»   » 14 ವರ್ಷಗಳ ನಂತರ ಪೂರಿ ಜಗನ್ನಾಥ್ ಕನ್ನಡದಲ್ಲಿ ನಿರ್ದೇಶನ

14 ವರ್ಷಗಳ ನಂತರ ಪೂರಿ ಜಗನ್ನಾಥ್ ಕನ್ನಡದಲ್ಲಿ ನಿರ್ದೇಶನ

Posted By:
Subscribe to Filmibeat Kannada
ಕನ್ನಡದಲ್ಲಿ 'ಅಪ್ಪು' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ತೆಲುಗಿನ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಈಗ ಕನ್ನಡ ಸಿನಿಮಾ ನಿರ್ದೇಶನ ಮಾಡಲು ಬಂದಿದ್ದಾರೆ.

ಕನ್ನಡದಲ್ಲಿ ಪೂರಿ ಜಗನ್ನಾಥ್ ಆಕ್ಷನ್ ಹೇಳುತ್ತಿರುವ ಸಿನಿಮಾದ ಫಸ್ಟ್ ಈಗ ಬಿಡುಗಡೆ ಆಗಿದ್ದು, ಕನ್ನಡ ಸಿನಿ ರಸಿಕರಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ. ಸಿನಿಮಾದ ಪೋಸ್ಟರ್ ಹೇಗಿದೆ, ಹೀರೋ ಯಾರು ಇತ್ಯಾದಿ ಮಾಹಿತಿ ಇಲ್ಲಿದೆ ಓದಿ..

14 ವರ್ಷಗಳ ನಂತರ ಕನ್ನಡದಲ್ಲಿ ನಿರ್ದೇಶನ

ತೆಲುಗಿನ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ 14 ವರ್ಷಗಳ ಹಿಂದೆ ಪುನೀತ್ ರಾಜ್ ಕುಮಾರ್ ಮತ್ತು ರಕ್ಷಿತ ಅಭಿನಯದ 'ಅಪ್ಪು' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಈಗ ಮತ್ತೊಮ್ಮೆ ಕನ್ನಡ ಸಿನಿಮಾ ನಿರ್ದೇಶನ ಮಾಡಲು ಬಂದಿದ್ದಾರೆ.

ಚಿತ್ರದ ಹೇಸರೇನು?

ಪೂರಿ ಜಗನ್ನಾಥ್ ನಿರ್ದೇಶನ ಮಾಡುತ್ತಿರುವ ಚಿತ್ರದ ಹೆಸರು 'ರೋಗ್'. ಈ ಚಿತ್ರಕ್ಕೆ ಸಿ ಆರ್ ಮನೋಹರ್ ಅವರು ಬಂಡವಾಳ ಹೂಡಿದ್ದಾರೆ.

'ರೋಗ್' ಚಿತ್ರ ಫಸ್ಟ್ ಲುಕ್ ಹೇಗಿದೆ ನೋಡಿ

ಸಿನಿ ಪ್ರಿಯರಲ್ಲಿ ಹೆಚ್ಚು ಕುತೂಹಲ ಕೆರಳಿಸಿರುವ 'ರೋಗ್' ಚಿತ್ರದ ಫಸ್ಟ್ ಲುಕ್ ಇದೆ ನೋಡಿ. ಕಾಲುಗಳನ್ನು ಹಗ್ಗದಿಂದ ಕಟ್ಟಿ, ನಾಯಕನನ್ನು ತಲೆಕೆಳಗಾಗಿ ನೇತು ಹಾಕಿರುವ ಈ ಚಿತ್ರದ ಪೋಸ್ಟರ್ ಈಗ ಕ್ಯೂರಿಯಾಸಿಟಿ ಹೆಚ್ಚಿಸಿದೆ. ಚಿತ್ರತಂಡ ಫೆ.19 ರಂದು ಮೊದಲ ಮೋಶನ್ ಪೋಸ್ಟರ್ ಸಹ ರಿಲೀಸ್ ಮಾಡುತ್ತಿದೆ.

'ರೋಗ್' ಚಿತ್ರದ ನಾಯಕ ಇವರೇ..

ಅಂದಹಾಗೆ ರೋಗ್ ಚಿತ್ರದಲ್ಲಿ ನಿರ್ಮಾಪಕ ಸಿ ಆರ್ ಮನೋಹರ್ ಅವರ ಸಹೋದರ ಇಶಾನ್ ಅವರೇ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ.

ಎರಡು ಭಾಷೆಗಳಲ್ಲಿ 'ರೋಗ್'

ಪೂರಿ ಜಗನ್ನಾಥ್ 'ರೋಗ್' ಚಿತ್ರವನ್ನು ತೆಲುಗು ಮತ್ತು ಕನ್ನಡದಲ್ಲಿ ನಿರ್ದೇಶನ ಮಾಡುತ್ತಿದ್ದು, ಈ ಎರಡು ಭಾಷೆಗಳ ಚಿತ್ರಗಳಲ್ಲಿಯೂ ಇಶಾನ್ ಅವರೇ ನಾಯಕನಾಗಿ ಬಣ್ಣಹಚ್ಚುತ್ತಿದ್ದಾರೆ.

English summary
The ace writer-director Puri Jagannadh had came after 14 years to Kannnada Film industry to direct 'Rogue' Film. Puri Jagannadh’s 'Rogue' movie's First Look Poster Released

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada