ಮತ್ತೊಂದು ವಿವಾದದಲ್ಲಿ ದಂಡುಪಾಳ್ಯ-2: ಚಿತ್ರತಂಡದ ಮೇಲೆ ನಟಿ ಸಂಜನಾಗೆ ಮುನಿಸು
ವಿವಾದಗಳಿಗೂ... 'ದಂಡುಪಾಳ್ಯ' ಚಿತ್ರಕ್ಕೂ ಬಿಡಿಸಲಾರದ ನಂಟು ಇರಬೇಕು. 'ದಂಡುಪಾಳ್ಯ-2' ಚಿತ್ರ ಸೆಟ್ಟೇರಿದಾಗಿನಿಂದಲೂ ಒಂದಲ್ಲ ಒಂದು ಕಾಂಟ್ರವರ್ಸಿಯಿಂದ ಸದ್ದು ಮಾಡುತ್ತಲೇ ಇದೆ. ಅಷ್ಟಕ್ಕೂ, 'ದಂಡುಪಾಳ್ಯ-2' ಚಿತ್ರ ನಿಂತು ಹೋಗಿದೆ. ಸಿನಿಮಾ ಬಿಡುಗಡೆ ಆಗುವುದೇ ಅನುಮಾನ ಎಂಬ ಗುಸುಗುಸು ಗಾಂಧಿನಗರದಲ್ಲಿ ಹರಿದಾಡಿತ್ತು.[ಆರಂಭದಲ್ಲೇ ವಿಘ್ನ: 'ದಂಡುಪಾಳ್ಯ 2' ಚಿತ್ರಕ್ಕೆ ಕೋರ್ಟ್ ನೋಟಿಸ್]
ಈಗ ಕಡೆಗೂ 'ದಂಡುಪಾಳ್ಯ-2' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಸಿನಿಮಾದ ಟ್ರೈಲರ್ ಕೂಡ ರಿಲೀಸ್ ಆಗಿದೆ. ಹೀಗಿರುವಾಗಲೇ, ಚಿತ್ರ ಮತ್ತೊಮ್ಮೆ ಬೇಡದ ವಿಷಯಕ್ಕೆ ಸೌಂಡ್ ಮಾಡುತ್ತಿದೆ. ಅದು ನಟಿ ಸಂಜನಾ ವಿಚಾರವಾಗಿ.! ಮುಂದೆ ಓದಿರಿ....

'ದಂಡುಪಾಳ್ಯ' ಗ್ಯಾಂಗ್ ನಲ್ಲಿ ನಟಿ ಸಂಜನಾ
'ದಂಡುಪಾಳ್ಯ' ಗ್ಯಾಂಗ್ ನಲ್ಲಿ ನಟಿ ಸಂಜನಾ 'ಸಾವಿತ್ರಿ' ಪಾತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಈಗ ಇದೇ ವಿಚಾರವಾಗಿ ಹೊಸ ವಿವಾದ ಶುರು ಆಗಿದೆ.['ದಂಡುಪಾಳ್ಯ' ಗ್ಯಾಂಗ್ ನಲ್ಲಿ ಪತ್ತೆಯಾದ ಸಂಜನಾ ಗಲ್ರಾನಿ]

ಚಿತ್ರತಂಡದ ಮೇಲೆ ನಟಿ ಸಂಜನಾಗೆ ಮುನಿಸು.?
'ದಂಡುಪಾಳ್ಯ-2' ಚಿತ್ರತಂಡದ ಮೇಲೆ ನಟಿ ಸಂಜನಾ ಮುನಿಸಿಕೊಂಡಿದ್ದಾರಂತೆ. ಕೋಪಗೊಂಡಿರುವ ಸಂಜನಾ 'ದಂಡುಪಾಳ್ಯ-2' ಚಿತ್ರದ ಪ್ರಚಾರಕ್ಕೆ ಬರುತ್ತಿಲ್ಲವಂತೆ.

ಕೋಪ ಯಾಕೆ.?
ಇಡೀ ಚಿತ್ರತಂಡದ ಫೋಕಸ್ ನಟಿ ಪೂಜಾ ಗಾಂಧಿ ಮೇಲೆ ಹೆಚ್ಚಾಗಿದ್ಯಂತೆ. ಇದರಿಂದ ಬೇಸರಗೊಂಡಿರುವ ನಟಿ ಸಂಜನಾ, 'ದಂಡುಪಾಳ್ಯ-2' ಚಿತ್ರದ ಪ್ರಮೋಷನ್ ಕಾರ್ಯಗಳಿಗೆ ಭಾಗಿಯಾಗುತ್ತಿಲ್ಲ ಎನ್ನುವುದು ಮೂಲಗಳ ಮಾಹಿತಿ.

