»   » 'ರೋಗ್' ಚಿತ್ರದ ಮೂಲಕ ಕನ್ನಡಕ್ಕೆ ಪರಭಾಷಾ ನಟಿಯರ ಪದಾರ್ಪಣೆ!

'ರೋಗ್' ಚಿತ್ರದ ಮೂಲಕ ಕನ್ನಡಕ್ಕೆ ಪರಭಾಷಾ ನಟಿಯರ ಪದಾರ್ಪಣೆ!

Posted By:
Subscribe to Filmibeat Kannada

ಪುರಿ ಜಗನ್ನಾಥ್ ಆಕ್ಷನ್ ಕಟ್ ಹೇಳುತ್ತಿರುವ 'ರೋಗ್' ಚಿತ್ರದ ಫಸ್ಟ್ ಲುಕ್ ಸ್ಯಾಂಡಲ್ ವುಡ್ ಮತ್ತು ಟಾಲಿವುಡ್ ಸಿನಿ ಪ್ರಿಯರಲ್ಲಿ ಚಿತ್ರದ ಬಗ್ಗೆ ಹೆಚ್ಚು ಕುತೂಹಲ ಕೆರಳಿಸಿತ್ತು. ಈಗ ಚಿತ್ರದ ನಾಯಕಿಯರ ಹೆಸರನ್ನು ಪ್ರಕಟಿಸಿದ್ದು, ನಿರ್ದೇಶಕರು ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದ್ದಾರೆ.[14 ವರ್ಷಗಳ ನಂತರ ಪೂರಿ ಜಗನ್ನಾಥ್ ಕನ್ನಡದಲ್ಲಿ ನಿರ್ದೇಶನ]

'ರೋಗ್' ಚಿತ್ರ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣ ಆಗುತ್ತಿದ್ದು, ಚಿತ್ರತಂಡ ಇತ್ತೀಚೆಗೆ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದೆ. ಈ ಸಿನಿಮಾಗೆ ಪುರಿ ಜಗನ್ನಾಥ್ ಪರಭಾಷಾ ನಟಿಯರನ್ನು ನಾಯಕಿಯರನ್ನಾಗಿ ಆಯ್ಕೆ ಮಾಡಿದ್ದಾರೆ. 

'ರೋಗ್' ಚಿತ್ರದ ನಾಯಕ ಇಶಾನ್

'ಅಪ್ಪು' ಚಿತ್ರದ ಬಳಿಕ... ಬರೋಬ್ಬರಿ 14 ವರ್ಷಗಳ ನಂತರ ಕನ್ನಡದ ಚಿತ್ರವೊಂದಕ್ಕೆ ಆಕ್ಷನ್ ಕಟ್ ಹೇಳಲು ಪುರಿ ಜಗನ್ನಾಥ್ ಆಯ್ಕೆ ಮಾಡಿಕೊಂಡಿರುವ ಸಿನಿಮಾ 'ರೋಗ್'. ಈ ಚಿತ್ರದ ಮೂಲಕ ಇಶಾನ್ ಎಂಬ ಯುವ ಪ್ರತಿಭೆಯನ್ನ ಸ್ಯಾಂಡಲ್ ವುಡ್ ಹಾಗೂ ಟಾಲಿವುಡ್ ಗೆ ಪರಿಚಯಿಸಲು ಪುರಿ ಜಗನ್ನಾಥ್ ಹೊರಟಿದ್ದಾರೆ.

ಸ್ಯಾಂಡಲ್ ವುಡ್ ಗೆ ಪರಭಾಷಾ ನಟಿಯರ ಪದಾರ್ಪಣೆ

ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣ ಆಗಲಿರುವ 'ರೋಗ್' ಚಿತ್ರದ ಮೂಲಕ ಪರಭಾಷೆಯ ಇಬ್ಬರು ನಟಿಮಣಿಯರು ಕನ್ನಡ ಬೆಳ್ಳಿಪರದೆ ಮೇಲೆ ಮಿನುಗಲಿದ್ದಾರೆ. ಅವರು ಯಾರು ಅಂದ್ರೆ....

ಇವರೇ ನಾಯಕಿಯರು

ತೆಲುಗಿನ 'ಸೈಝ್ ಝೀರೋ' ಹಾಗೂ 'ಜ್ಯೋತಿಲಕ್ಷ್ಮಿ' ಚಿತ್ರಗಳಲ್ಲಿ 'ಐಟಂ ಗರ್ಲ್' ಆಗಿ ಸೊಂಟ ಬಳುಕಿಸಿದ್ದ ಮುಂಬೈ ಮೂಲದ ಬೆಡಗಿ Angela Krislinzki 'ರೋಗ್' ಚಿತ್ರಕ್ಕೆ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. ಇನ್ನೂ ಪ್ರಿಯಾಂಕಾ ಛೋಪ್ರಾ ಸಂಬಂಧಿ ಆಗಿರುವ ಮನ್ನಾರಾ ಕೂಡ 'ರೋಗ್' ಚಿತ್ರದಲ್ಲಿ ನಾಯಕಿ ಆಗಿ ಅಭಿನಯಿಸಲಿದ್ದಾರೆ.

ಏಂಜೆಲಾ ಕುರಿತು...

ಸೈಕಾಲಜಿ ಸ್ಟೂಡೆಂಟ್ ಆಗಿರುವ Angela Krislinzki ಲಾಟಿನ್ ಹಾಗೂ ಜ್ಯಾಝ್ ಡ್ಯಾನ್ಸ್ ನಲ್ಲಿ ಪರಿಣತಿ ಹೊಂದಿದ್ದಾರೆ.

ಕನ್ನಡ ಚಿತ್ರದಲ್ಲಿ ಮನ್ನಾರಾ

ಪ್ರಿಯಾಂಕಾ ಛೋಪ್ರಾ ಸಂಬಂಧಿಯಾಗಿರುವ ಮನ್ನಾರಾ ಟಾಲಿವುಡ್ ಸಿನಿಮಾಗಳಲ್ಲಿ ಹೆಚ್ಚು ಪರಿಚಿತರು. 2014 ರಲ್ಲಿ ತೆರೆ ಕಂಡ 'ಝಿದ್' ಎಂಬ ಹಿಂದಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಮನ್ನಾರಾ.ಈಗ 'ರೋಗ್' ಚಿತ್ರದ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

'ರೋಗ್' ಚಿತ್ರದ ಮೋಷನ್ ಪೋಸ್ಟರ್

ಅಂದಹಾಗೆ ಪೂರಿ ಜಗನ್ನಾಥ್ ಅವರ 'ರೋಗ್' ಚಿತ್ರದ ಮೋಶನ್ ಪೋಸ್ಟರ್ ರಿಲೀಸ್ ಆಗಿದ್ದು, ವಿಡಿಯೋ ನೋಡಲು ಕ್ಲಿಕ್ ಮಾಡಿ

English summary
The director Puri Jagannadh had came after 14 years to Kannnada Film industry to direct 'Rogue' Film. Actress Angela Krislinzki and Mannara Chopra to make sandalwood debut with 'rogue' Movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada