ಜೂ. ಆರ್ಟಿಸ್ಟ್‌ ಬಸ್ ಅಪಘಾತ, ಸೌಲಭ್ಯಗಳ ವಿರುದ್ಧ ಪ್ರತಿಭಟನೆ; ರಿಷಬ್ ಶೆಟ್ಟಿ 'ಕಾಂತಾರ'ಗೆ ವಿಘ್ನಗಳ ಮೇಲೆ ವಿಘ್ನ

Kantara Bus Accident:ರಿಷಬ್ ಶೆಟ್ಟಿಯ 'ಕಾಂತಾರ' ಸಿನಿಮಾ ಪ್ಯಾನ್ ಇಂಡಿಯಾ ಹಿಟ್ ಆಗುತ್ತಿದ್ದಂತೆ ಪ್ರೀಕ್ಷೆಲ್‌ಗೆ ಕೈ ಹಾಕಿದ್ದರು. ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿರುವ ಈ ಸಿನಿಮಾದ ಶೂಟಿಂಗ್‌ ಕೂಡ ಭರ್ಜರಿಯಾಗಿಯೇ ನಡೆಯುತ್ತಿದೆ. ಸಿನಿಮಾ ಆರಂಭಕ್ಕೂ ಮುನ್ನ ರಿಷಬ್ ಶೆಟ್ಟಿ ದೈವದ ಅನುಮತಿಯನ್ನು ಪಡೆದುಕೊಂಡೇ ಸಿನಿಮಾವನ್ನು ಆರಂಭ ಮಾಡಿದ್ದರು. ಆದರೂ ಯಾಕೋ ಸರಿ ಹೋಗುತ್ತಿಲ್ಲವೆಂದು ಅನಿಸುತ್ತಿದೆ.

ಕರಾವಳಿ ಭಾಗದ ಜನರು ನಂಬುವ ಪಂಜುರ್ಲಿ ಹಾಗೂ ಗೂಳಿಗ ದೈವದ ಹಿನ್ನೆಲೆಯನ್ನು ಇಟ್ಟುಕೊಂಡು ಸಿನಿಮಾವನ್ನು ಮಾಡಲಾಗಿತ್ತು. ಅದಕ್ಕೆ ದೈವ ಆಶೀರ್ವಾದ ಕೂಡ ಸಿಕ್ಕಿತ್ತು. ಇದೇ ಖುಷಿಯಲ್ಲಿ ಅದೇ ದೈವದಿಂದ ಅನುಮತಿಯನ್ನು ಪಡೆದು ರಿಷಬ್ ಶೆಟ್ಟಿ 'ಕಾಂತಾರ ಚಾಪ್ಟರ್ 1'ಕ್ಕೆ ಕೈ ಹಾಕಿದ್ದರು. ಆದರೆ, ಯಾಕೋ ಸಿನಿಮಾ ತಂಡಕ್ಕೆ ವಿಘ್ನಗಳು ಎದುರಾಗುತ್ತಿವೆ.

Rishab Shetty movie Kantara chapter 1 junior artist bus accident happened after strike

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ 'ಕಾಂತಾರ ಚಾಪ್ಟರ್ 1' ಸಿನಿಮಾದ ಚಿತ್ರೀಕರಣ ಮುಗಿಸಿ ಜೂನಿಯರ್ ಆರ್ಟಿಸ್ಟ್‌ಗಳನ್ನು ಕರೆದುಕೊಂಡು ಹೋಗುತ್ತಿದ್ದ ಮಿನಿ ಬಸ್ ಪಲ್ಟಿ ಹೊಡೆದಿದೆ. ಈ ಘಟನೆಯಲ್ಲಿ ಆರು ಮಂದಿಗೆ ಗಂಭೀರ ಗಾಯವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಹೇಗೆ? ತಿಳಿಯಲು ಮುಂದೆ ಓದಿ.

'ಕಾಂತಾರ ಚಾಪ್ಟರ್ 1' ಸಿನಿಮಾ ಶೂಟಿಂಗ್ ಕೊಲ್ಲೂರು ಹಾಗೂ ಸಮೀಪ ನಡೆಯುತ್ತಿತ್ತು. ಈ ಸಂಬಂಧ ಶೂಟಿಂಗ್‌ಗೆ ಜೂನಿಯರ್ ಆರ್ಟಿಸ್ಟ್‌ಗಳ ಅಗತ್ಯವಿದ್ದಿದ್ದರಿಂದ ಅವರನ್ನು ಮಿನಿ ಬಸ್‌ನಲ್ಲಿ ಕರೆದುಕೊಂಡು ಬರಲಾಗುತ್ತಿತ್ತು. ಕೊಲ್ಲೂರಿನ ಹತ್ತಿರ ಜಡ್ಕಳ್ ಎಂಬ ಹತ್ತಿರ ಬರುತ್ತಿದ್ದ ಬಸ್ ಪಲ್ಟಿಯಾಗಿ ಬಸ್‌ನಲ್ಲಿ ಇದ್ದ ಸುಮಾರು ಜೂನಿಯರ್ ಆರ್ಟಿಸ್ಟ್‌ಗಳಿಗೆ ಪೆಟ್ಟಾಗಿದೆ. ಇವರಲ್ಲಿ ಆರು ಮಂದಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ ಎಂದು ವರದಿಯಾಗಿದೆ.

Rishab Shetty movie Kantara chapter 1 junior artist bus accident happened after strike

ರಿಷಬ್ ಶೆಟ್ಟಿ 'ಕಾಂತಾರ ಚಾಪ್ಟರ್ 1' ಸಿನಿಮಾದ ಶೂಟಿಂಗ್ ಅನ್ನು ಕರಾವಳಿಯ ಹಲವು ಭಾಗಗಳಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ಸುಮಾರು 20 ಮಂದಿ ಜೂನಿಯರ್ ಆರ್ಟಿಸ್ಟ್‌ ಅನ್ನು ಹೊತ್ತು ಮಿನಿ ಬಸ್ ಕೊಲ್ಲೂರಿನ ಕಡೆಗೆ ತೆರಳುತ್ತಿತ್ತು. ರಿಷಬ್ ಶೆಟ್ಟಿ ಮುದೂರಿನ ಸಮೀಪ ಚಿತ್ರೀಕರಣ ಮಾಡುತ್ತಿದ್ದರು ಎಂದು ಹೇಳಲಾಗಿದ್ದು, ಶೂಟಿಂಗ್ ಮುಗಿಸಿ ತೆರಳುತ್ತಿದ್ದಾಗ ಕೊಲ್ಲೂರಿನ ಸಮೀಪ ಈ ಅಪಘಾತ ಸಂಭವಿಸಿದೆ.

ಕೆಲವು ದಿನಗಳ ಹಿಂದಷ್ಟೇ ಜೂನಿಯರ್ ಆರ್ಟಿಸ್ಟ್ ಗುಂಪು ಸರಿಯಾದ ಸೌಲಭ್ಯ ನೀಡುತ್ತಿಲ್ಲವೆಂದು ಕೋ ಆರ್ಟಿನೆಟರ್‌ಗಳ ವಿರುದ್ಧ ಕಿಡಿಕಾರಿದ್ದರು. ಇದು ಹೊಂಬಾಳೆ ಫಿಲ್ಮ್ಸ್‌ಗೆ ಮುಜುಗರ ಕೂಡ ಆಗಿತ್ತು. ಈ ಬೆನ್ನಲ್ಲೇ ಹೊಂಬಾಳೆ ತಂಡ ಇದು ಜೂನಿಯರ್ ಆರ್ಟಿಸ್ಟ್‌ಗಳನ್ನು ಸಪ್ಲೈ ಮಾಡುವ ತಂಡದಿಂದ ಆದ ತಪ್ಪು. ತಮ್ಮಿಂದ ತಪ್ಪುಗಳಾಗಿಲ್ಲ ಎಂದು ಹೇಳಿತ್ತು. ಬಳಿಕ ಮತ್ತೆ ಶೂಟಿಂಗ್ ಮುಂದುವರೆದಿತ್ತು.

ಈ ಘಟನೆ ಮುಗಿಯುತ್ತಿದ್ದಂತೆ ಈಗ ಜೂನಿಯರ್ ಆರ್ಟಿಸ್ಟ್‌ಗಳ ಮಿನಿ ಬಸ್ ಅಪಘಾತ ಆತಂಕವನ್ನು ಸೃಷ್ಟಿಸಿದೆ. ಈ ತಂಡಕ್ಕೆ ಒಂದರ ಹಿಂದೊಂದು ಅವಘಡ ನಡೆಯುತ್ತಲೇ ಇದೆ. ಇನ್ನು ಈ ಸಿನಿಮಾ ಶೂಟಿಂಗ್ ವೇಗವಾಗಿ ನಡೆಯುತ್ತಿದೆ. ಈಗಾಗಲೇ ಅರ್ಧ ಭಾಗದಷ್ಟು ಚಿತ್ರೀಕರಣ ಮುಗಿಸಿದ್ದಾರೆಂದು ಹೇಳಲಾಗುತ್ತಿದೆ. ಈ ಬಾರಿ ಏಳು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಹೀಗಾಗಿ ಅಗತ್ಯಕ್ಕಿಂತ ಮುಂಚಿತವಾಗಿಯೇ ಸಿನಿಮಾವನ್ನು ಮುಗಿಸಬೇಕಿದೆ. ಈಗಾಗಲೇ ಹೊಂಬಾಳೆ ಫಿಲ್ಮ್ಸ್ 2025ರ ಅಕ್ಟೋಬರ್ 2ಕ್ಕೆ ಸಿನಿಮಾ ರಿಲೀಸ್ ಎಂದು ಡೇಟ್ ಅನೌನ್ಸ್ ಮಾಡಿದೆ.

More from Filmibeat

English summary
Rishab Shetty movie Kantara chapter 1 junior artist bus accident happened after strike;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X