ವಿವಾದದ ಬೆಂಕಿ ಹೊತ್ತಿ ಉರಿಯುವಾಗಲೇ ಕಮಲ್ ಹಾಸನ್‌ಗೆ ಕನ್ನಡ ಪುಸ್ತಕ ಕೊಟ್ಟ 'ಕನ್ನಡತಿ' ರಂಜನಿ ರಾಘವನ್
ಕನ್ನಡ ಭಾವನೆಗಳಿಗೆ ಧಕ್ಕೆ ತಂದು ಕ್ಷಮೆ ಕೇಳುವುದಿಲ್ಲ ಮುಖ ತಿರುಗಿಸಿ ಕೂತಿರುವ ಕಮಲ್ ಹಾಸನ್ ವಿರುದ್ಧ ಕನ್ನಡಿಗರು ಕಿಡಿಕಾರುತ್ತಿದ್ದಾರೆ. ಒಂದೇ ಒಂದು ಹೇಳಿಕೆ ಮೂಲಕ ಕನ್ನಡಿಗರ ಮನಸ್ಸಿಗೆ ನೋವುಂಟು ಮಾಡಿರುವ ಕಮಲ್ ಹಾಸನ್ ಕನ್ನಡಿಗರ ಪಾಲಿಗೆ ಕೆಟ್ಟವರಾಗಿದ್ದಾರೆ. ಕರ್ನಾಟಕದಲ್ಲಿ ಅವರು ನಟಿಸಿದ ಸಿನಿಮಾ 'ಥಗ್ ಲೈಫ್' ರಿಲೀಸ್ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಕನ್ನಡ ಪರ ಹೋರಾಟಗಾರರು ಪಟ್ಟು ಹಿಡಿದು ಕೂತಿದ್ದಾರೆ.
ಈ ಮಧ್ಯೆ 'ಕನ್ನಡತಿ' ಧಾರಾವಾಹಿ ಖ್ಯಾತಿಯ ನಟಿ ರಂಜನಿ ರಾಘವನ್ ವಿವಾದದಲ್ಲಿ ಸಿಲುಕಿರುವ ಕಮಲ್ ಹಾಸನ್‌ಗೆ ಕನ್ನಡ ಪುಸ್ತಕ ಕೊಟ್ಟು ಬಂದಿದ್ದಾರೆ. ಆ ಫೋಟೋಗಳನ್ನು ರಂಜನಿ ರಾಘವನ್ ಸ್ವತ: ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಕನ್ನಡ ಭಾಷೆಯ ಬಗ್ಗೆ ಕಮಲ್ ಹಾಸನ್ ವಿವಾದ ತಣ್ಣಗಾಗುವಂತೆ ಕಾಣುತ್ತಿಲ್ಲ. ಕರ್ನಾಟಕದಲ್ಲಿ 'ಥಗ್ ಲೈಫ್' ಬ್ಯಾನ್ ಮಾಡುವ ನಿರ್ಧಾರಕ್ಕೆ ಬಂದಿದ್ದರೂ ಕಮಲ್ ಹಾಸನ್ ಅಹಂಕಾರ ಇನ್ನೂ ಕಮ್ಮಿಯಾಗಿಲ್ಲ. ಹೀಗಾಗಿ ಕನ್ನಡ ಪರ ಹೋರಾಟಗಾರರು ಬೆಂಗಳೂರು ಬಂದ್ ಮಾಡುವ ಬಗ್ಗೆನೂ ಆಲೋಚನೆ ಮಾಡಲಾಗಿದೆ. ಈ ಬೆನ್ನಲ್ಲೇ ಕಮಲ್ ಹಾಸನ್‌ಗೆ ನಟಿ ರಂಜನಿ ರಾಘವನ್ ಕನ್ನಡ ಪುಸ್ತಕಗಳನ್ನು ಕೊಟ್ಟಿದ್ದು ಚರ್ಚೆಗೆ ಗ್ರಾಸವಾಗಿದೆ.
'ಕನ್ನಡತಿ' ಧಾರಾವಾಹಿ ಮೂಲಕ ಕನ್ನಡಿಗರ ಮನಗೆದ್ದಿದ್ದ ನಟಿ ರಂಜನಿ ರಾಘವನ್ ಬಹುಮುಖ ಪ್ರತಿಭೆ. ಕೇವಲ ನಟನೆಯಷ್ಟೇ ಅಲ್ಲ. ಲೇಖಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಈಗಾಗಲೇ ಅವರ ಲೇಖನಿಯಿಂದ ಹಲವು ಕೃತಿಗಳು ಹೊರಬಂದಿವೆ. ಈಗ ನಿರ್ದೇಶನಕ್ಕೂ ಇಳಿದ್ದು, ಸಿನಿಮಾ ಬಿಡುಗೆ ಮಾಡುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಡುತ್ತಿದ್ದಾರೆ. ಈ ಗ್ಯಾಪ್‌ನಲ್ಲಿ ಕಮಲ್ ಹಾಸನ್ ಅವರನ್ನು ಭೇಟಿ ಮಾಡಿ, ವಿವಾದದ ಬೆನ್ನಲ್ಲೇ ಕನ್ನಡ ಪುಸ್ತಕವನ್ನು ಕೊಟ್ಟಿದ್ದಾರೆ. ಆ ವಿಡಿಯೋ ಹಾಗೂ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಕಮಲ್ ಹಾಸನ್ 'ಥಗ್ ಲೈಫ್' ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಎನ್ನುವುದಕ್ಕಿಂತ ಹೆಚ್ಚಾಗಿ ವಿವಾದದಲ್ಲಿ ಬ್ಯುಸಿಯಾಗಿದ್ದಾರೆ. ಇಂತಹ ಸಮಯದಲ್ಲಿ ಕಮಲ್ ಹಾಸನ್ ಅವರನ್ನು ನಟಿ ರಂಜನಿ ರಾಘವನ್ ಭೇಟಿ ಮಾಡಿ ಪುಸ್ತಕ ಕೊಟ್ಟಿರುವುದು ಸಂಚಲನ ಸೃಷ್ಟಿಸಿದೆ. ಫೋಟೊ, ವಿಡಿಯೋಗಳನ್ನು ಹಂಚಕೊಂಡ "ಕಮಲ್ ಸರ್‌ಗೆ ಕನ್ನಡ ಪುಸ್ತಕ" ಎಂದು ಕ್ಯಾಪ್ಶನ್ ಬರೆದು ಎರಡು ಎಮೋಜಿಗಳನ್ನು ಹಂಚಿಕೊಂಡಿದ್ದಾರೆ.
ರಂಜನಿ ರಾಘವನ್ ಈ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದಂತೆ ನೆಟ್ಟಿಗರು ಆಕ್ಟಿವ್ ಆಗಿದ್ದಾರೆ. ಪರ ಹಾಗೂ ವಿರೋಧ ಕಮೆಂಟ್‌ಗಳನ್ನು ಪಾಸ್ ಮಾಡುವುದಕ್ಕೆ ಶುರು ಮಾಡಿದ್ದಾರೆ. "ಸೂಪರ್ ಮೇಡಮ್, ನಮ್ಮ ಕನ್ನಡತಿ ಸರಿಯಾದ ಟೈಮ್‌ನಲ್ಲಿ ಕನ್ನಡ ಪುಸ್ತಕ ಕೊಟ್ಟಿದ್ದು" ಎಂದು ಒಬ್ಬರು ಕಮೆಂಟ್ ಮಾಡಿದ್ದರೆ, ಇನ್ನೊಬ್ಬರು "ಕನ್ನಡ ಹುಟ್ಟಿದ್ಧೇ ತಮಿಳು ಭಾಷೆಯಿಂದ ಅಂದೋರಿಗೆ ಈ ಪುಸ್ತಕ ಅವಶ್ಯಕತೆ ಇತ್ತಾ ? ಒಂದ್ಸಲ್ಲ ರಜನೀಕಾಂತ್ ಸಾರ್‌ನ ಭೇಟಿ ಮಾಡಿ ಅವ್ರಿಗೆ ಈ ನಿಮ್ಮ ಪುಸ್ತಕ ನೀಡಿ. ಆಗ ಅದಕ್ಕೆ ಒಂದು ಬೆಲೆ ಸಿಗುತ್ತೆ." ಎಂದು ಹೇಳಿದ್ದಾರೆ. "ಈ ಕೊಂಗಾಗೆ ಕನ್ನಡ ಪುಸ್ತಕದ ಅವಶ್ಯಕತೆ ಇದೆ." ಎಂದು ಮತ್ತೊಬ್ಬರು ಹೇಳಿದ್ದಾರೆ. ಹಾಗೇ "ಕನ್ನಡ ಕನ್ನಡಿಗರು ಏನು ಅಂತ ತಿಳಿಸಿ ಬಿಟ್ಟು ಬನ್ನಿ ಅಕ್ಕ" ಅಂತೂ ಕಮೆಂಟ್ ಮಾಡಿದ್ದಾರೆ.
ಹಲವು ಮಂದಿ ಬುದ್ದಿ ಹೇಳಿ ಬರಬೇಕಿತ್ತು ಅಂತೂ ಹೇಳಿದ್ದಾರೆ. "ಹಾಗೆ ಇತಿಹಾಸ ಪುಸ್ತಕ ಕೊಟ್ಟಿದ್ದರೆ ಚೆನ್ನಾಗಿತ್ತು ಅಲ್ವಾ" ಎಂದಿದ್ದಾರೆ. "ತಿಳಿಸಿ ಹೇಳ್ ಬೇಕಿತ್ತು. ಕನ್ನಡದ ಬಗ್ಗೆ ತಲೆ ತೂರಿಸಬೇಡ ಅಂತ" ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದು, "ಅವಮಾನಿಸಿದವರಿಗೆ ಸನ್ಮಾನ ಮಾಡಿ ಹೊಡಿಯೋದು ಅಂದ್ರೆ ಇದೇ ಇರ್ಬೇಕು. ಕಮಲ್‌ಗೆ ಕನ್ನಡದ ಪುಸ್ತಕವನ್ನು ಕೊಟ್ಟ 'ಕನ್ನಡತಿ" ಎಂದು ಮೆಚ್ಚುಗೆ ಸೂಚಿಸಿದ್ದಾರೆ.


Click it and Unblock the Notifications











