'ರಂಗಿತರಂಗ' ಮೊದಲ ನೋಡಿದ್ದೇ ಯಶ್: ಸಿನಿಮಾಗೆ ಕೊಟ್ಟ ಸಲಹೆ ಏನು? ಎಷ್ಟು ಕಲೆಕ್ಷನ್ ಮಾಡಿತ್ತು?

ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದ ಹಲವು ಸಿನಿಮಾಗಳಿವೆ. ಅದರಲ್ಲಿ 10 ವರ್ಷಗಳ ಹಿಂದೆ ಹೊಸಬರ ಸಿನಿಮಾವೊಂದು ಚರಿತ್ರೆ ಬರೆದಿತ್ತು. ಅದುವೇ 'ರಂಗಿತರಂಗ'. ಅನುಪ್ ಭಂಡಾರಿ ನಿರ್ದೇಶನದಲ್ಲಿ ನಿರೂಪ್ ಭಂಡಾರಿ ಹೀರೋ ಆಗಿ ಅದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಈಗ ದಶಕದ ಬಳಿಕ ಮತ್ತೆ ಈ ಸಿನಿಮಾ ಥಿಯೇಟರ್‌ಗೆ ಎಂಟ್ರಿ ಕೊಡುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಬಹುತೇಕ ಹೊಸಬರೇ ಸೇರಿ ನಿರ್ಮಿಸಿದ್ದ 'ರಂಗಿತರಂಗ' ಕನ್ನಡ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. 'ಬಾಹುಬಲಿ' ಅಂತಹ ಮೆಗಾ ಬ್ಲಾಸ್ಟರ್‌ ಸಿನಿಮಾದ ಎದುರು 'ರಂಗಿತರಂಗ' ರಿಲೀಸ್ ಆಗಿತ್ತು. ಅಷ್ಟು ದೊಡ್ಡ ಸಿನಿಮಾದ ಎರಡು ಹೊಸ ಸಿನಿಮಾ ಹೇಳ ಹೆಸರಿಲ್ಲದೆ ಹೊರಟು ಹೋಗುತ್ತೆ ಎಂದು ಭವಿಷ್ಯ ನುಡಿದಿದ್ದರು. ಆದರೆ, ಹಾಕಿದ ಲೆಕ್ಕಾಚಾರವೆಲ್ಲವೂ ತಲೆ ಕೆಳಗಾಗಿತ್ತು. 'ರಂಗಿತರಂಗ' 10 ವರ್ಷಗಳ ಹಿಂದೆ, ಕನ್ನಡ ಚಿತ್ರರಂಗದ ಮಟ್ಟಿಗೆ ಮೆಗಾ ಬ್ಲಾಕ್‌ಬಸ್ಟರ್ ಲಿಸ್ಟ್ ಸೇರಿತ್ತು.

Rangitaranga box office collection report and Yash suggestions to trim 15 minutes of the movie

ಕನ್ನಡ ಚಿತ್ರರಂಗ 'ರಂಗಿತರಂಗ' ಸಿನಿಮಾವನ್ನು ಮರೆಯದೆ ಇರುವಂತಹ ಇತಿಹಾಸವನ್ನು ಸೃಷ್ಟಿಸಿದೆ. ಆದರೆ, ಈ ಸಿನಿಮಾ ಗೆಲ್ಲುವುದಕ್ಕೆ ರಾಕಿಂಗ್ ಸ್ಟಾರ್ ಯಶ್ ಕೂಡ ಕಾರಣಕರ್ತ ಅನ್ನೋದು ನಿಮಗೆ ಗೊತ್ತೇ? 'ರಂಗಿತರಂಗ' ಬಾಕ್ಸಾಫೀಸ್‌ನಲ್ಲಿ ಎಷ್ಟು ಕೋಟಿ ಕಲೆಕ್ಷನ್ ಮಾಡ್ತು? ಈ ಸಿನಿಮಾದ ಬಜೆಟ್ ಎಷ್ಟು? ಮರು ಬಿಡುಗಡೆ ಮಾಡುತ್ತಿರುವುದು ಯಾಕೆ? ಈ ಎಲ್ಲಾ ಪ್ರಶ್ನೆಗಳಿಗೆ 'ರಂಗಿತರಂಗ' ಸಿನಿಮಾದ ನಿರ್ಮಾಪಕ ಪ್ರಕಾಶ್ ಫಿಲ್ಮಿಬೀಟ್ ಕನ್ನಡದ ಜೊತೆ ಹಂಚಿಕೊಂಡಿದ್ದಾರೆ.

