»   » ಖಡಕ್ ಹುಡುಗನ ಕಾದಲ್ ಕಥೆಯ 'ರೋಗ್' ಟ್ರೈಲರ್ ಔಟ್

ಖಡಕ್ ಹುಡುಗನ ಕಾದಲ್ ಕಥೆಯ 'ರೋಗ್' ಟ್ರೈಲರ್ ಔಟ್

Posted By:
Subscribe to Filmibeat Kannada

14 ವರ್ಷಗಳ ನಂತರ ಕನ್ನಡ ಬೆಳ್ಳಿತೆರೆಯಲ್ಲಿ ಆಕ್ಷನ್ ಕಟ್ ಹೇಳುತ್ತಿರುವ ಪೂರಿ ಜಗನ್ನಾಥ್, ಇತ್ತೀಚೆಗಷ್ಟೆ 'ರೋಗ್' ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ ಸಿನಿ ಪ್ರಿಯರ ಕುತೂಹಲ ಕೆರಳಿಸಿದ್ದರು. ಈಗ ಚಿತ್ರದ ಟ್ರೈಲರ್ ಔಟಾಗಿದ್ದು, ಸಿನಿಮಾ ಬಗ್ಗೆ ಇನ್ನಷ್ಟು ಹೈ ಎಕ್ಸ್ ಪೆಕ್ಟೇಶನ್ ಮೂಡಿಸಿದ್ದಾರೆ.['ರೋಗ್' ಚಿತ್ರದ ಮೂಲಕ ಕನ್ನಡಕ್ಕೆ ಪರಭಾಷಾ ನಟಿಯರ ಪದಾರ್ಪಣೆ!]

ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣ ವಾಗುತ್ತಿರುವ ಖಡಕ್ ಹುಡುಗನ ಕಾದಲ್ ಕಥೆಯ 'ರೋಗ್' ಟ್ರೈಲರ್ ನಿನ್ನೆ(ಮಾರ್ಚ್ 1) ಬಿಡುಗಡೆ ಆಗಿದೆ. ಅಲ್ಲದೇ ಚಿತ್ರದಲ್ಲಿ ಕನ್ನಡದ ಯಾವ ತಾರೆಯರು ಕಾಣಿಸಿಕೊಳ್ಳಬಹುದು ಎಂಬ ಕುತೂಹಲಕ್ಕೂ ತೆರೆಬಿದ್ದಿದೆ.

Rogue Kannada Movie Theatrical Trailer

ಚಿತ್ರದ ನಾಯಕ ಇಶಾನ್ ಗೆ ಟಾಲಿವುಡ್ ಸಿನಿಮಾಗಳಲ್ಲಿ ಹೆಚ್ಚು ಪರಿಚಿತರಾದ ಮನ್ನಾರಾ ಮತ್ತು Angela Krislinzki ಜೋಡಿ ಆಗಿ ಸ್ಕ್ರೀನ್ ಶೇರ್ ಮಾಡಿದ್ದಾರೆ. ಉಳಿದಂತೆ 'ರೋಗ್' ಚಿತ್ರದ ಕನ್ನಡ ವರ್ಸನ್ ನಲ್ಲಿ ಸಾಧು ಕೋಕಿಲ, ಅವಿನಾಶ್ ಮತ್ತು ತೆಲುಗು ನಟ ಸತ್ಯದೇವ್ ಕಾಣಿಸಿಕೊಂಡಿದ್ದಾರೆ.[14 ವರ್ಷಗಳ ನಂತರ ಪೂರಿ ಜಗನ್ನಾಥ್ ಕನ್ನಡದಲ್ಲಿ ನಿರ್ದೇಶನ]

ishan

ಪೂರಿ ಜಗನ್ನಾಥ್ ಆಕ್ಷನ್ ಕಟ್ ಹೇಳುತ್ತಿರುವ 'ರೋಗ್' ಚಿತ್ರಕ್ಕೆ ಸಿ ಆರ್ ಮನೋಹರ್ ಮತ್ತು ಸಿ ಆರ್ ಗೋಪಿ ಬಂಡವಾಳ ಹೂಡಿದ್ದಾರೆ. ಚಿತ್ರವನ್ನು ತಾನ್ವಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದು, ಸುನಿಲ್ ಕಶ್ಯಪ್ ಸಂಗೀತ ಸಂಯೋಜನೆ, ಮುಕೇಶ್ ಜಿ ಅವರ ಛಾಯಾಗ್ರಹಣ ಇದೆ. 'ರೋಗ್' ಚಿತ್ರದ ಟ್ರೈಲರ್ ನೋಡಲು... ಕ್ಲಿಕ್ ಮಾಡಿ.

English summary
Puri Jagannadh Directorial 'Rogue' Kannada Movie Theatrical Trailer has released.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada