For Quick Alerts
  ALLOW NOTIFICATIONS  
  For Daily Alerts

  ಪುನೀತ್ ರಾಜ್ ಕುಮಾರ್-ಹರ್ಷ ಮಹಾಸಂಗಮದ ಇಂಟ್ರೆಸ್ಟಿಂಗ್ ಡೀಟೈಲ್ಸ್

  By Harshitha
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಾಮಿಡಿ ಕಿಲಾಡಿ ಶರಣ್ ಗೆ ಆಕ್ಷನ್ ಕಟ್ ಹೇಳಿದ ಬಳಿಕ, ರಾಕಿಂಗ್ ಸ್ಟಾರ್ ಯಶ್ ರವರ ಹೊಸ ಚಿತ್ರಕ್ಕೆ ಡೈರೆಕ್ಟರ್ ಕ್ಯಾಪ್ ತೊಡುವ ಮುನ್ನ ನೃತ್ಯ ಸಂಯೋಜಕ ಕಮ್ ನಿರ್ದೇಶಕ ಎ.ಹರ್ಷ ರವರಿಗೆ ಸುವರ್ಣಾವಕಾಶವೊಂದು ಹುಡುಕಿಕೊಂಡು ಬಂದಿದೆ.

  ಹೌದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರಿಗೆ ಆಕ್ಷನ್ ಕಟ್ ಹೇಳುವ ಅವಕಾಶ ಎ.ಹರ್ಷ ಪಾಲಾಗಿದೆ. ಸ್ಯಾಂಡಲ್ ವುಡ್ ನಲ್ಲಿ ಸದ್ಯ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ನ್ಯೂಸ್ ಅಂದ್ರೆ ಇದೇ.!

  ಪುನೀತ್ ರಾಜ್ ಕುಮಾರ್ ಚಿತ್ರಕ್ಕೆ ಎ.ಹರ್ಷ ನಿರ್ದೇಶಕ

  ಪುನೀತ್ ರಾಜ್ ಕುಮಾರ್ ಚಿತ್ರಕ್ಕೆ ಎ.ಹರ್ಷ ನಿರ್ದೇಶಕ

  ನೃತ್ಯ ನಿರ್ದೇಶಕರಾಗಿ ಖ್ಯಾತಿ ಪಡೆದಿರುವ ಹರ್ಷ, 'ಗೆಳೆಯ', 'ಚಿಂಗಾರಿ', ವಜ್ರಕಾಯ', 'ಭಜರಂಗಿ' ಅಂತಹ ಹಿಟ್ ಸಿನಿಮಾಗಳ ಸೂತ್ರಧಾರ. ಇಂತಿಪ್ಪ ಹರ್ಷ ಈಗ ಪುನೀತ್ ರಾಜ್ ಕುಮಾರ್ ಚಿತ್ರಕ್ಕೆ ಸಾರಥ್ಯ ವಹಿಸಿದ್ದಾರೆ. [ರಾಕಿಂಗ್ ಸ್ಟಾರ್ ಯಶ್ ಕಡೆಯಿಂದ ಬಂದ ದಿಢೀರ್ ಸುದ್ದಿ ಇದು.!]

  ಹರ್ಷ ಕನಸು ನನಸು.!

  ಹರ್ಷ ಕನಸು ನನಸು.!

  ಪ್ರಜ್ವಲ್ ದೇವರಾಜ್, ಚೇತನ್, ದರ್ಶನ್, ಶಿವರಾಜ್ ಕುಮಾರ್ ಮತ್ತು ಶರಣ್ ಸೇರಿದಂತೆ ಸ್ಯಾಂಡಲ್ ವುಡ್ ನ ದೊಡ್ಡ ಹೀರೋಗಳ ಸಿನಿಮಾಗಳನ್ನು ನಿರ್ದೇಶಿಸುತ್ತಾ ಬಂದಿರುವ ಹರ್ಷ ಅವರಿಗೆ ಪುನೀತ್ ರಾಜ್ ಕುಮಾರ್ ರವರಿಗಾಗಿ ಚಿತ್ರವೊಂದನ್ನು ನಿರ್ದೇಶಿಸಬೇಕು ಎಂಬುದು ಬಹುಕಾಲದ ಕನಸಾಗಿತ್ತು. ಅದು ಎಂ.ಎನ್.ಕುಮಾರ್ ಮತ್ತು ಜಯಶ್ರೀ ದೇವಿ ಮೂಲಕ ಈಡೇರಿದೆ. [ಮತ್ತೆ ಒಂದಾದ ಹರ್ಷ-ಶಿವಣ್ಣ, ಚಿತ್ರದ ಹೆಸರೇನು ಗೊತ್ತಾ?]

  ಬಿಗ್ ಬಜೆಟ್ ಸಿನಿಮಾ.!

  ಬಿಗ್ ಬಜೆಟ್ ಸಿನಿಮಾ.!

  ಎಂ.ಎನ್.ಕೆ ಮೂವೀಸ್ ಅಡಿಯಲ್ಲಿ ಎಂ.ಎನ್.ಕುಮಾರ್ ಮತ್ತು ಜಯಶ್ರೀ ದೇವಿ ಜಂಟಿ ನಿರ್ಮಾಣದಲ್ಲಿ ಪುನೀತ್ ರಾಜ್ ಕುಮಾರ್ ರವರ ಹೊಸ ಚಿತ್ರ ಸೆಟ್ಟೇರಲಿದೆ.

  'ಮುಕುಂದ ಮುರಾರಿ' ಕೃಪೆ

  'ಮುಕುಂದ ಮುರಾರಿ' ಕೃಪೆ

  ಎಂ.ಎನ್.ಕೆ. ಮೂವೀಸ್ ಲಾಂಛನದಲ್ಲಿ ವಿತರಕ ಎಂ.ಎನ್. ಕುಮಾರ್ ಮತ್ತು ಹಿರಿಯ ನಿರ್ಮಾಪಕಿ ಜಯಶ್ರೀದೇವಿ ನಿರ್ಮಾಣದಲ್ಲಿ, ನಂದ ಕಿಶೋರ ನಿರ್ದೇಶನದಲ್ಲಿ, ಉಪೇಂದ್ರ ಮತ್ತು ಸುದೀಪ್ ಅಭಿನಯದ 'ಮುಕುಂದ ಮುರಾರಿ' ಚಿತ್ರ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೇ ಖುಷಿಯಲ್ಲಿ ಈ ಇಬ್ಬರು ಪುನೀತ್ ರಾಜ್ ಕುಮಾರ್ ಚಿತ್ರಕ್ಕೆ ಬಂಡವಾಳ ಹಾಕಲು ಮನಸ್ಸು ಮಾಡಿದ್ದಾರೆ.

  ಚಿತ್ರ ಸೆಟ್ಟೇರುವುದು ಯಾವಾಗ.?

  ಚಿತ್ರ ಸೆಟ್ಟೇರುವುದು ಯಾವಾಗ.?

  ಮೂಲಗಳ ಪ್ರಕಾರ, 2017ರ ಜನವರಿಯಲ್ಲಿ ಈ ಚಿತ್ರ ಸೆಟ್ಟೇರಲಿದೆ. [ಕಡೆಗೂ ಅಭಿಮಾನಿಗಳ ಆಸೆಗೆ 'ತಥಾಸ್ತು' ಎಂದ ಪುನೀತ್ ರಾಜ್ ಕುಮಾರ್.!]

  ತಾರಾಬಳಗದಲ್ಲಿ ಯಾರ್ಯಾರು.?

  ತಾರಾಬಳಗದಲ್ಲಿ ಯಾರ್ಯಾರು.?

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಹರ್ಷ ಕಾಂಬಿನೇಷನ್ ನಲ್ಲಿ ಚಿತ್ರ ಮೂಡಿಬರುತ್ತಿದೆ ಎನ್ನುವುದು ಬಿಟ್ಟರೆ, ಉಳಿದ ತಾರಾಗಣ, ತಾಂತ್ರಿಕ ವರ್ಗದ ಆಯ್ಕೆ ಪ್ರಕ್ರಿಯೆ ಇನ್ನಷ್ಟೇ ಆರಂಭವಾಗಬೇಕು.

  ಶೀರ್ಷಿಕೆ.?

  ಶೀರ್ಷಿಕೆ.?

  ಪುನೀತ್-ಹರ್ಷ-ಜಯಶ್ರೀದೇವಿ-ಎಂ.ಎನ್.ಕುಮಾರ್ ಮಹಾಸಂಗಮದ ಚಿತ್ರಕ್ಕಿನ್ನೂ ಶೀರ್ಷಿಕೆ ಕೂಡ ಫಿಕ್ಸ್ ಆಗಿಲ್ಲ.

  ರೀಮೇಕ್ ಸಿನಿಮಾ.?

  ರೀಮೇಕ್ ಸಿನಿಮಾ.?

  ಅಂದ್ಹಾಗೆ, ಎಂ.ಎನ್.ಕುಮಾರ್ ಬಳಿ ತಮಿಳಿನ 'ಪೂಜೈ' ಚಿತ್ರದ ರೀಮೇಕ್ ರೈಟ್ಸ್ ಇರುವುದರಿಂದ ಇದು ಅದರ ಕನ್ನಡ ವರ್ಷನ್ ಆಗಲಿದೆ ಅಂತಲೂ ವರದಿ ಆಗಿದೆ. [ದರ್ಶನ್ ಮಾಡಬೇಕಿದ್ದ ಚಿತ್ರಕ್ಕೀಗ ಪುನೀತ್ ನಾಯಕ!]

  ನಿರ್ಮಾಪಕಿ ಜಯಶ್ರೀದೇವಿ ಕುರಿತು...

  ನಿರ್ಮಾಪಕಿ ಜಯಶ್ರೀದೇವಿ ಕುರಿತು...

  ಕನ್ನಡದಲ್ಲಿ ಜಯಶ್ರೀದೇವಿ ನಿರ್ಮಿಸಿದ ಬಹುತೇಕ ಎಲ್ಲವೂ ಸ್ಟಾರ್ ಸಿನಿಮಾಗಳೇ. ಅದರಲ್ಲೂ 'ಹಬ್ಬ', 'ಸ್ನೇಹಲೋಕ', 'ವಂದೇ ಮಾತರಂ', 'ಶ್ರೀ ಮಂಜುನಾಥ' ಸೇರಿದಂತೆ ಅನೇಕ ಮಲ್ಟಿ ಸ್ಟಾರ್ ಸಿನಿಮಾಗಳನ್ನು ನಿರ್ಮಿಸಿದ ಕೀರ್ತಿ ಜಯಶ್ರೀ ದೇವಿ ರವರದ್ದು. ಇಂತಹ ಜಯಶ್ರೀ ದೇವಿ ಅವರು ಕಳೆದ ಏಳು ವರ್ಷಗಳ ಅಜ್ಞಾತವಾಸದಿಂದ ಹೊರಬಂದು 'ಮುಕುಂದ ಮುರಾರಿ' ಚಿತ್ರವನ್ನ ನಿರ್ಮಿಸಿದರು. ಈಗ ಪುನೀತ್ ಚಿತ್ರಕ್ಕೂ ಬಂಡವಾಳ ಹಾಕಲಿದ್ದಾರೆ.

  ಎಂ.ಎನ್.ಕುಮಾರ್ ಕುರಿತು....

  ಎಂ.ಎನ್.ಕುಮಾರ್ ಕುರಿತು....

  ಎಂ.ಎನ್.ಕುಮಾರ್ ಕೂಡ ಕನ್ನಡದ ಅನೇಕ ಚಿತ್ರಗಳನ್ನು ವಿತರಣೆ ಮಾಡುತ್ತಾ, ಜೊತೆಜೊತೆಗೇ ಸಿನಿಮಾ ನಿರ್ಮಾಣವನ್ನೂ ಮಾಡುತ್ತಾ ಬಂದವರು. ಈಗ ಎಂ.ಎನ್. ಕುಮಾರ್, ಜಯಶ್ರೀದೇವಿ, ನಿರ್ದೇಶಕ ಎ. ಹರ್ಷ ಮತ್ತು ಪುನೀತ್ ರಾಜ್‌ಕುಮಾರ್ ಒಳಗೊಂಡಂತೆ ದೊಡ್ಡ ಮಟ್ಟದ ಗೆಲುವನ್ನು ಕಂಡ ಎಲ್ಲರೂ ಒಂದೆಡೆ ಸೇರಿದ್ದಾರೆ.

  English summary
  Choreographer cum Kannada Director A.Harsha to direct Kannada Actor Puneeth Rajkumar's next movie. The movie will be Produced by M.N.Kumar and Jayashree Devi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X