ಸಿನಿಮಾ ಎಡಿಟ್ ಮಾಡಿಸಿದ್ದ ಯಶ್

10 ವರ್ಷಗಳ ಹಿಂದೆ 'ರಂಗಿತರಂಗ' ಹೊಸಬರ ಸಿನಿಮಾ ಆಗಿತ್ತು. ಆ ವೇಳೆ ಈ ಸಿನಿಮಾ ಇಷ್ಟೊಂದು ಸಕ್ಸಸ್ ಆಗುತ್ತೆ ಅನ್ನೋದು ಚಿತ್ರತಂಡಕ್ಕೆ ಗೊತ್ತಿರಲಿಲ್ಲ. ಅಂದು ಇದು ಹೊಸಬರ ತಂಡ. ಈ ಟೀಮ್‌ ಯಶ್ ಬೆಂಬಲವಾಗಿ ನಿಂತಿದ್ದರು. ಮೊದಲು ಈ ಸಿನಿಮಾವನ್ನು ನೋಡಿ, 10 ರಿಂದ 15 ನಿಮಿಷಗಳನ್ನು ಎಡಿಟ್ ಮಾಡುವಂತೆ ಹೇಳಿದ್ದೇ ಯಶ್ ಹೇಳಿದ್ದನ್ನು ಚಿತ್ರತಂಡ ನೆನಪಿಸಿಕೊಂಡಿದ್ದೆ.

ಕಲರ್ಸ್ ಕನ್ನಡದಲ್ಲಿ 'ರಂಗಿತರಂಗ' 225 ದಿನದ ಸಂಭ್ರಮಾಚರಣೆ
"ಆ ಟೈಮ್‌ನಲ್ಲಿ ನಾವೆಲ್ಲರೂ ಹೊಸಬರೇ. ಯಶ್ ಅವರು ಸುಧಾಕರ್ ಭಂಡಾರಿ ಅವರ ಕಡೆಯಿಂದ ಪರಿಚಯ ಆಯ್ತು. ಮೊದಲು ಸಿನಿಮಾ ಅಂತ ನೋಡಿ, ಅದರಲ್ಲಿ 10 ರಿಂದ 15 ನಿಮಿಷ ಟ್ರಿಮ್ ಮಾಡಿಸಿ, ಧೈರ್ಯ ಕೊಟ್ಟಿದ್ದೇ ಯಶ್ ಅವರು. ಈಗ ರಂಗಿತರಂಗ 10 ವರ್ಷ ಹೋಗಿದೆ ಎನ್ನುವುದಕ್ಕೆ ಮೂಲ ಕಾರಣವೇ ಯಶ್." ಎಂದು ರಂಗಿತರಂಗ ನಿರ್ಮಾಪಕ ಪ್ರಕಾಶ್ ಹೇಳಿದ್ದಾರೆ.

'ರಂಗಿತರಂಗ'ದಂತಹ ಅನುಭವ ಆಗಿಲ್ಲ

"ಆಗ ಸಿನಿಮಾ ಅನ್ನೋದು ನನಗೆ ಹೊಸದಿತ್ತು. ರಂಗಿತರಂಗ ಮೊದಲ ವಾರ ಕಂಪ್ಲೀಟ್ ಆಯ್ತು. ಎರಡನೇ ವಾರ ಜುಲೈ 10ಕ್ಕೆ ಬಾಹುಬಲಿ ಬಂತು. ಮೊದಲು 35 ಸೆಂಟರ್‌ನಲ್ಲಿ ಇತ್ತು. ಬಾಹುಬಲಿ ಬಂದಾಗ ಸಡನ್ ಆಗಿ 10-11ಕ್ಕೆ ಬಂತು. ಆಗ ತುಂಬಾನೇ ಭಯ ಆಗೋಯ್ತು. ಆದರೆ, ಅದೇ ಬಾಹುಬಲಿ ಸಿನಿಮಾ ಶುಕ್ರವಾರ ರಿಲೀಸ್ ಆಯ್ತು. ಶನಿವಾರ, ಭಾನುವಾರ ನಮ್ಮ ಸೆಂಟರ್‌ಗಳೆಲ್ಲ ತುಂಬಾನೇ ಹೆಚ್ಚಾಯ್ತು. ಶೇ.50ರಷ್ಟು ಬಾಹುಬಲಿಗೆ ಹೋದರೆ, ಶೇ.50ರಷ್ಟು ರಂಗಿತರಂಗಗೆ ಇದ್ದರು. ಆ ಖುಷಿ ಲೈಫ್‌ನಲ್ಲಿ ನೆನೆಸಿಕೊಳ್ಳುವಂತಹದ್ದು. ಅದಾದ್ಮೇಲೆ ಅವನೇ ಶ್ರೀಮನ್ನಾರಾಯಣ ಮಾಡಿದೆ. ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ಮಾಡಿದೆ. ನಾಲ್ಕೈದು ಸಿನಿಮಾ ಮಾಡಿದೆ. ರಂಗಿತರಂಗ ಅನುಭವ ನನಗೆ ಯಾವ ಸಿನಿಮಾನೂ ಕೊಡಲಿಲ್ಲ." ಎನ್ನುತ್ತಾರೆ ನಿರ್ಮಾಪಕ ಪ್ರಕಾಶ್.

