ಕಮಲ್ ಪರ ನಿಂತ ರಮ್ಯಾ, ಕಿಶೋರ್ ಅಂತವರಿಗೆ ಧರ್ಮೆಂದ್ರ ಕುಮಾರ್ 'ಗುಲಾಮಗಿರಿ' ಪಾಠ; ಏನಿದು ತಮಿಳು ಸುಪ್ರಿಮಸಿ?
ತಮಿಳು ನಟ ಕಮಲ್ ಹಾಸನ್ ಕನ್ನಡ ಭಾಷೆಯ ವಿವಾದ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ಕನ್ನಡಿಗರು ಕಮಲ್ ಹಾಸನ್ ಮೇಲೆ ಇಟ್ಟಿದ್ದ ಅಭಿಮಾನವನ್ನು ಮುರಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. "ತಮಿಳಿನಿಂದ ಕನ್ನಡ ಹುಟ್ಟಿದ್ದು.." ಎನ್ನುವ ಹೇಳಿಕೆ ಕಡೊಉವ ಅಗತ್ಯವೇ ಇರಲಿಲ್ಲ ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ. ಕರ್ನಾಟಕದಲ್ಲಿ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಕನ್ನಡ ನಟರೇ ಕೆಲವು ಬೆಂಬಲಕ್ಕೆ ನಿಂತಿದ್ದಾರೆ.
ಕಮಲ್ ಹಾಸನ್ ಹೇಳಿಕೆ ವಿರುದ್ಧ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಉಲ್ಲಿ 'ಥಗ್ ಲೈಫ್' ಬ್ಯಾನ್ ಮಾಡುವ ಚಿಂತನೆ ನಡೆದಿದೆ. ಕನ್ನಡ ಪರ ಸಂಘಟನೆಗಳು ಥಿಯೇಟರ್‌ಗೆ ನುಗ್ಗಿ ಬೆಂಕಿ ಹಚ್ಚುವುದಾಗಿ ಹೇಳಿಕೊಂಡಿದ್ದಾರೆ. ಇಂತಹ ವಾತಾವರಣದಲ್ಲಿ ನಟಿ ರಮ್ಯಾ 'ಥಗ್ ಲೈಫ್' ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಕಿಶೋರ್ ಕೂಡ ಕಮಲ್ ಹಾಸನ್ ಹೇಳಿಕೆ ಪರವಾಗಿ ನಿಂತಿದ್ದಾರೆ. ಶಿವಣ್ಣ ಕ್ಷಮೆ ಕೇಳಿ ಎಂದು ಹೇಳುವುದಿಲ್ಲ ಎಂದಿದ್ದಾರೆ. ಕನ್ನಡ ಕಲಾವಿದರ ಈ ನಡೆ ಬಗ್ಗೆನೂ ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಬ್ಲಾಗರ್ ಹಿಸ್ಟಾರಿಯನ್ ಧರ್ಮೇಂದ್ರ ಕುಮಾರ್ ಆರೇನಹಳ್ಳಿ ಕನ್ನಡ-ತಮಿಳು ಭಾಷೆಯ ವಿವಾದ ಬಂದಾಗ ಯಾಕೆ ಹೀಗಾಗುತ್ತೆ ಎನ್ನುವುದನ್ನು ವಿವರಿಸಿದ್ದಾರೆ. ತಮ್ಮ ಮೈಸೂರಿನ ಕಥೆಗಳು ಬ್ಲಾಗ್‌ನಲ್ಲಿ ಕನ್ನಡದ ಕೆಲ ನಟರು ಕಮಲ್ ಹಾಸನ್ ಪರ ಬ್ಯಾಟ್ ಬೀಸಿದ್ದನ್ನು ತಮಿಳು ಗುಲಾಮಗಿರಿ ಎಂದು ಹೇಳಿದ್ದಾರೆ. ಎರಡು ಶತಮಾನಗಳ ಗುಲಾಮಗಿರಿ ಕಥೆಯನ್ನು ಹೇಳಿದ್ದಾರೆ. ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ತಮಿಳು ಗುಲಾಮಗಿರಿ ಬಗ್ಗೆ ಧರ್ಮೇಂದ್ರ ಕುಮಾರ್ ಹೀಗಂತಾರೆ.
ಏನಿದು ತಮಿಳು ಸುಪ್ರಿಮಸಿ
"ಇದನ್ನು ತಮಿಳು ಸುಪ್ರಿಮಸಿ ಎಂದು ಕರೆಯುತ್ತೇವೆ. ಎರಡು ಶತಮಾನಗಳಿಂದ ಇದು ನಡೆದುಕೊಂಡು ಬಂದಿದೆ. ದಿವಾನ್ ಪೂರ್ಣಯ್ಯನವರು ಯಾವಾಗ ಕೊಯಮತ್ತೂರಿನಿಂದ ಬಂದು ಮೈಸೂರಿನ ದಿವಾನರಾದರಲ್ಲ. ಅಲ್ಲಿಂದ ಹಿಡಿದು, ದಿವಾನ ಪೂರ್ಣಯ್ಯರಿಂದ ಹಿಡಿದು ರಂಗಚಾರಿ, ಶೇಷಾದ್ರಿ ಅಯ್ಯರ್ ಅವರಿಂದ ಹಿಡಿದು ಆಗಿನ ಮೈಸೂರು ಪ್ರಾಂತ್ಯಕ್ಕೆ ಬಂದಿದ್ದರು. ಅವರು ಒಬ್ಬರೇ ಬರಲಿಲ್ಲ. ಅವರೊಂದಿಗೆ ನೂರಾರು ಮಂದಿ ವಿದ್ವಾಂಸರನ್ನು ಸಂಗೀತಕಾರರನ್ನು, ಕಲಾವಿದರನ್ನು ಕರೆದುಕೊಂಡು ಬಂದರು. ಎಲ್ಲಾ ರೀತಿಯ ತಮಿಳು ಕಸುಬುದಾರರನ್ನು ಕರೆದುಕೊಂಡು ಬಂದರು. ಅವತ್ತು ಬಂದಾಗಿನ ತಮಿಳು ಸುಪ್ರಿಮಸಿ ಇವತ್ತೂ ಉಳಿದುಕೊಂಡಿದೆ. ಹಾಗಾಗಿ ಅವರನ್ನು ದೊಡ್ಡ ದೊಡ್ಡ ಹುದ್ದೆಗಳನ್ನು ನೀಡಿದ್ವಿ. ಈ ಸುಪ್ರಿಮಸಿಯನ್ನು ಮುರಿದ ಮೊದಲ ಕನ್ನಡಿಗರು ಸರ್ ಎಂ.ವಿಶ್ವೇಶ್ವರಯ್ಯನವರು. ಇವರು ಮೈಸೂರ ಸಂಸ್ಥಾನದ ಬಂದ ಮೊಟ್ಟ ಮೊದಲ ದಿವಾನ." ಎನ್ನುತ್ತಾರೆ ಧರ್ಮೇಂದ್ರ ಕುಮಾರ್.
ನಾವು ಹೇಳಿದ್ದೇ ಸರಿ ಎಂದು ಕೊಂಡಿದ್ದಾನೆ
"ಶೇಷಾದ್ರಿಪುರಂ, ಮಲ್ಲೇಶ್ವರಂ, ಸರಸ್ವತಿಪುರಂ, ಕೃಷ್ಣಮೂರ್ತಿಪುರಂ ಈ ಪುರಂ ಎನ್ನುವುದನ್ನೆಲ್ಲ ಯಾರು ಮಾಡಿದ್ದು. ಇದು ತಮಿಳರ ಪ್ರಭಾವದಿಂದಲೇ ಬಂದಿದ್ದು. ಅದನ್ನು ಒಪ್ಪಿಕೊಂಡ್ವಿ. ಯಾಕಂದ್ರೆ ಅವರೇ ಬಾಸ್ ಆಗಿದ್ದವರು. ಈ ನಾಡಿನ ದಿವಾನರಾಗಿದ್ದವರು. ಕೊನೆಗೆ ರಾಜಾಜಿನಗರ ಎಂದು ರಾಜಾಜಿ ಅವರ ಹೆಸರಿಟ್ಟು ಗೌರವಿಸಿದ್ವಿ. ತಮಿಳರ ಪ್ರಭಾವ ಹೇಗೆ ಬಂದಿದೆ ಅಂದರೆ, ಅವರು ಹೇಳಿದ್ದೇ ಸರಿ ಎನ್ನುವುದು ಬಂದುಬಿಟ್ಟಿದೆ. ಅದನ್ನೇ ಕಮಲ್ ಹಾಸನ್ ಕೂಡ ತಿಳಿದುಕೊಂಡಿದ್ದಾನೆ. ಯಾಕಂದ್ರೆ ಅವನಿಗೆ ಎರಡು ಶತಮಾನಗಳ ಬ್ಯಾಕಪ್ ಇದೆ. ಅದನ್ನು ಒಪ್ಪಿಕೊಂಡಿರುವ ಮಾನಸಿಕ ಗುಲಾಮಗಿರಿ ನಮಗಿದೆ." ಎಂದು ಹೇಳುತ್ತಾರೆ.
ಕ್ಷಮೆ ಕೇಳಲ್ಲ ಎನ್ನುವುದಕ್ಕೆ 'ಬಾಸಿಸಂ' ಇದೆ
"ಕೆಲವು ನಮ್ಮ ಕನ್ನಡಿಗರೇ ಕಮಲ್ ಹಾಸನ್ ಏನು ಮಹಾ ಅಂದ್ಬಿಟ್ಟ. ಅದ್ಯಾಕೆ ದೊಡ್ಡ ವಿಚಾರ ಮಾಡುತ್ತೀರಿ ಎಂದು ಹೇಳುತ್ತಿದ್ದಾರೆ. ಅವರಿಗೆ ಇದು ದೊಡ್ಡ ವಿಚಾರ ಅಂತಲೇ ಅನಿಸಿಲ್ಲ. ನಮ್ಮ ಕನ್ನಡಿಗರಿಗೇ ಇದು ದೊಡ್ಡ ವಿಚಾರ ಎನಿಸಿಲ್ಲ. ಯಾಕಿಷ್ಟು ಗಲಾಟೆ ಮಾಡುತ್ತಿದ್ದೀರಿ ಎಂದು ಎನಿಸಿದೆ. ಯಾಕಂದ್ರೆ, ಅವರಲ್ಲೂ ಎರಡು ಶತಮಾನಗಳ ಗುಲಾಮಿತನವಿದೆ. ಕಮಲ್ ಹಾಸನ್ ಕೂಡ ಕ್ಷಮೆ ಕೇಳುವುದಿಲ್ಲ ಎನ್ನುವುದರ ಹಿಂದೆ ಅವನ ಎರಡು ಶತಮಾನಗಳ ಹಿಂದಿನ ಬಾಸಿಸಂ ಇದೆ." ಎನ್ನುತ್ತಾರೆ.
ನಾವೇ ದೊಡ್ಡವರೆಂದು ಹೇಳಿಕೊಂಡು ಬಂದಿದ್ದಾರೆ
"ಕಮಲ್ ಹಾಸನ್ ಮನಸ್ಸಿನಲ್ಲಿ ನಾವು ಎಲ್ಲರಿಗಿಂತಲೂ ದೊಡ್ಡವರು ಅನ್ನೋದು ಬಂದಿದೆ. ಯಾಕಂದ್ರೆ, ಅವರಿಗೆ 200 ವರ್ಷ ಸುಪ್ರಿಮಸಿ ಇದೆ. ಅವರ ವಿದ್ವಾಂಸರು, ಸಾಹಿತಿಗಳು, ಲೇಖಕರು ನಾವೇ ದೊಡ್ಡವರು ಎಂದು ಹೇಳಿಕೊಂಡೇ ಬಂದಿದ್ದಾರೆ. ಅವರು ಏನು ಹೇಳುತ್ತಾರೆ ಅಂದರೆ, ತಮಿಳು ಪ್ರಪಂಚದ ಹಳೆಯ ಭಾಷೆ. ಇಡ್ಲಿ, ದೋಸೆ ಕಂಡು ಹಿಡಿದವರು ನಾವೇ ಎನ್ನುವ ಭ್ರಮೆಯಲ್ಲಿ ಅವರಿದ್ದಾರೆ. ಅದೆಲ್ಲ ಸುಳ್ಳು ಅಂದರೆ, ಒಪ್ಪಿಕೊಳ್ಳುವ ಮಾನಸಿಕ ಸ್ಥಿತಿಯಲ್ಲಿಯೇ ಇಲ್ಲ." ಎನ್ನುತ್ತಾರೆ.
"ನಾವು ಹಳೆ ಮೈಸೂರು ಜನ. ಎಂ ಎಸ್ ಸುಬ್ಬಲಕ್ಷ್ಮಿಯವರನ್ನ, ಬಾಲ ಮುರಳಿಕೃಷ್ಣರನ್ನ ಆರಾಧಿಸಿದ್ವಿ ಹೊರತು. ನಮ್ಮವರೇ ಆದ ಗಂಗೂಬಾಯಿ ಹಾನಗಲ್ ಆಗಿರಬಹುದು, ಭೀಮ್ ಸೇನ್ ಜೋಷಿಯವರನ್ನು ನಾವು ಒಪ್ಪಿಕೊಳ್ಳಲೇ ಇಲ್ಲ. ಗಂಗೂಬಾಯಿ ಹಾನಗಲ್, ಭೀಮ್ ಸೇನ್ ಜೋಷಿಯವರನ್ನು ಮಹಾರಾಷ್ಟ್ರದ ಜನ ಒಪ್ಪಿಕೊಂಡಿದ್ದಾರೆ. ಅವರಿಗೂ ಆ ಕಡೆಯವರ ಪ್ರಭಾವವಿತ್ತು. ಹೀಗಾಗಿ ಅವರೂ ಆ ಕಡೆಗೆ ಹೋದರು.


Click it and Unblock the Notifications











