»   » ಆರಂಭದಲ್ಲೇ ವಿಘ್ನ: 'ದಂಡುಪಾಳ್ಯ 2' ಚಿತ್ರಕ್ಕೆ ಕೋರ್ಟ್ ನೋಟಿಸ್

ಆರಂಭದಲ್ಲೇ ವಿಘ್ನ: 'ದಂಡುಪಾಳ್ಯ 2' ಚಿತ್ರಕ್ಕೆ ಕೋರ್ಟ್ ನೋಟಿಸ್

Posted By:
Subscribe to Filmibeat Kannada

'ಮುಂಗಾರು ಮಳೆ' ಹುಡುಗಿ ಪೂಜಾ ಗಾಂಧಿ ಅವರು ವಿಭಿನ್ನವಾಗಿ ಕಾಣಿಸಿಕೊಂಡಿರುವ 'ದಂಡು ಪಾಳ್ಯ 2' ಸಿನಿಮಾ ಸೆಟ್ಟೇರಿ ಈಗಾಗಲೇ ಶೂಟಿಂಗ್ ಆರಂಭವಾಗಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ.

ಅಲ್ಲದೇ ಈಗಾಗಲೇ ಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆ ಆಗಿದ್ದು, ಅದನ್ನು ನೋಡುತ್ತಿದ್ದರೆ, ಸಿನಿಮಾ ಇನ್ನೂ ಭೀಕರವಾಗಿರಬಹುದು ಅನ್ನೋ ಅನಿಸಿಕೆ ಪ್ರೇಕ್ಷಕರಲ್ಲಿ ಮೂಡುತ್ತದೆ. ಇದೆಲ್ಲಾ ಹಳೇ ಸುದ್ದಿಯಾಯ್ತು. ಹೊಸ ಸುದ್ದಿ ಏನಪ್ಪಾ ಅಂದ್ರೆ, ಚಿತ್ರ ಶುರುವಾಗುವ ಮುನ್ನವೇ ಚಿತ್ರಕ್ಕೆ ಹಲವಾರು ವಿಘ್ನಗಳು ಎದುರಾಗುತ್ತಿವೆ.


ಹೌದು 'ದಂಡುಪಾಳ್ಯ 2' ಚಿತ್ರದ ನಿರ್ದೇಶಕರಿಗೆ ಮತ್ತು ನಿರ್ಮಾಪಕರಿಗೆ ಚಿತ್ರದ ನಿರ್ಮಾಣಕ್ಕೆ ತಡೆ ಕೋರಿ ಬುಧವಾರದಂದು (ಏಪ್ರಿಲ್ 27) ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ತುರ್ತು ನೋಟಿಸ್ ಜಾರಿ ಮಾಡಿದೆ.[ಅಸಹ್ಯ ಹುಟ್ಟಿಸುವ 'ದಂಡುಪಾಳ್ಯ 2'ರ ಚಿತ್ರಗಳು, ಛೀ!]


Director Srinivasa Raju's Kannada Movie 'Dandupalya 2' in trouble

'ದಂಡುಪಾಳ್ಯ 2' ಚಿತ್ರದ ನಿರ್ಮಾಣಕ್ಕೆ ತಡೆಕೋರಿ ಜೈಲಿನಲ್ಲಿರುವ 6 ಕೈದಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಚಿತ್ರದ ನಿರ್ದೇಶಕ ಶ್ರೀನಿವಾಸ ರಾಜು ಮತ್ತು ನಿರ್ಮಾಪಕರಾದ ಪ್ರಶಾಂತ್ ಜಿ ಆರ್ ಹಾಗೂ ಗಿರೀಶ್ ಅವರಿಗೆ ನೋಟಿಸ್ ನೀಡಿದೆ.


'ನಮ್ಮ ಮೇಲಿರುವ ಪ್ರಕರಣಗಳ ಕುರಿತು ವಿಚಾರಣೆ ಇನ್ನೂ ಕೋರ್ಟ್ ನಲ್ಲಿ ಬಾಕಿಯಿದೆ, ಅಲ್ಲದೇ ತಮ್ಮ ಬದುಕಿನ ಘಟನೆ ಕುರಿತು ತಮ್ಮಿಂದ ಯಾವುದೇ ಹೇಳಿಕೆ ಪಡೆಯದೇ ಚಿತ್ರ ನಿರ್ಮಾಣ ಮಾಡಲಾಗುತ್ತಿದೆ' ಎಂದು ಆರೋಪಿಸಿ ಕೈದಿಗಳು ಕೋರ್ಟ್ ಮೆಟ್ಟಿಲೇರಿದ್ದರು.[ಏನು 'ದಂಡುಪಾಳ್ಯ 2' ನಲ್ಲಿ ಬಿಗ್ ಬಾಸ್ ಶ್ರುತಿನಾ?]


ಅಲ್ಲದೆ ನ್ಯಾಯಾಲಯದಲ್ಲಿ ವಿಚಾರಣೆ ಪೂರ್ಣಗೊಂಡ ಬಳಿಕ ನಮ್ಮ ಅನುಮತಿ ಪಡೆದು ಚಿತ್ರ ಬಿಡುಗಡೆಗೊಳಿಸಲು ಸೂಚಿಸಬೇಕು ಎಂದು ಕೈದಿಗಳು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಏಪ್ರಿಲ್ 30ಕ್ಕೆ ಈ ಪ್ರಕರಣ ಕುರಿತಂತೆ ವಿಚಾರಣೆಯನ್ನು ಸಿಟಿ ಸಿವಿಲ್ ಕೋರ್ಟ್ ಮುಂದೂಡಿದೆ.[ಗೆದ್ದು ಸೋತ ಚಿತ್ರ : ಕ್ಯಾಕರಿಸಿ ನಕ್ಕ ಗಾಂಧಿನಗರ]


2012ರಲ್ಲಿ ಸ್ಯಾಂಡಲ್ ವುಡ್ ಸಿನಿರಸಿಕರನ್ನು ಬೆಚ್ಚಿ ಬೀಳಿಸಿದ 'ದಂಡುಪಾಳ್ಯ' ಚಿತ್ರ ಬಂದಾಗಲೂ ಕೂಡ ಇಂತಹ ಗೊಂದಲಗಳು ಉಂಟಾಗಿತ್ತು. ಇದೀಗ ಇದರ ಮುಂದುವರಿದ ಭಾಗಕ್ಕೆ ಕಳೆದ ತಿಂಗಳು ಚಾಲನೆ ದೊರೆತಿದ್ದು, ಇದೂ ಕೂಡ ಆರಂಭದಲ್ಲೇ ವಿಘ್ನಗಳನ್ನು ಎದುರಿಸುತ್ತಿದೆ. ಈಗಾಗಲೇ ಬಿಡುಗಡೆ ಆಗಿರುವ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಇಲ್ಲಿದೆ..


-
-
-
-
-
-
-
-
-
English summary
Bengaluru City Civil Court Notice: Accused Oppose Director Srinivasa Raju's Kannada Movie 'Dandupalya 2' shooting.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada