»   »  'ಗಣೇಶ್ ಮೆಡಿಕಲ್ಸ್'ನಲ್ಲಿ 'ನೀರ್ ದೋಸೆ' ನಿರ್ದೇಶಕರಿಗೇನು ಕೆಲಸ?

'ಗಣೇಶ್ ಮೆಡಿಕಲ್ಸ್'ನಲ್ಲಿ 'ನೀರ್ ದೋಸೆ' ನಿರ್ದೇಶಕರಿಗೇನು ಕೆಲಸ?

Posted By:
Subscribe to Filmibeat Kannada

ಕನ್ನಡಿಗರಿಗೆ 'ನೀರ್ ದೋಸೆ'ಯಂತಹ ಉತ್ತಮ ಸದಭಿರುಚಿಯ ಚಿತ್ರ ನೀಡಿದ ನಿರ್ದೇಶಕ ವಿಜಯ್ ಪ್ರಸಾದ್, ಚಿತ್ರ ವೀಕ್ಷಿಸಿದ ಎಲ್ಲರಿಂದ ಮೆಚ್ಚುಗೆ ಪಡೆದಿದ್ದಾರೆ. ಈ ಚಿತ್ರದ ಯಶಸ್ಸಿನ ನಂತರ 'ಲೇಡಿಸ್ ಟೈಲರ್' ಸಿನಿಮಾ ನಿರ್ದೇಶನದಲ್ಲಿ ತೊಡಗಿಕೊಂಡಿದ್ದ ವಿಜಯ್ ಪ್ರಸಾದ್. ಈಗ 'ನೀರ್ ದೋಸೆ' ನಿರ್ಮಾಪಕರೊಂದಿಗೆ ಮತ್ತೊಂದು ಚಿತ್ರಕ್ಕೆ ಕೈಜೋಡಿಸಿದ್ದಾರೆ.[ವಿಮರ್ಶೆ : ಬಾಡೂಟದ ಜೊತೆ 'ನೀರ್ ದೋಸೆ' ಸವಿದಂತೆ ಇದೇ ಜಗ್ಗೇಶ.!]

ಹೌದು, ವಿಜಯ್ ಪ್ರಸಾದ್, ನಿರ್ಮಾಪಕ ಪ್ರಸನ್ನ ಅವರೊಂದಿಗೆ ಮತ್ತೊಂದು ಸಿನಿಮಾ ಮಾಡಲು ಮುಂದಾಗಿದ್ದಾರೆ. ಆ ಸಿನಿಮಾ ಯಾವುದು? ಹೀರೋ ಯಾರು? ಇಲ್ಲಿದೆ ಡೀಟೇಲ್ಸ್.

ಸಿನಿಮಾ ಟೈಟಲ್ ಏನು?

ನಿರ್ದೇಶಕ ವಿಜಯ್ ಪ್ರಸಾದ್ ಮತ್ತು ನಿರ್ಮಾಪಕ ಪ್ರಸನ್ನ ಅವರ ಕಾಂಬಿನೇಷನ್ ನಲ್ಲಿ ಮೂಡಿ ಬರಲಿರುವ ಸಿನಿಮಾ ಹೆಸರು 'ಗಣೇಶ್ ಮೆಡಿಕಲ್ಸ್'.

'ಗಣೇಶ್ ಮೆಡಿಕಲ್ಸ್' ನಾಯಕ..

'ಗಣೇಶ್ ಮೆಡಿಕಲ್ಸ್' ಚಿತ್ರದಲ್ಲಿ ನಟ ಸತೀಶ್ ನೀನಾಸಂ ನಾಯಕನಾಗಿ ಬಣ್ಣ ಹಚ್ಚಲಿದ್ದಾರೆ.[ಸತೀಶ್ ನೀನಾಸಂ 'ದರ್ಶನ್, ಸುದೀಪ್, ಪುನೀತ್' ಬಗ್ಗೆ ಹೇಳಿದ ಮಾತುಗಳಿವು..]

ವಿಜಯ್ ಪ್ರಸಾದ್ ಸದ್ಯಕ್ಕೆ ಬಿಜಿ

ಅಂದಹಾಗೆ ಪ್ರಸನ್ನ ಅವರ ನಿರ್ಮಾಣದಲ್ಲಿ ವಿಜಯ್ ಪ್ರಸಾದ್ ನಿರ್ದೇಶನದಲ್ಲಿ ಮೂಡಿಬರಲಿರುವ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ ಅಷ್ಟೆ. ಆದ್ರೆ ಚಿತ್ರೀಕರಣ ಇನ್ನೂ ತಡವಾಗಲಿದೆ. ಕಾರಣ ವಿಜಯ್ ಪ್ರಸಾದ್ ಪ್ರಸ್ತುತ 'ಲೇಡಿಸ್ ಟೈಲರ್' ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ.

'ಟೈಗರ್ ಗಲ್ಲಿ'ಯಲ್ಲಿ ಸತೀಶ್ ನೀನಾಸಂ

ನಟ ಸತೀಶ್ ನೀನಾಸಂ ಸಹ ರವಿ ಶ್ರೀವತ್ಸ ನಿರ್ದೇಶನದ 'ಟೈಗರ್ ಗಲ್ಲಿ' ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಜೊತೆಗೆ 'ಚಂಬಲ್' ಸಿನಿಮಾದಲ್ಲಿಯೂ ತೊಡಗಿಕೊಂಡಿದ್ದಾರೆ.

ಸತೀಶ್ ಮ್ಯಾನರಿಸಂ ಗೆ ತಕ್ಕ ಕಥೆ

'ಗಣೇಶ್ ಮೆಡಿಕಲ್ಸ್' ಕಥೆ ಕೇಳಿರುವ ಸತೀಶ್, " ಸ್ಟೋರಿಯನ್ನು ನನಗಾಗಿಯೇ ಸಿದ್ಧಪಡಿಸಿದಂತಿದೆ. ವಿಜಯ್ ಪ್ರಸಾದ್ ಅವರು ಕಥಾವಸ್ತುವಿಗೆ ನೀಡುವ ಪ್ರಾಮುಖ್ಯತೆ ಮತ್ತು ಸಂಭಾಷಣೆ ನನ್ನ ಅಭಿನಯಕ್ಕೆ ಸಹಕರಿಸುತ್ತದೆ. ಅವರು 'ಗಣೇಶ್ ಮೆಡಿಕಲ್ಸ್' ಚಿತ್ರದ ಬಗ್ಗೆ ಸ್ಪಷ್ಟವಾಗಿದ್ದಾರೆ. ಅವರ ಚಿತ್ರಕ್ಕೆ ಎಷ್ಟು ಶ್ರಮ ವಹಿಸುತ್ತಾರೆ ಎಂಬುದಕ್ಕೆ 'ನೀರ್ ದೋಸೆ' ಚಿತ್ರವೇ ಉದಾಹರಣೆ" ಎಂದು ಪ್ರತಿಕ್ರಿಯಿಸಿದ್ದಾರೆ.

English summary
Kannada Actor Sathish Ninasam will be Play lead role 'Neerdose' director Vijaya prasad next movie 'Ganesh Medicals'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada