»   » 'ಬಲ್ಲಾಳದೇವ' ರಾಣಾ ದಗ್ಗುಬಾಟಿಗೆ ಕನ್ನಡದ ಯಾವ ನಟ ಅಚ್ಚುಮೆಚ್ಚು?

'ಬಲ್ಲಾಳದೇವ' ರಾಣಾ ದಗ್ಗುಬಾಟಿಗೆ ಕನ್ನಡದ ಯಾವ ನಟ ಅಚ್ಚುಮೆಚ್ಚು?

Posted By:
Subscribe to Filmibeat Kannada

ಎಸ್.ಎಸ್.ರಾಜಮೌಳಿ ನಿರ್ದೇಶನದ 'ಬಾಹುಬಲಿ- 2' ಚಿತ್ರ ಪ್ರಪಂಚದಾದ್ಯಂತ ಸುಮಾರು 1700 ಕೋಟಿ ರೂ ಬಾಕ್ಸ್ ಆಫೀಸ್ ಗಳಿಕೆ ಕಂಡಿದ್ದು, ಇನ್ನೂ ಸಹ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದಲ್ಲಿ ಬಲ್ಲಾಳದೇವ ಪಾತ್ರದಲ್ಲಿ ಅಭಿನಯಿಸಿದ್ದ ರಾಣಾ ದಗ್ಗುಬಾಟಿ ತಮ್ಮ ಕಟ್ಟು ಮಸ್ತಾದ ದೇಹ ಮತ್ತು ವಿಭಿನ್ನ ಪಾತ್ರದಿಂದ ಬಾಹುಬಲಿ ಪ್ರಭಾಸ್ ರಷ್ಟೇ ಜನಮನ್ನಣೆ ಪಡೆದಿದ್ದಾರೆ.[ಪುನೀತ್, ಯಶ್ ರನ್ನು ಶ್ಲಾಘಿಸಿದ ರಿಯಲ್ ಸ್ಟಾರ್ ಉಪೇಂದ್ರ]

ಸಾಮಾನ್ಯವಾಗಿ ಕನ್ನಡ ಚಿತ್ರ ಪ್ರಿಯರಿಗೆ ಇತರೆ ಚಿತ್ರರಂಗದ ಯಾವ ನಟ-ನಟಿಯರಿಗೆ ನಮ್ಮ ಸ್ಯಾಂಡಲ್ ವುಡ್ ನ ಯಾವ ತಾರೆಯರು ಅಚ್ಚು ಮೆಚ್ಚು ಎಂದು ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಅಂತೆಯೇ ಟಾಲಿವುಡ್ ಸ್ಟಾರ್ ರಾಣಾ ದಗ್ಗುಬಾಟಿಗೆ ಕನ್ನಡಾಭಿಮಾನಿ ಶಿವು ಗಿಡ್ಡ ಎಂಬುವವರು ನಿಮಗೆ ಕನ್ನಡದ ಯಾವ ನಟ ಫೇವರಿಟ್ ಎಂದು ಟ್ವಿಟ್ಟರ್ ಮೂಲಕ ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ರಾಣಾ ದಗ್ಗುಬಾಟಿ ಯಾರ ಹೆಸರನ್ನು ಹೇಳಿದ್ದಾರೆ ಇಲ್ಲಿ ನೋಡಿ..

'ರಾಜಕುಮಾರ' ಅಚ್ಚುಮೆಚ್ಚಿನ ನಟ

'ಬಾಹುಬಲಿ' ಚಿತ್ರದ ನಂತರ ವಿಶ್ವದಾದ್ಯಂತ ಗುರುತಿಸಿಕೊಂಡಿರುವ ರಾಣಾ ದಗ್ಗುಬಾಟಿಯ ಸ್ಯಾಂಡಲ್ ವುಡ್ ನ ಬಹಳ ಅಚ್ಚುಮೆಚ್ಚಿನ ನಟ ಕನ್ನಡದ ರಾಜರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಹೀಗೆಂದು ಅವರೇ ಟ್ವೀಟ್ ಮಾಡಿದ್ದಾರೆ.

ಪ್ರೊ ಕಬ್ಬಡಿಯಲ್ಲಿ ಪುನೀತ್ ಮತ್ತು ರಾಣಾ ಹರಟೆ

ರಾಣಾ ದಗ್ಗುಬಾಟಿಗೆ ಪುನೀತ್ ರಾಜ್ ಕುಮಾರ್ ಅಚ್ಚು ಮೆಚ್ಚು ಎಂಬುದು ಹೊಸ ವಿಚಾರವೇನು ಅಲ್ಲ. ಅದಕ್ಕೆ ಸಾಕ್ಷಿ ಅಂದ್ರೆ ಇಬ್ಬರು ಸಹ 'ಪ್ರೊ ಕಬ್ಬಡಿ' ಆಟದಲ್ಲಿ ಬೇರೆ ಬೇರೆ ಟೀಮ್ ನಲ್ಲಿ ಆಟವಾಡಿದರು ಸಹ ಬಿಡುವಿನ ವೇಳೆ ಈ ಇಬ್ಬರೇ ಹೆಚ್ಚಾಗಿ ಜೊತೆಯಲ್ಲಿ ಹರಟೆ ಹೊಡೆಯುತ್ತಿದ್ದರು. ಅವರು ಜೊತೆಯಲ್ಲಿರುವ ಫೋಟೋ ನೋಡಿ. ಚಿತ್ರಕೃಪೆ:PSPRFC

ಟಾಲಿವುಡ್ ತಾರೆಯರಿಗೆ ಅಪ್ಪು ಅಂದ್ರೆ ಅಚ್ಚು ಮೆಚ್ಚು

ವಿಶೇಷ ಅಂದ್ರೆ ನಮ್ಮ ಅಪ್ಪು ರಾಣಾ ದಗ್ಗುಬಾಟಿ ರವರಿಗೆ ಮಾತ್ರವಲ್ಲದೇ ಇತರೆ ಹಲವು ಟಾಲಿವುಡ್ ಸ್ಟಾರ್ ಗಳಿಗೂ ಅಚ್ಚುಮೆಚ್ಚು. ಆದ್ದರಿಂದ ಪುನೀತ್ ರಾಜ್ ಕುಮಾರ್ ತೆಲುಗು ನಟರ ಸಿನಿಮಾಗಳ ಶುಭ ಕಾರ್ಯಕ್ರಮಗಳಿಗೆ ಭೇಟಿ ನೀಡುತ್ತಿರುತ್ತಾರೆ. ಪುನೀತ್ ಅಂದ್ರೆ ಜೂನಿಯರ್ ಎನ್‌ಟಿಆರ್'ಗೂ ಸಹ ಅಚ್ಚುಮೆಚ್ಚು. ಜೂನಿಯರ್ ಎನ್‌ಟಿಆರ್ ರವರು ಪುನೀತ್ ಅಭಿನಯದ 'ಚಕ್ರವ್ಯೂಹ' ಚಿತ್ರಕ್ಕೆ 'ಗೆಳೆಯ ಗೆಳೆಯ' ಸಾಂಗ್ ಹಾಡಿದ್ದರು. ಆ ಸಂದರ್ಭದಲ್ಲಿ ಕ್ಲಿಕ್ಕಿಸಿದ ಫೋಟೋ ನೋಡಿ.

'ಪವರ್ ಸ್ಟಾರ್' ಆಡಿಯೋ ಲಾಂಚ್ ನಲ್ಲಿ ಮಹೇಶ್ ಬಾಬು

ಪುನೀತ್ ರಾಜ್ ಕುಮಾರ್ ತೆಲುಗು ನಟರೊಂದಿಗೆ ಅವಿನಾಭಾವ ಗೆಳೆತನ ಹೊಂದಿದ್ದಾರೆ. ಪುನೀತ್ ಅಭಿನಯದ 'ಪವರ್ ಸ್ಟಾರ್' ಚಿತ್ರದ ಆಡಿಯೋ ಲಾಂಚ್ ಗೆ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅತಿಥಿಯಾಗಿ ಆಗಮಿಸಿದ್ದರು.

ಪುನೀತ್ ಬಗ್ಗೆ ಟಾಲಿವುಡ್ ನಟರು ಏನು ಹೇಳಿದ್ದಾರೆ ಗೊತ್ತಾ?

ಅಲ್ಲು ಅರ್ಜುನ್, ಮಹೇಶ್ ಬಾಬು, ನಿರ್ದೇಶಕ ಎಸ್.ಎಸ್.ರಾಜಮೌಳಿ ಇನ್ನೂ ಹಲವರಿಗೆ ಪುನೀತ್ ರಾಜ್ ಕುಮಾರ್ ಕನ್ನಡದ ಅಚ್ಚುಮೆಚ್ಚಿನ ನಟ. 'ರಾಜಕುಮಾರ' ಪುನೀತ್ ರಾಜ್ ಕುಮಾರ್ ಬಗ್ಗೆ ಟಾಲಿವುಡ್ ನಟರು ಮಾತ್ರವಲ್ಲದೇ ಸೂಪರ್ ಸ್ಟಾರ್ ರಜನಿಕಾಂತ್, ಮಾಲಿವುಡ್ ನಟ ಮೋಹನ್ ಲಾಲ್ ಇನ್ನೂ ಹಲವರು ಏನು ಹೇಳಿದ್ದಾರೆ ಎಂದು ತಿಳಿಯಲು ಕ್ಲಿಕ್ ಮಾಡಿ

English summary
Tollywood Actor Rana Daggubati has taken his twiiter account to express his favourite kannada actor name.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada