For Quick Alerts
  ALLOW NOTIFICATIONS  
  For Daily Alerts

  ಶಿವರಾತ್ರಿಗೆ 'ಶ್ರೀನಿವಾಸ ಕಲ್ಯಾಣ' ನೋಡುವ ಭಾಗ್ಯ

  By Suneel
  |

  ಸ್ಯಾಂಡಲ್ ವುಡ್ ನಲ್ಲಿ ಕಳೆದ ವಾರ ಬಿಡುಗಡೆ ಆಗಬೇಕಿದ್ದ ಮೂರು ಸಿನಿಮಾಗಳ ಪೈಕಿ 'ಶ್ರೀನಿವಾಸ ಕಲ್ಯಾಣ' ಚಿತ್ರವೂ ಒಂದು. ಡಬಲ್ ಮೀನಿಂಗ್ ಡೈಲಾಗ್ ಗಳ ಮೂಲಕ ಹೆಚ್ಚು ಕ್ರೇಜ್ ಕ್ರಿಯೇಟ್ ಮಾಡಿದ್ದ ಸಿನಿಮಾ, ಹೋದ ಶುಕ್ರವಾರ ತೆರೆಗೆ ಬಾರದ ಕಾರಣ ಸಿನಿ ಪ್ರಿಯರು ನಿರಾಸೆಗೊಂಡಿದ್ದರು. ಆದರೆ ಈ ವಾರ ಯಾವುದೇ ಸಂಶಯವಿಲ್ಲದೇ ಪ್ರೇಕ್ಷಕರು 'ಶ್ರೀನಿವಾಸ ಕಲ್ಯಾಣ' ನೋಡಬಹುದು.['ಶ್ರೀನಿವಾಸ ಕಲ್ಯಾಣ' ದಿಂದ ಸ್ಕೂಲ್ ನಲ್ಲಿ ಲವ್ ಆಗಿದ್ದ ಎಲ್ಲರಿಗಾಗಿ ಈ ಹಾಡು..]

  ಸೆನ್ಸಾರ್ ಮಂಡಳಿಯ ಸದಸ್ಯರ ಕೊರತೆಯಿಂದಾಗಿ ಪ್ರಮಾಣ ಪತ್ರ ಪಡೆಯಲು ಸಮಸ್ಯೆ ಆಗಿದ್ದರಿಂದ 'ಶ್ರೀನಿವಾಸ ಕಲ್ಯಾಣ' ಕಳೆದ ವಾರ ಬಿಡುಗಡೆ ಆಗಿರಲಿಲ್ಲ. ಈಗ 'ಶ್ರೀನಿವಾಸ ಕಲ್ಯಾಣ' ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ 'A' ಸರ್ಟಿಫಿಕೇಟ್ ಲಭ್ಯವಾಗಿದ್ದು, ಫೆಬ್ರವರಿ 24 ರಂದು ರಾಜ್ಯಾದ್ಯಂತ ಬಿಡುಗಡೆ ಅಗಲಿದೆ.

  ಈ ಹಿಂದೆ 'ಟೋಪಿವಾಲಾ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಎಂ.ಜಿ ಶ್ರೀನಿವಾಸ್ 'ಶ್ರೀನಿವಾಸ ಕಲ್ಯಾಣ' ಚಿತ್ರದಲ್ಲಿ ನಟನೆ ಜೊತೆಗೆ ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದಾರೆ. ಮಾರ್ಸ್ ಫಿಲ್ಮ್ ಅಡಿಯಲ್ಲಿ ನಿರ್ಮಾಣ ಮಾಡಿರುವ ಈ ಚಿತ್ರವನ್ನು ಸ್ಟಾಪ್ ಮೋಷನ್ ತಂತ್ರಜ್ಞಾನ ಬಳಕೆ ಜೊತೆಗೆ 5ಡಿ ಕ್ಯಾಮೆರಾದಲ್ಲಿ ಚಿತ್ರೀಕರಿಸಲಾಗಿದೆ.[ಹೊಸಬರ ಸಿನಿಮಾ 'ಶ್ರೀನಿವಾಸ ಕಲ್ಯಾಣ' ಟ್ರೈಲರ್ ನೋಡಿದ್ರಾ?]

  'ಶ್ರೀನಿವಾಸ ಕಲ್ಯಾಣ' ಚಿತ್ರದಲ್ಲಿ ಹಿರಿಯ ನಟ ದತ್ತಣ್ಣ ಅವರನ್ನು ಹೊರತುಪಡಿಸಿದರೆ, ಕವಿತಾ, ನಿಖಿಲಾ ರಾವ್, ಸುಜಯ್ ಶಾಸ್ತ್ರಿ ಸೇರಿದಂತೆ ಹೊಸಬರ ದಂಡೇ ಇದೆ. ಲವ್, ಫ್ರೆಂಡ್ ಶಿಪ್, ಮದುವೆ ಸುತ್ತ ಸುತ್ತುವ ಈ ಚಿತ್ರಕ್ಕೆ ಅಶ್ವಿನ್ ಕಡಂಬೂರ್ ಛಾಯಾಗ್ರಹಣ ಇದೆ. ಮಿಧುನ್ ಮುಕುಂದನ್ ಮತ್ತು ರಘು ಥಾಣೆ ಸಂಗೀತ ಸಂಯೋಜನೆ ಮಾಡಿದ್ದಾರೆ.

  English summary
  RJ M.G.Srinivas directorial 'Srinivasa Kalyana' movie releasing this friday (February 24th).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X