Don't Miss!
- Sports
U-19 ಮಹಿಳಾ ಟಿ20 ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ ಬಹುಮಾನ ಘೋಷಿಸಿದ ಜಯ್ ಶಾ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಿಮರ್ಶೆ : ಬಾಡೂಟದ ಜೊತೆ 'ನೀರ್ ದೋಸೆ' ಸವಿದಂತೆ ಇದೇ ಜಗ್ಗೇಶ.!
ಡೈಲಾಗ್ - 1 :
ಕುಮುದಾ : ಈ ವಯಸ್ಸಲ್ಲಿ ಸ್ಟ್ರೆಂಥ್ ಹೇಗೆ?
ದತ್ತಣ್ಣ : ನೀವು ಜ್ವರ ಬಂದ್ರೆ ಏನ್ ಮಾಡ್ತೀರಿ?
ಕುಮುದಾ : ಮಾತ್ರೆ ತಗೊಳ್ತೀನಿ
ದತ್ತಣ್ಣ : ನಾನೂ ಅಷ್ಟೆ. ಮಾತ್ರೆ ತಗೊತೀನಿ.
ಡೈಲಾಗ್ - 2:
ದತ್ತಣ್ಣ - ಏನೋ ಪದಬಂಧ ಆಡ್ತಿದ್ಯಾ?
ಜಗ್ಗು - ಹ್ಹೂಂ, ಮೇಲಿಂದ ಕೆಳಕ್ಕೆ...ಕಿಟಕಿ ಇದ್ದರೆ ಮನೆ, ಕಿಂಡಿ ಇದ್ದರೆ.?
ದತ್ತಣ್ಣ - ತೋಟದ ಮನೆ.!
ಡೈಲಾಗ್ - 3
ಜಗ್ಗು - ಏನ್ ಶಾನುಭೋಗ್ರೆ ಲೇಟು?
ದತ್ತಣ್ಣ - ಮಾತ್ರೆ ಸಿಕ್ಕಿದ್ದು ಲೇಟ್ ಆಯ್ತು
ಜಗ್ಗು - ಜಮೀನು ಬಗ್ಗೆ ಇನ್ನೂ ಮಾತುಕತೆ ಆಗಿಲ್ಲ. ಅಷ್ಟು ಬೇಗ ವ್ಯವಸಾಯ ಬಗ್ಗೆ ಮಾತಾಡ್ತಿದ್ದೀರಲ್ಲಾ.!
ಡೈಲಾಗ್ - 4
ಜಗ್ಗು - ಸಂಬಂಧಿಗಳು ಒಂಥರಾ ಬ್ರಾ ಇದ್ಹಂಗೆ. ದಷ್ಟಪುಷ್ಟವಾಗಿ ಇದ್ದಷ್ಟು ಕರೆಕ್ಟಾಗಿ ಕೂರುತ್ತೆ. ಇಲ್ಲಾಂದ್ರೆ ಬಿಚ್ಕೊಂಡ್ ಬಿಡುತ್ತೆ.!
ಇವು ಸ್ಯಾಂಪಲ್ ಅಷ್ಟೆ.! ಇಂತಹ 'ಬಾಡೂಟ'ದ ಡೈಲಾಗ್ ಗಳು 'ನೀರ್ ದೋಸೆ' ಚಿತ್ರದ ಉದ್ದಕ್ಕೂ ಅದೆಷ್ಟು ಇವೆಯೋ..ಲೆಕ್ಕವೇ ಇಲ್ಲ.
'ನೀರ್ ದೋಸೆ' ಚಿತ್ರದ ಸಂಪೂರ್ಣ ವಿಮರ್ಶೆ ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿದೆ. ಓದಿರಿ...

ಪೋಲಿಗಳ ಕಥೆ ಇದು!
ಲೋಕೋಪಯೋಗಿ ಇಲಾಖೆಯಲ್ಲಿ ಕೆಲಸ ನಿರ್ವಹಿಸಿ ನಿವೃತ್ತಿ ಪಡೆದಿರುವ ದತ್ತು (ದತ್ತಣ್ಣ)ಗೆ 'ಆಟ' ಆಡುವ ತವಕ. ಆಗಾಗ 'ಔಟ್ ಡೋರ್ ಗೇಮ್' ಆಡಿ ಅಭ್ಯಾಸ ಇರುವ ಹೆಣ ಸಾಗಿಸುವ ವ್ಯಾನ್ ಡ್ರೈವರ್ ಜಗ್ಗು (ಜಗ್ಗೇಶ್ ಕುಮಾರ್) ಕೂಡ ದತ್ತು ಜೊತೆ ಸೇರಿಕೊಳ್ತಾನೆ. ಆಗ ಇಬ್ಬರ ಕಣ್ಣಿಗೆ ಕ್ಲಬ್ ನಲ್ಲಿ ಕಾಣಿಸಿಕೊಳ್ಳುವುದು 'ನಡು ತಿರುಗಿಸುವ ನೀರೆ' ಕುಮುದಾ (ಹರಿಪ್ರಿಯಾ).