Rangitaranga box office collection report and Yash suggestions to trim 15 minutes of the movie

ಇನ್ನು ಬಾಹುಬಲಿ ಅಂತಹ ಸಿನಿಮಾ ಮುಂದೆ ರಿಲೀಸ್ ಆಗಿದ್ದ ರಂಗಿತರಂಗ ಬಾಕ್ಸಾಫೀಸ್‌ನಲ್ಲಿ ದೊಡ್ಡ ಸಾಹಸವನ್ನೇ ಮಾಡಿತ್ತು. "ಆ ಟೈಮ್‌ನಲ್ಲಿ ರಂಗಿತರಂಗ ₹15 ಕೋಟಿ ಕಲೆಕ್ಷನ್ ಆಗಿತ್ತು. ಆಗ ಅದೇ ಗ್ರೇಟ್. ಎರಡು ಸೆಂಟರ್‌ನಲ್ಲಿ 365 ದಿನ ಹೋಯ್ತು. 10 ವರ್ಷದ ಹಿಂದೆ 15 ಕೋಟಿಗೆ ಇನ್ನೊಂದು ಸೊನ್ನೆ ಸೇರಿಸಿಕೊಳ್ಳಬೇಕು. ಮೊದಲ ವಾರದಲ್ಲಿ ನಮಗೆ ₹38 ಲಕ್ಷ ಶೇರ್ ಬಂದಿತ್ತು. ಪ್ರತಿ ವಾರ 30 ರಿಂದ 40 ಪರ್ಸೆಂಟ್ 100 ದಿನ ಆಗೋವರೆಗೂ ಜಂಪ್ ಆಗುತ್ತಿತ್ತು. ನಮ್ಮ ಸಿನಿಮಾದ ಬಜೆಟ್ ಎರಡೂವರೆ ಕೋಟಿ ಆಗಿತ್ತು." ಅಂಕಿ ಅಂಶಗಳನ್ನು ನಿರ್ಮಾಪಕ ಪ್ರಕಾಶ್ ಕೊಟ್ಟಿದ್ದಾರೆ.

'ರಂಗಿತರಂಗ' ಸಾಧನೆ

ಬೆಂಗಳೂರಿನ ಎಲ್ಲಾ ಮಲ್ಟಿಪ್ಲೆಕ್ಸ್‌ನಲ್ಲಿ 100 ದಿನ ಪ್ರದರ್ಶನ
7 ಸೆಂಟರ್‌ನಲ್ಲಿ 25 ವಾರ ಸಿನಿಮಾ ಪ್ರದರ್ಶನ
1 ವರ್ಷ ಎರಡು ಸೆಂಟರ್‌ನಲ್ಲಿ ಪ್ರದರ್ಶನ ಕಂಡಿತ್ತು

'ರಂಗಿತರಂಗ' ಮರುಬಿಡುಗಡೆ ಮಾಡುವ ವೇಳೆ 'ರಂಗಿತರಂಗ 2' ಸಿನಿಮಾ ಬಗ್ಗೆ ಚರ್ಚೆಗೆ ಬಂದಿತ್ತು. ಆದರೆ, ನಿರ್ಮಾಪಕರು ಆ ಸಿನಿಮಾ ಮಾಡುವುದು ಡೌಟು ಎಂದಿದ್ದಾರೆ. ಯಾಕಂದ್ರೆ ವಿಕ್ರಾಂತ್ ರೋಣ ಬಂದಾದ್ಮೇಲೆ ಮತ್ತೆ ರಂಗಿತರಂಗ ಮಾಡುವುದು ಅನುಮಾನ. ಆದರೆ, ಸೇಮ್ ಟೀಮ್ ಜೊತೆ ಇನ್ನೊಂದು ಸಿನಿಮಾ ಮಾಡುವುದಕ್ಕೆ ನಿರ್ಮಾಪಕರು ತುದಿಗಾಲಲ್ಲಿ ನಿಂತಿದ್ದಾರೆ.

"ರಂಗಿತರಂಗ ರಿಲೀಸ್ ಆಗಿ 10 ವರ್ಷ ಆಗಿ ಹೋಗಿದೆ ಅನ್ನೋದು ನಮಗೂ ಗೊತ್ತಿಲ್ಲ. ಆದರೆ, ಈಗ ನನಗೆ ತುಂಬಾನೇ ಖುಷಿ ಆಗುತ್ತಿದೆ. ರಿ ರಿಲೀಸ್ ಆಗುತ್ತಿರುವ ಬಗ್ಗೆ ನಾನು ಪಾಸಿಟಿವ್ ಆಗಿದ್ದೀನಿ. ಜನ ಥಿಯೇಟರ್‌ಗೆ ಬರಬೇಕು ಎನ್ನುವುದರ ಜೊತೆಗೆ ಈ ಸಿನಿಮಾವನ್ನು ಏನಕ್ಕೆ ನೋಡಬೇಕು ಎನ್ನುವುದಕ್ಕೂ ಕಾರಣವಿದೆ. ಯಾಕಂದ್ರೆ, ಓಟಿಟಿಯಲ್ಲಿ ಇನ್ನೂ ಈ ಸಿನಿಮಾವಿಲ್ಲ. ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡಿಯೇ ನೋಡುತ್ತಾರೆ" ಎಂಬ ನಂಬಿಕೆಯಲ್ಲಿ ಇದ್ದಾರೆ.

More from Filmibeat

English summary
Rangitaranga box office collection report and Yash suggestions to trim 15 minutes of the movie.
Read more about: yash rangitaranga sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X