದೊಡ್ಡ' ಸತ್ಯ.!

ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದಂದು ರಶ್ಮಿಕಾ ಬಾಯಿಂದ ಹೊರಬಂತು 'ದೊಡ್ಡ' ಸತ್ಯ.!

Posted By:
Subscribe to Filmibeat Kannada

'ಸಿಂಪಲ್ ಸ್ಟಾರ್' ರಕ್ಷಿತ್ ಶೆಟ್ಟಿ ಹಾಗೂ ಮುದ್ದು ಮುಖದ ನಟಿ ರಶ್ಮಿಕಾ ಮಂದಣ್ಣ ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಎಂಬ ಗುಸುಗುಸು ಇಂದು-ನಿನ್ನೆಯದಂತೂ ಅಲ್ಲವೇ ಅಲ್ಲ. ಸದ್ಯದಲ್ಲಿಯೇ ಇಬ್ಬರ ನಿಶ್ಚಿತಾರ್ಥ ನಡೆಯಲಿದೆ ಎಂಬ ಗುಲ್ಲು ಕೂಡ ಗಾಂಧಿನಗರದಲ್ಲಿ ಹಬ್ಬಿದೆ. 'ಇವೆಲ್ಲ ಶುದ್ಧ ಸುಳ್ಳು' ಎಂದು ನಟಿ ರಶ್ಮಿಕಾ ಮಂದಣ್ಣ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಈಗ ಅದೇ ರಶ್ಮಿಕಾ ಮಂದಣ್ಣ ಬಾಯಿಂದ ಒಂದು 'ದೊಡ್ಡ' ಸತ್ಯ ಹೊರಗೆ ಬಂದಿದೆ.!

ಇಂದು ನಟ ರಕ್ಷಿತ್ ಶೆಟ್ಟಿ ರವರ ಹುಟ್ಟುಹಬ್ಬ. ಜನ್ಮದಿನದ ಸಂಭ್ರಮದಲ್ಲಿ ಇರುವ ರಕ್ಷಿತ್ ಶೆಟ್ಟಿಗೆ ಶುಭಾಶಯ ತಿಳಿಸುವ ನೆಪದಲ್ಲಿ ನಟಿ ರಶ್ಮಿಕಾ ಮಂದಣ್ಣ ಒಂದು ಗುಟ್ಟನ್ನ ರಟ್ಟು ಮಾಡಿದ್ದಾರೆ. ಬಾಕಿ ಮ್ಯಾಟರ್ 'ಸ್ಲೈಡ್' ಪ್ಲೀಸ್.....

ರಕ್ಷಿತ್ ಶೆಟ್ಟಿಗೆ 34ನೇ ವರ್ಷದ ಹುಟ್ಟುಹಬ್ಬ ಸಂಭ್ರಮ

ನಟ ರಕ್ಷಿತ್ ಶೆಟ್ಟಿಗೆ ಇಂದು 34ನೇ ವರ್ಷದ ಹುಟ್ಟುಹಬ್ಬ ಸಂಭ್ರಮ. ಜನ್ಮದಿನದ ಸಡಗರದಲ್ಲಿ ಇರುವ ನಟ ರಕ್ಷಿತ್ ಶೆಟ್ಟಿ ರವರಿಗೆ ನಟಿ ರಶ್ಮಿಕಾ ಮಂದಣ್ಣ ಹೇಗೆ ವಿಶ್ ಮಾಡಿದ್ದಾರೆ ಗೊತ್ತಾ.?

ಫೇಸ್ ಬುಕ್ ನಲ್ಲಿ ರಶ್ಮಿಕಾ ಮಂದಣ್ಣ ವಿಶ್

''ನಾನು ಭೇಟಿ ಮಾಡಿರುವ ಅತಿ ವಿನಮ್ರ ವ್ಯಕ್ತಿಯಾದ ರಕ್ಷಿತ್ ಶೆಟ್ಟಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು'' ಎನ್ನುವ ಮೂಲಕ ತಮ್ಮ ಅಫೀಶಿಯಲ್ ಫೇಸ್ ಬುಕ್ ಅಕೌಂಟ್ ನಲ್ಲಿ ನಟಿ ರಶ್ಮಿಕಾ ಮಂದಣ್ಣ ವಿಶ್ ಮಾಡಿದ್ದಾರೆ. ಇಷ್ಟೇ ಆಗಿದ್ರೆ ಸುದ್ದಿ ಆಗುತ್ತಿರಲಿಲ್ಲ. ಇದರ ಜೊತೆಗೆ ಇನ್ನೆರಡು ಸಾಲುಗಳು ರಶ್ಮಿಕಾ ಕಡೆಯಿಂದ ಬಂದಿದೆ. ಅದೇನು ಅಂದ್ರೆ...

ನಮ್ಮ ಕುಟುಂಬಕ್ಕೆ ಸ್ವಾಗತ

ಬರ್ತಡೇ ದಿನ ರಕ್ಷಿತ್ ಶೆಟ್ಟಿಗೆ ವಿಶ್ ಮಾಡುವುದರ ಜೊತೆಗೆ, ''ನೀವು ಪ್ರಯತ್ನ ಪಡದೆ ಇದ್ದರೂ ಜನ ನಿಮ್ಮನ್ನು ಪ್ರೀತಿಸುತ್ತಾರೆ. ಅದರಲ್ಲಿ ನನ್ನ ತಂದೆ-ತಾಯಿ ಕೂಡ ಒಬ್ಬರು. ನಮ್ಮ ಪುಟಾಣಿ ಪರಿವಾರಕ್ಕೆ ನಿಮಗೆ ಆತ್ಮೀಯ ಸ್ವಾಗತ'' ಎಂದು ಫೇಸ್ ಬುಕ್ ನಲ್ಲಿ ನಟಿ ರಶ್ಮಿಕಾ ಮಂದಣ್ಣ 'ಸತ್ಯ' ಬಾಯಿಬಿಟ್ಟಿದ್ದಾರೆ.

ಒಂದು ಫೋಟೋ ಕೂಡ ಹಾಕಿದ್ದಾರೆ.!

''ನಮ್ಮ ಪುಟ್ಟ ಕುಟುಂಬಕ್ಕೆ ನಿಮಗೆ ಸ್ವಾಗತ'' ಎಂಬ ಸಂದೇಶ ಹೊತ್ತಿರುವ ರಕ್ಷಿತ್ ಶೆಟ್ಟಿ ಜೊತೆಗೆ ರಶ್ಮಿಕಾ ಮಂದಣ್ಣ ತಂದೆ ಇರುವ ಫೋಟೋವೊಂದನ್ನ ಕೂಡ ಫೇಸ್ ಬುಕ್ ನಲ್ಲಿ ನಟಿ ರಶ್ಮಿಕಾ ಪೋಸ್ಟ್ ಮಾಡಿದ್ದಾರೆ.

ಅಂತೂ-ಇಂತೂ ಸತ್ಯ ಹೊರಬಂತಲ್ಲ.!

''ನಮ್ಮ ನಡುವೆ ಏನಿಲ್ಲ ಏನಿಲ್ಲ... ಎಲ್ಲವೂ ಗಾಸಿಪ್ ಅಷ್ಟೇ'' ಎಂದು ಇಷ್ಟು ದಿನ ಹೇಳಿಕೊಳ್ಳುತ್ತಿದ್ದ ಈ ಜೋಡಿ ಇದೀಗ ಸತ್ಯ ಬಾಯಿ ಬಿಟ್ಟಿರುವ ಹಾಗಿದೆ. ''ನಮ್ಮ ಪುಟ್ಟ ಕುಟುಂಬಕ್ಕೆ ಸ್ವಾಗತ'' ಎಂದು ರಶ್ಮಿಕಾ ಹೇಳಿರುವುದನ್ನು ನೋಡಿದರೆ, ರಶ್ಮಿಕಾ ಕುಟುಂಬದಲ್ಲಿ ನಟ ರಕ್ಷಿತ್ ಶೆಟ್ಟಿ ಒಬ್ಬರಾಗಲಿದ್ದಾರೆ ಎಂದರ್ಥ ತಾನೆ.?!

ರಕ್ಷಿತ್ ಶೆಟ್ಟಿ ಕೈ ಹಿಡಿದುಕೊಂಡಿರುವ ರಶ್ಮಿಕಾ ತಂದೆ

ನಟ ರಕ್ಷಿತ್ ಶೆಟ್ಟಿ ರವರ ಕೈಯನ್ನು ರಶ್ಮಿಕಾ ತಂದೆ ಹಿಡಿದುಕೊಂಡಿರುವುದನ್ನು ನೋಡಿದರೆ, ಮದುವೆಯ ಮಾತುಕತೆ ಆರಂಭವಾಗಿದ್ಯಾ.? ಎಂಬ ಕುತೂಹಲ ಸಹಜವಾಗಿ ಎಲ್ಲರಲ್ಲೂ ಮೂಡಿದೆ.

ಇತ್ತೀಚೆಗಷ್ಟೇ ನಿಶ್ಚಿತಾರ್ಥದ ಸುದ್ದಿ ಹೊರಬಿದ್ದಿತ್ತು.!

ನಟಿ ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ಸದ್ಯದಲ್ಲಿಯೇ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೆಲವೇ ದಿನಗಳ ಹಿಂದೆ ಹೊರಬಿದ್ದಿತ್ತು.[ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ ಬಗ್ಗೆ ಕಿವಿಗೆ ಬಿದ್ದ ಹೊಸ ಸುದ್ದಿ ಇದು.!]

ಜುಲೈ 3 ರಂದು ಪಕ್ಕಾ.!?

ಹಾಗಾದ್ರೆ, ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಜುಲೈ 3 ರಂದು ನಡೆಯಲಿದ್ಯಾ.? ಈ ಪ್ರಶ್ನೆಗೆ ಇನ್ನೂ ರಕ್ಷಿತ್-ರಶ್ಮಿಕಾ ಉತ್ತರ ಕೊಟ್ಟಿಲ್ಲ.