ಆಟವಾಡಲು ಕುಮುದಾ ಒಪ್ಪುತ್ತಾಳಾ?
ಆಟವಾಡಲು ಹ್ಯಾಂಡ್ ಲೋನ್ ಪಡೆದು ಬಂದಿರುವ ಜಗ್ಗು ಮತ್ತು ದತ್ತು ಬಯಕೆಯನ್ನ ಕುಮುದಾ (ಹರಿಪ್ರಿಯಾ) ಈಡೇರಿಸುತ್ತಾಳಾ ಎಂಬುದೇ ಮುಂದಿನ ಭಾಗ.

'ನೀರ್ ದೋಸೆ' ಟೈಟಲ್ ಯಾಕೆ?
ಕುಮುದಾ, ದತ್ತು ಅಕ್ಕ ಹಾಗೂ ಜಗ್ಗು ಅಪ್ಪನಿಗೂ 'ನೀರ್ ದೋಸೆ'ಗೂ ಒಂದು ನಂಟಿದೆ. ಆ ನಂಟಿನ ಗುಟ್ಟು ತಿಳಿಯಲು ಸಿನಿಮಾ ನೋಡಿ....

ಹರಿಪ್ರಿಯಾ ನಟನೆ ಹೇಗಿದೆ?
ನಟಿ ಹರಿಪ್ರಿಯಾ ಇಲ್ಲಿ ಗ್ಲಾಮರ್ ಗೊಂಬೆ. ಬಿಂಕ ಬಿಟ್ಟು ಬೋಲ್ಡ್ ಆಗಿ ಮಿಂಚಿರುವ ಹರಿಪ್ರಿಯಾ, ಪಡ್ಡೆ ಹುಡುಗರಿಗೆ ಇಷ್ಟವಾಗಬಹುದು. ಅವರ ಮೇಕ್ ಓವರ್ ಬೊಂಬಾಟ್. ಆದ್ರೆ, ಹರಿಪ್ರಿಯಾ ಕಷ್ಟಪಟ್ಟು ಬೆಲ್ಲಿ ಡ್ಯಾನ್ಸ್ ಮಾಡಿದಂತಿದೆ. ಕಟ್ಸ್ ನಲ್ಲಿ ಫಿನಿಶಿಂಗ್ ಬಂದಿಲ್ಲ.

ಜಗ್ಗೇಶ್ ಬಗ್ಗೆ ನೋ ಕಾಮೆಂಟ್ಸ್!
ಜಗ್ಗೇಶ್ ನಟನೆ ಬಗ್ಗೆ ತುಟಿ ಎರಡು ಮಾಡುವ ಹಾಗಿಲ್ಲ. ಅವರ ಹಾವ-ಭಾಗ, ಕಾಮಿಡಿ ಟೈಮಿಂಗ್ ಸೂಪರ್.

ದತ್ತಣ ಮ್ಯಾಜಿಕ್
ಹಿರಿಯ ನಟ ದತ್ತಣ್ಣ ಕೂಡ ತಮ್ಮ ಪಾತ್ರವನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಸುಮನ್ ರಂಗನಾಥ್ ಗೆ ಏನು ಕೆಲಸ?
ವಯಸ್ಸು 30 ದಾಟಿದ್ರೂ, ಸಕ್ಕರೆ ಖಾಯಿಲೆ ಬಂದಿದ್ದರೂ, ಮದುವೆಯಾಗದ ಜಗ್ಗು ಬಾಳಿನ ಸಂಸಾರ ದೋಣಿ ನಡೆಸಲು ಮುಂದೆ ಬರುವುದು ಶಾರದಾ ಮಣಿ (ಸುಮನ್ ರಂಗನಾಥ್). ಮಧ್ಯಮ ವರ್ಗದ ಕುಟುಂಬದ ಹೆಣ್ಣು ಮಗಳಾಗಿ ಸುಮನ್ ರಂಗನಾಥ್ ನಟನೆ ಇಷ್ಟವಾಗುತ್ತೆ.

ಕಥೆಗಿಂತ ಮಾತೇ ಎಲ್ಲ.!
'ನೀರ್ ದೋಸೆ' ಚಿತ್ರದಲ್ಲಿ ಮಾತೇ ಬಂಡವಾಳ. ನಿರ್ದೇಶಕ ವಿಜಯ್ ಪ್ರಸಾದ್ ಕಥೆಗಿಂತ ಸಂಭಾಷಣೆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಂತಿದೆ. ಡೈಲಾಗ್ ಗಳಲ್ಲಿ ಅರ್ಥ, ಒಳಾರ್ಥ, ಅಪಾರ್ಥ, ಅಪಾರ ಅರ್ಥಗಳು ಸಾಕಷ್ಟಿವೆ.

ಬಾಡೂಟದ ಮಾತು ಹೆಚ್ಚು!
ನೀರ್ ದೋಸೆ ಮತ್ತು ಫಿಶ್ ಕರಿ ಕಾಂಬಿನೇಷನ್ ಇದ್ದ ಹಾಗೆ, 'ನೀರ್ ದೋಸೆ' ಚಿತ್ರದಲ್ಲಿ ನಾನ್ ವೆಜ್ ಜೋಕ್ ಗಳೇ ಫುಲ್ ಮೀಲ್ಸ್.

ಅಲ್ಲಲ್ಲಿ ಸಂದೇಶ ಕೂಡ ಇದೆ
'ನೀರ್ ದೋಸೆ' ಚಿತ್ರದಲ್ಲಿ ಆಮ್ಲೆಟ್ ಡೈಲಾಗ್ ಗಳ ಜೊತೆಗೆ ಮಾನವೀಯತೆಯ ಮೌಲ್ಯಗಳು ಕೂಡ ಇವೆ.

ಸಂಗೀತ ಚೆನ್ನಾಗಿದೆ
ಅನೂಪ್ ಸೀಳಿನ್ ಸಂಗೀತ ನಿರ್ದೇಶನದ ಎರಡು ಹಾಡುಗಳು ಚೆನ್ನಾಗಿವೆ.

ಫ್ಯಾಮಿಲಿ ಆಡಿಯನ್ಸ್ ಗೆ ಕಷ್ಟ ಕಷ್ಟ.!
ಗಂಡ, ಹೆಂಡತಿ, ಮಕ್ಕಳು, ಅಜ್ಜಿ, ತಾತಾ...ಹೀಗೆ ಇಡೀ ಕುಟುಂಬ ಕೂತು 'ನೀರ್ ದೋಸೆ' ಸವಿಯಲು ಕಷ್ಟ. ಹೇಳಿ ಕೇಳಿ ಇದು A ಸರ್ಟಿಫಿಕೇಟ್ ಸಿನಿಮಾ ಅನ್ನೋದು ನೆನಪಿರಲಿ.

ಫೈನಲ್ ಸ್ಟೇಟ್ ಮೆಂಟ್
'ನೀರ್ ದೋಸೆ' ಚಿತ್ರದಲ್ಲಿ ಮನರಂಜನೆ ಗ್ಯಾರೆಂಟಿ. ಎಲ್ಲೂ ಬೋರ್ ಆಗಲ್ಲ. ಪಡ್ಡೆ ಹುಡುಗ್ರಿಗೆ ಟೈಮ್ ಪಾಸ್ ಸಿನಿಮಾ. ಡಬಲ್ ಮೀನಿಂಗ್ ಮಾತುಗಳನ್ನ ಎಂಜಾಯ್ ಮಾಡುವವರು 'ನೀರ್ ದೋಸೆ' ಸಿನಿಮಾ ನೋಡಿ ಮಜಾ ಮಾಡಬಹುದು. ಆದ್ರೆ, ನೀವು ಯಾರ ಜೊತೆ ಸಿನಿಮಾ ನೋಡ್ತೀರಾ ಎಂಬುದರ ಬಗ್ಗೆ ಎಚ್ಚರ ವಹಿಸಿ. ಬಾಡೂಟ ಕಂಡ್ರೆ ಮೂಗು ಮುಚ್ಚಿಕೊಳ್ಳುವ ಹಾಗಿದ್ರೆ, ನಿಮಗೆ 'ನೀರ್ ದೋಸೆ' ಬ್ಯಾಡ್ ಚಾಯ್ಸ್.