'ಸಪ್ತ ಸಾಗರದಾಚೆ ಎಲ್ಲೋ' Vs 'ಟಗರು ಪಲ್ಯ': ಬಾಕ್ಸಾಫೀಸ್‌ನಲ್ಲಿ ಫೈಟ್ ಫಿಕ್ಸ್ ? ಇಲ್ಲ ಪೋಸ್ಟ್‌ಪೋನ್ ಆಗುತ್ತಾ?

ಒಂದ್ಕಡೆ ಬಿಗ್‌ ಬಾಸ್ ರಿಯಾಲಿಟಿ ಶೋ. ಇನ್ನೊಂದು ಕಡೆ ವರ್ಲ್ಡ್ ಕಪ್ ಮ್ಯಾಚ್. ಇವೆರಡೂ ಬಂದಾಗ ಚಿತ್ರರಂಗ ಸೈಲೆಂಟ್ ಆಗಿ ಬಿಡುತ್ತೆ. ಈ ಸಮಯದಲ್ಲಿ ಹೆಚ್ಚು ಸಿನಿಮಾಗಳು ರಿಲೀಸ್ ಆಗೋದಿಲ್ಲ. ರಿಲೀಸ್ ಆದರೂ, ಹೊಸಬರ ಸಿನಿಮಾಗಳೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.

ಆದರೆ, ಈ ಬಾರಿ ಪರಿಸ್ಥಿತಿ ಕೊಂಚ ಮಟ್ಟಿಗೆ ಡಿಫ್ರೆಂಟ್ ಇದೆ. ಬಿಗ್‌ಬಾಸ್ ಹಾಗೂ ವರ್ಲ್ಡ್ ಕಪ್ ಎರಡೂ ಒಟ್ಟೊಟ್ಟಿಗೆ ಶುರುವಾಗಿದೆ. ರಿಯಾಲಿಟಿ ಶೋ ವರ್ಸಸ್ ಕ್ರಿಕೆಟ್ ಅನ್ನುವಂತಾಗಿದೆ. ಈ ಮಧ್ಯೆ ಬಿಗ್ ಬಜೆಟ್ ಸಿನಿಮಾ ತಂಡಗಳು ಕೂಡ ರಿಲೀಸ್ ಮಾಡುವುದಕ್ಕೆ ಮುಂದೆ ಬಂದಿವೆ.

sapta-sagadache-ello-vs-tagaru-palya

ರಿಯಾಲಿಟಿ ಶೋ ಹಾಗೂ ಕ್ರಿಕೆಟ್ ಕ್ಲ್ಯಾಶ್‌ ನಡುವೆ ಕನ್ನಡದಲ್ಲಿ ಎರಡು ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗುತ್ತಿವೆ. ರಕ್ಷಿತ್ ಶೆಟ್ಟಿ ಸಿನಿಮಾ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಬಿ ಹಾಗೂ ನಾಗಭೂಷಣ್ ನಟನೆಯ 'ಟಗರು ಪಲ್ಯ' ಎರಡೂ ಸಿನಿಮಾಗಳೂ ಒಂದೇ ದಿನ ರಿಲೀಸ್ ಆಗುತ್ತಿವೆ. ಈ ಕ್ಲ್ಯಾಶ್ ಯಾಕೆ? ಈ ಸಮಯದಲ್ಲಿ ಪೈಪೋಟಿ ಬೇಕಿತ್ತಾ? ಇಲ್ಲ ಬದಲಾದ ಪರಿಸ್ಥಿತಿಯಲ್ಲಿ ಎರಡೂ ಸಿನಿಮಾಗಳೂ ಪೋಸ್ಟ್‌ಪೋನ್ ಆಗುತ್ತಾವಾ? ಅನ್ನೋದನ್ನು ತಿಳಿಯಲು ಮುಂದೆ ಓದಿ..

'ಸಪ್ತ ಸಾಗರ' Vs 'ಟಗರು ಪಲ್ಯ'

ರಕ್ಷಿತ್ ಶೆಟ್ಟಿ ನಟನೆಯ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಎ ತಕ್ಕ ಮಟ್ಟಿಗೆ ಸದ್ದು ಮಾಡಿದೆ. ಈಗ ಸೈಡ್ ಬಿ ರಿಲೀಸ್‌ಗೆ ಪೂರ್ವ ತಯಾರಿ ಮಾಡಿಕೊಳ್ಳುತ್ತಿದೆ. ಅಕ್ಟೋಬರ್ 27ಕ್ಕೆ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಈಗಾಗಲೇ ಅನೌನ್ಸ್ ಕೂಡ ಮಾಡಿದೆ. ಇದೇ ಡೇಟ್‌ನಲ್ಲೇ ನಾಗಭೂಷಣ್ ಪ್ರಥಮ ಬಾರಿಗೆ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿರುವ 'ಟಗರು ಪಲ್ಯ' ಕೂಡ ಇದೇ ದಿನ ಬಿಡುಗಡೆ ಆಗುವುದಾಗಿ ಘೋಷಣೆ ಆಗಿದೆ. ಹಾಗಿದ್ರೆ, ಎರಡೂ ಸಿನಿಮಾಗಳೂ ಕ್ಲ್ಯಾಶ್ ಆಗುತ್ತಾ?

sapta-sagadache-ello-vs-tagaru-palya

ಕ್ಲ್ಯಾಶ್ ಆದರೆ ಏನು ಸಮಸ್ಯೆ?

ಕನ್ನಡದ ಈ ಎರಡೂ ಸಿನಿಮಾಗಳ ಮೇಲೂ ನಿರೀಕ್ಷೆ ಹೆಚ್ಚಿದೆ. 'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಎ ನೋಡಿದವರು ಸೈಡ್ ಬಿಗಾಗಿ ಕಾದು ಕೂತಿದ್ದಾರೆ. ಅದೇ ಇನ್ನೊಂದು ಕಡೆ 'ಟಗರು ಪಲ್ಯ' ಕೂಡ ಸಿಕ್ಕಾಪಟ್ಟೆ ಎಂಟರ್‌ಟೈನಿಂಗ್ ಆಗಿದ್ದು, ಹಬ್ಬದ ಸಂದರ್ಭದಲ್ಲಿ ರಿಲೀಸ್ ಆಗುತ್ತಿರುವ ಪರ್ಫೆಕ್ಟ್ ಸಿನಿಮಾ ಅಂತ ಹೇಳಲಾಗುತ್ತಿದೆ. ಇವೆರಡೂ ಒಂದೇ ದಿನ ರಿಲೀಸ್ ಆದರೆ, ಬಾಕ್ಸಾಫೀಸ್‌ನಲ್ಲಿ ಸಣ್ಣ ಮಟ್ಟಿಗಾದರೂ ನಷ್ಟ ಆಗಬಹುದು ಅನ್ನೋ ಅಂದಾಜು ಇದೆ. ಆದರೆ, ಎರಡೂ ಸಿನಿಮಾ ಅಕ್ಟೋಬರ್ 27ಕ್ಕೆ ರಿಲೀಸ್ ಆಗುತ್ತಾ? ಇದು ಕೂಡ ಅನುಮಾನವಿದೆ.

ನಾಗಭೂಷಣ್ ಅಪಘಾತ ಪ್ರಕರಣ.. ಮುಂದೂಡಿಕೆ ಸಾಧ್ಯತೆ

'ಟಗರು ಪಲ್ಯ' ಸಿನಿಮಾದ ಹೀರೊ ನಾಗಭೂಷಣ್ ಕಾರು ಅಪಘಾತ ಪ್ರಕರಣ ಇನ್ನೂ ಇತ್ಯರ್ಥಗೊಂಡಿಲ್ಲ. ಈ ಸಮಯದಲ್ಲಿ ಸಿನಿಮಾ ಪ್ರಚಾರದಲ್ಲಿ ನಾಗಭೂಷಣ್ ಭಾಗಿಯಾಗುವುದು ಅಸಾಧ್ಯವೆಂಬುದು ಹಲವರ ಅಭಿಪ್ರಾಯ. ನಾಗಭೂಷಣ್ ಕಾರು ಅಪಘಾತದಿಂದ ಮೃತಗೊಂಡ ಮಹಿಳೆಯ ಕುಟುಂಬದೊಂದಿಗೆ ಸಂಧಾನ ಆಗದೇ ಹೊರತು ನಾಗಭೂಷಣ್ ಕೂಡ ಪ್ರಚಾರಕ್ಕೆ ಬರುವುದು ಅನುಮಾನ. ಹೀಗಾಗಿ ಸಿನಿಮಾ ರಿಲೀಸ್ ಡೇಟ್ ಅನ್ನು ಪೋಸ್ಟ್‌ಪೋನ್ ಮಾಡಿದರೂ ಅಚ್ಚರಿಯಿಲ್ಲ.

ಸಪ್ತ ಸಾಗರ ಸೈಡ್ ಬಿ ಕೂಡ ಪೋಸ್ಟ್‌ಪೋನ್?

ಈಗಾಗಲೇ 'ಸಪ್ತಸಾಗರದಾಚೆ ಎಲ್ಲೋ' ಸೈಡ್ ಬಿ ಕೂಡ ಪೋಸ್ಟ್‌ಪೋನ್ ಆಗಬಹುದು ಎಂದು ಹೇಳಲಾಗುತ್ತಿದೆ. ಅಕ್ಟೋಬರ್ 27ರ ಬದಲು ನವೆಂಬರ್ 10ರಂದು ರಿಲೀಸ್ ಆಗಬಹುದು ಅನ್ನೋ ಗುಸುಗುಸು ಇದೆ. ದೀಪಾವಳಿ ಹಬ್ಬಕ್ಕೆ ಸಪ್ತಸಾಗರ ಸಿನಿಮಾ ರಿಲೀಸ್ ಆದರೆ ಅಡ್ವಾಂಟೆಜ್ ಅನ್ನೋ ಮಾತು ಕೇಳಿ ಬರುತ್ತಿದೆ.

More from Filmibeat

English summary
Rashkit Shetty Sapta Sagaradache ello and Nagabhushan movie Tagaru Palya Fight
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X