ಎಲ್ಲ ಕಡೆ ನಿರ್ಲಕ್ಷ್ಯ
'ದಂಡುಪಾಳ್ಯ-2' ಚಿತ್ರದ ಪೋಸ್ಟರ್ ಹಾಗೂ ಟ್ರೈಲರ್ ಗಳಲ್ಲಿ ನಟಿ ಸಂಜನಾ ರವರನ್ನ ನಿರ್ಲಕ್ಷ್ಯ ಮಾಡಲಾಗಿದ್ಯಂತೆ. ಸಂಜನಾ ರವರ ಕೋಪಕ್ಕೆ ಕಾರಣವಾಗಿರುವುದು ಇದೇ.!

ಹೈದರಾಬಾದ್ ನಲ್ಲಿ ಸಂಜನಾ ಪತ್ತೆ ಇಲ್ಲ.!
ಕನ್ನಡ ಹಾಗೂ ತೆಲುಗಿನಲ್ಲಿ 'ದಂಡುಪಾಳ್ಯ-2' ಏಕಕಾಲಕ್ಕೆ ನಿರ್ಮಾಣ ಆಗಿದೆ. ತೆಲುಗಿನ 'ದಂಡುಪಾಳ್ಯಂ' ಚಿತ್ರದ ಪ್ರಚಾರ ಕಾರ್ಯ ಮೊನ್ನೆಯಷ್ಟೇ ಹೈದರಾಬಾದ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಇದಕ್ಕೂ ನಟಿ ಸಂಜನಾ ಹಾಜರ್ ಆಗಿರಲಿಲ್ಲ.

ಹೇಳಿದ್ದು ಒಂದು, ಮಾಡಿರುವುದು ಇನ್ನೊಂದು
ಅಷ್ಟಕ್ಕೂ, 'ಸಾವಿತ್ರಿ' ಪಾತ್ರವನ್ನ ಮೊದಲು ಲಕ್ಷ್ಮಿ ಮಂಚು ಅವರಿಗೆ ಆಫರ್ ಮಾಡಲಾಗಿತ್ತಂತೆ. ಅವರು ರಿಜೆಕ್ಟ್ ಮಾಡಿದ ನಂತರ ಈ ಅವಕಾಶ ಸಂಜನಾ ಪಾಲಾಯ್ತಂತೆ. ಸಿನಿಮಾದಲ್ಲಿ ಪೂಜಾ ಗಾಂಧಿ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ಇದ್ಯೋ, ಸಂಜನಾ ಪಾತ್ರಕ್ಕೂ ಅಷ್ಟೇ ಪ್ರಾಮುಖ್ಯತೆ ಇದೆ ಎಂದು ನಿರ್ದೇಶಕರು ಪ್ರಾಮಿಸ್ ಮಾಡಿದ್ರಂತೆ. ಆದ್ರೀಗ, ಟ್ರೈಲರ್ ನೋಡಿದ್ಮೇಲೆ ತಮ್ಮ ಪಾತ್ರಕ್ಕೆ ಪ್ರಾಮುಖ್ಯತೆ ನೀಡಲಾಗಿಲ್ಲ ಎಂದು ಸಂಜನಾ ಮುನಿಸಿಕೊಂಡಿದ್ದಾರೆ.

ಮುಸುಕಿನ ಗುದ್ದಾಟ
ವಿವಾದದ ಬಗ್ಗೆ ನಟಿ ಸಂಜನಾ ಕಾಮೆಂಟ್ ಮಾಡಲು ರೆಡಿ ಇಲ್ಲ. ಇನ್ನೂ ನಿರ್ದೇಶಕರು ಕೂಡ ದೂರವಾಣಿ ಕರೆಗೆ ಸಿಗುತ್ತಿಲ್ಲ. ಇಬ್ಬರ ಮುಸುಕಿನ ಗುದ್ದಾಟ ಎಲ್ಲಿಯವರೆಗೂ ಹೋಗಿ ತಲುಪುತ್ತದೋ, ದೇವರೇ ಬಲ್ಲ.


Click it and Unblock the Notifications











