»   » ಎಂ.ಜಿ.ಶ್ರೀನಿವಾಸ್ ಅಭಿನಯದ 'ಶ್ರೀನಿವಾಸ ಕಲ್ಯಾಣ' ರಿಲೀಸ್ ಡೇಟ್ ಫಿಕ್ಸ್ ಆಯ್ತು

ಎಂ.ಜಿ.ಶ್ರೀನಿವಾಸ್ ಅಭಿನಯದ 'ಶ್ರೀನಿವಾಸ ಕಲ್ಯಾಣ' ರಿಲೀಸ್ ಡೇಟ್ ಫಿಕ್ಸ್ ಆಯ್ತು

Posted By:
Subscribe to Filmibeat Kannada

'ಇದೊಂದು ಕತ್ತಲೇ ಇಂದಲೇ ಶುರು ಆಗುವ ಕಥೆ' ಎಂದು ಹೇಳುತ್ತಲೇ ಸ್ಯಾಂಡಲ್ ವುಡ್ ಪ್ರೇಕ್ಷಕರಲ್ಲಿ ಟ್ರೈಲರ್ ನಿಂದಲೇ ಸೆನ್ಷೇಷನ್ ಕ್ರಿಯೇಟ್ ಮಾಡಿದೆ 'ಶ್ರೀನಿವಾಸ ಕಲ್ಯಾಣ'. ಈ ಚಿತ್ರ ಈಗ ಮದುವೆಗೆ ಎಲ್ಲಾ ತಯಾರಿ ನಡೆಸಿದ್ದು, ಮದುವೆ ದಿನಾಂಕ ಫಿಕ್ಸ್ ಮಾಡಿದೆ.

ಹೌದು, ಡಬಲ್ ಮೀನಿಂಗ್ ಡೈಲಾಗು ಗಳು, ಮದುವೆ ಸಂಭ್ರಮದ ಸುತ್ತ ನಡೆಯುವ ಯಡವಟ್ಟುಗಳು, ಸ್ಕೂಲ್ ಡೇ ಗಳಲ್ಲಿ ಆದ ಲವ್‌ ಗಳು ಹೀಗೆ ಎಲ್ಲಾ ಸನ್ನಿವೇಶಗಳನ್ನು ಹೊಂದಿರುವ 'ಶ್ರೀನಿವಾಸ ಕಲ್ಯಾಣ' ಸಖತ್ ಸದ್ದು ಮಾಡುತ್ತಿದೆ. ಸೋಶಿಯಲ್ ಮೀಡಿಯಾ ಗಳ ಮೂಲಕ ಉತ್ತಮ ರೆಸ್ಪಾನ್ಸ್ ಪಡೆದಿರುವ ಸಿನಿಮಾ ದ ರಿಲೀಸ್ ಡೇಟ್ ಈಗ ಬಹಿರಂಗಗೊಂಡಿದೆ.[ಹೊಸಬರ ಸಿನಿಮಾ 'ಶ್ರೀನಿವಾಸ ಕಲ್ಯಾಣ' ಟ್ರೈಲರ್ ನೋಡಿದ್ರಾ?]

RJ M.G.Srinivas Starrer 'Srinivasa Kalyana' movie releasing on february 17th

'ಶ್ರೀನಿವಾಸ ಕಲ್ಯಾಣ' ಚಿತ್ರ ಫೆಬ್ರವರಿ 17 ರಂದು ರಾಜ್ಯಾದಂತ ತೆರೆಗೆ ಬರಲಿದೆಯಂತೆ. ಚಿತ್ರತಂಡ ಇತ್ತೀಚೆಗೆ ತಾನೆ 'ಗ್ಯಾಪು ಗ್ಯಾಪಲಿ ಸಿಲ್ಲಿ ಗ್ಯಾಪಲಿ ನಂಗು ಆಯ್ತು ಫಸ್ಟು ಲವ್' ಎಂಬ ವಿಡಿಯೋ ಹಾಡನ್ನು ರಿಲೀಸ್ ಮಾಡಿ ಯೂತ್ಸ್ ಗಳ ಹಳೇ ಡವ್ ಗಳನ್ನು ನೆನಪಿಸುವ ಹಾಡು ಎಂಬ ಕಾರಣಕ್ಕೆ ಹೆಚ್ಚು ವೀಕ್ಷಣೆ ಪಡೆದಿತ್ತು.['ಶ್ರೀನಿವಾಸ ಕಲ್ಯಾಣ' ದಿಂದ ಸ್ಕೂಲ್ ನಲ್ಲಿ ಲವ್ ಆಗಿದ್ದ ಎಲ್ಲರಿಗಾಗಿ ಈ ಹಾಡು.,]

RJ M.G.Srinivas Starrer 'Srinivasa Kalyana' movie releasing on february 17th

ಮಾರ್ಸ್ ಫಿಲ್ಮ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಆಗಿದ್ದು, RJ ಎಂ ಜಿ ಶ್ರೀನಿವಾಸ್ ಚಿತ್ರಕಥೆ ಬರೆದು, ನಟನೆ ಜೊತೆಗೆ ಅವರೇ ನಿರ್ದೇಶನ ಮಾಡಿದ್ದಾರೆ. ಅಶ್ವಿನ್ ಕಡಂಬೂರ್ ಛಾಯಾಗ್ರಹಣ ವಿದ್ದು, ಮಿಧುನ್ ಮುಕುಂದನ್ ಮತ್ತು ರಘು ಥಾಣೆ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

English summary
RJ M.G.Srinivas Starrer 'Srinivasa Kalyana' movie releasing date revealed. Here you can know movie release date..

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada