ಕಾರ್ ಅಪಘಾತ: ನಟಿ ರಿಷಿಕಾ ಸಿಂಗ್, ಜೈಜಗದೀಶ್ ಮಗಳು ಅರ್ಪಿತಾಗೆ ಗಾಯ

ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಮಗಳು, ನಟಿ ರಿಷಿಕಾ ಸಿಂಗ್ (ರೋಹಿಣಿ ಸಿಂಗ್) ಮತ್ತು ನಟ ಜೈಜಗದೀಶ್ ಮಗಳು ಅರ್ಪಿತಾ ಅವರಿದ್ದ ಕಾರು ಮಂಗಳವಾರ ಬೆಳಿಗ್ಗೆ ಯಲಹಂಕದಲ್ಲಿ ಅಪಘಾತಕ್ಕೀಡಾಗಿದೆ.

Recommended Video

ಶಿವಣ್ಣನ ಮನೆಗೆ ಎಲ್ಲಾ ಹೀರೋಗಳು ಬಂದ್ರು ಆದ್ರೆ ದರ್ಶನ್, ಸುದೀಪ್ ಬರ್ಲಿಲ್ಲ. | Filmibeat Kannada

ಮಂಗಳವಾರ ಬೆಳಿಗ್ಗೆ 5.50-6 ಗಂಟೆ ಸುಮಾರಿಗೆ ಯಲಹಂಕ-ಮಾವಳ್ಳಿಪುರ ರಸ್ತೆಯ ರಾಜಾನುಕುಂಟೆಯ ಮಾವಳ್ಳಿ ತಿರುವಿನಲ್ಲಿ ನಿಯಂತ್ರಣ ತಪ್ಪಿದ ಫಾರ್ಚೂನರ್ ಕಾರು ನೀಲಗಿರಿ ಮರವೊಂದಕ್ಕೆ ಡಿಕ್ಕಿ ಹೊಡೆದಿದೆ. ಕಾರ್‌ನಲ್ಲಿ ರಿಷಿಕಾ ಸಿಂಗ್, ಅರ್ಪಿತಾ ಮತ್ತು ಅವರ ಸ್ನೇಹಿತ ಇದ್ದರು ಎನ್ನಲಾಗಿದೆ.

ಅಪಘಾತದಿಂದ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅರ್ಪಿತಾ, ರಿಷಿಕಾ ಹಾಗೂ ಕಾರು ಚಾಲನೆ ಮಾಡುತ್ತಿದ್ದ ಅವರ ಸ್ನೇಹಿತನಿಗೆ ಸಣ್ಣ ಪುಟ್ಟ ಗಾಯಗಳಾಗಿತ್ತು. ಮುಂದೆ ಓದಿ...

ರಿಷಿಕಾ, ಅರ್ಪಿತಾ ಆಸ್ಪತ್ರೆಗೆ

ರಿಷಿಕಾ, ಅರ್ಪಿತಾ ಆಸ್ಪತ್ರೆಗೆ

ಅಪಘಾತ ಸಂಭವಿಸಿದ್ದು ಕಂಡ ಸುತ್ತಮತ್ತಲಿನ ಜನರು ಸಹಾಯಕ್ಕೆ ಬಂದರು. ಆಂಬುಲೆನ್ಸ್ ಕರೆಸಿ ರಿಷಿಕಾ ಮತ್ತು ಅರ್ಪಿತಾ ಅವರನ್ನು ಶೇಷಾದ್ರಿಪುರಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಸ್ವಲ್ಪ ತರಚಿದ ಗಾಯಗಳಾಗಿದ್ದ ಅವರ ಸ್ನೇಹಿತ ಸ್ಥಳದಲ್ಲಿಯೇ ಇದ್ದರು. ನಂತರ ಅವರ ಸ್ನೇಹಿತರ ಕಾರೊಂದು ಅಲ್ಲಿಗೆ ಬಂದಿದ್ದು, ಅದರಲ್ಲಿ ತೆರಳಿದ್ದಾರೆ.

ಎರಡು ದಿನದ ಹಿಂದಿನ ಘಟನೆ

ಎರಡು ದಿನದ ಹಿಂದಿನ ಘಟನೆ

ಮಂಗಳವಾರ ಬೆಳಿಗ್ಗೆ ಈ ಘಟನೆ ನಡೆದಿದ್ದರೂ ತಡವಾಗಿ ಬೆಳಕಿಗೆ ಬಂದಿದೆ. ಘಟನೆಯ ಸ್ಥಳಕ್ಕೆ ಪೊಲೀಸರು 9 ಗಂಟೆ ಸುಮಾರಿಗೆ ಬಂದು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ಘಟನೆ ನಡೆದು 48 ಗಂಟೆಗಳಾದರೂ ಪ್ರಕರಣ ದಾಖಲಾಗಿಲ್ಲ ಎಂದು ಹೇಳಲಾಗಿದೆ.

ಪ್ರತ್ಯಕ್ಷದರ್ಶಿಯ ಹೇಳಿಕೆ

ಪ್ರತ್ಯಕ್ಷದರ್ಶಿಯ ಹೇಳಿಕೆ

ವೇಗವಾಗಿ ಬಂದ ಕಾರು ನೀಲಗಿರಿ ಮರಕ್ಕೆ ಡಿಕ್ಕಿ ಹೊಡೆದಿದೆ. ಮಾವಳ್ಳಿಪುರದಿಂದ ಬರುತ್ತಿದ್ದ ಅವರಿಗೆ ತಿರುವು ಇರುವುದು ಗೊತ್ತಾಗಿಲ್ಲ. ಎಡಗಡೆಯಿಂದ ಬಂದು ಮರಕ್ಕೆ ಹೊಡೆದಿದೆ. ಪೊಲೀಸರು ದೂರು ದಾಖಲಿಸುವುದು ಬೇಡ ಎನ್ನುತ್ತಿದ್ದರು. ಕಾರಿನ ಚಾಲಕ ಇಲ್ಲಿಯೇ ಇದ್ದರು. ನಂತರ ಅವರ ಸ್ನೇಹಿತರ ಕಾರಲ್ಲಿ ತೆರಳಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಖಾಸಗಿ ವಾಹಿನಿಗೆ ತಿಳಿಸಿದರು.

ಮುಚ್ಚಿ ಹಾಕಲು ಪ್ರಯತ್ನ?

ಮುಚ್ಚಿ ಹಾಕಲು ಪ್ರಯತ್ನ?

ಎರಡು ಮೂರು ಮರಗಳಿಗೆ ಕಾರು ಉಜ್ಜಿಕೊಂಡು ಹೋಗಿದೆ. ಕಾರಿನ ಒಂದು ಟೈರ್ ಕಳಚಿ ಹೋಗಿದೆ. ಅವರ ಚಪ್ಪಲಿಗಳು ಸೇರಿದಂತೆ ಕೆಲವು ವಸ್ತುಗಳು ಸ್ಥಳದಲ್ಲಿಯೇ ಬಿದ್ದಿದೆ. ಅಪಘಾತ ಸಂಭವಿಸಿ ಎರಡು ದಿನಗಳಾದರೂ ಪ್ರಕರಣ ದಾಖಲಾಗಿಲ್ಲದೆ ಇರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನ ನಡೆದಿದೆ ಎಂದು ಆರೋಪಿಸಲಾಗಿದೆ.

More from Filmibeat

English summary
Director Rajendra Singh Babu's daughter, actress Rishika Singh and actor Jai Jagadish's daughter Arpitha were injured in a car accident.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X