ರಕ್ಷಿತ್ ಶೆಟ್ಟಿ ಹೇಳಿದ್ದು ನಿಜ ಆಯ್ತಲ್ಲ.?!

''ಒಂದು ಗಾಸಿಪ್ ಸುದ್ದಿ ಕೇಳಿಸ್ತು. ಹೆಣ್ಮಕ್ಕಳು ಬೇಜಾರಾಗಬಹುದು.! ಆದ್ರೆ, ಗಂಡು ಮಕ್ಕಳು ಖುಷಿ ಪಡ್ತಾರೆ. ಈಸ್ ಇಟ್ ರಿಯಲಿ ಟ್ರೂ.? ಇದು ಸಸ್ಪೆನ್ಸ್ ಆಗಿ ಬಿಟ್ಟು ಬಿಡೋಣ್ವಾ ಅಥವಾ ಹೇಳ್ತೀರಾ.?'' ಎಂದು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ ರವರನ್ನ ರಮೇಶ್ ಅರವಿಂದ್ ಕೇಳಿದ್ದರು. ಅದಕ್ಕೆ ''ಇನ್ನೆರಡು ತಿಂಗಳಲ್ಲಿ ಗೊತ್ತಾಗುತ್ತೆ ಬಿಡಿ ಸಾರ್'' ಎಂದು ರಕ್ಷಿತ್ ಶೆಟ್ಟಿ ಹೇಳಿದ್ದರು. ಆ ಮಾತು ಈಗ ನಿಜವಾಗುತ್ತಿದೆಯಲ್ಲ.! ['ನ್ಯೂಸ್'ನಲ್ಲಿ ಏನೂ ಇಲ್ಲ ಅಂದ್ರು, 'ವೀಕೆಂಡ್'ನಲ್ಲಿ ಇನ್ನೆರಡೇ ತಿಂಗಳು ಅಂದ್ರು: ನಿಜಾ ಏನು?]

'ಕಿರಿಕ್ ಪಾರ್ಟಿ' ಸೆಟ್ ನಲ್ಲಿ ಲವ್ ಸ್ಟೋರಿ

'ಕಿರಿಕ್ ಪಾರ್ಟಿ' ಚಿತ್ರದ ಚಿತ್ರೀಕರಣದ ಸಮಯದಲ್ಲಿಯೇ ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ ನಡುವಿನ ಫ್ರೆಂಡ್ ಶಿಪ್ 'ಎಕ್ಸ್ ಟ್ರಾ ಸ್ಪೆಷಲ್' ಆಯ್ತಂತೆ. ಇಬ್ಬರ ಪ್ರೇಮ ಪುರಾಣಕ್ಕೆ ಉಭಯ ಕುಟುಂಬದವರ ಒಪ್ಪಿಗೆ ಸಿಕ್ಕ ಮೇಲೆ ಹಸೆಮಣೆ ಏರಲು ಜೋಡಿ ಸಿದ್ಧವಾಗಿದೆ ಎಂಬುದು ಮೂಲಗಳ ಮಾಹಿತಿ.['ಕಿರಿಕ್ ಜೋಡಿ' ರಕ್ಷಿತ್ ಶೆಟ್ಟಿ-ರಶ್ಮಿಕಾ ಮದುವೆ ಅಂತೆ!]

ಫೇಸ್ ಬುಕ್ ನಲ್ಲಿ ಶುಭಾಶಯಗಳ ಸುರಿಮಳೆ

''ನಮ್ಮ ಪುಟ್ಟ ಕುಟುಂಬಕ್ಕೆ ಸ್ವಾಗತ'' ಎಂದು ರಶ್ಮಿಕಾ ಮಂದಣ್ಣ ಹೇಳಿದ ಕೂಡಲೆ 'ಜೋಡಿ'ಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಬೇಕಾದ್ರೆ, ಒಮ್ಮೆ ಕಾಮೆಂಟ್ಸ್ ಗಳತ್ತ ಗಮನ ಹರಿಸಿ...

ಇದು ಅದೇ ಆಗಿದ್ದರೆ ಕಂಗ್ರಾಟ್ಸ್

ರಶ್ಮಿಕಾ ಮಂದಣ್ಣ ಬಾಯಿ ಬಿಟ್ಟಿರುವ ಸತ್ಯ 'ಮದುವೆ' ಕುರಿತೇ ಆಗಿದ್ದರೆ, ಹೊಸ ಜೋಡಿಗೆ ನಮ್ಮ ಕಡೆಯಿಂದಲೂ ಕಂಗ್ರಾಟ್ಸ್.

English summary
Kannada Actress Rashmika Mandanna has taken her Facebook Account to welcome Rakshit Shetty to her small family. Did Rashmika Mandanna just reveal her marriage plan with Rakshit Shetty.? Read the article to know more.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada