»   » 'ರಾಜಕುಮಾರ' ನೋಡಿ ಮಗುವಿನಂತೆ ಕಣ್ಣೀರಿಟ್ಟ ಶಿವಣ್ಣ

'ರಾಜಕುಮಾರ' ನೋಡಿ ಮಗುವಿನಂತೆ ಕಣ್ಣೀರಿಟ್ಟ ಶಿವಣ್ಣ

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರ ರಾಜ್ಯದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಸ್ಯಾಂಡಲ್ ವುಡ್ ಸಿನಿ ಪ್ರೇಮಿಗಳಿಗೆ 'ಕಸ್ತೂರಿ ನಿವಾಸ' ನೆನಪಿಸುತ್ತಿದೆ. ಅಲ್ಲದೇ ಚಿತ್ರ ನೋಡಿದ ಪ್ರತಿಯೊಬ್ಬರು ಭಾವನಾತ್ಮಕವಾಗಿ ಮನಸೋತಿದ್ದಾರೆ.['ರಾಜಕುಮಾರ' ಚಿತ್ರತಂಡದಿಂದ ಹೊಸ ಅಭಿಯಾನ!]

Shiva Rajkumar shed tears after watched 'Raajakumar' Movie

ಕನ್ನಡದ ರಾಜರತ್ನ ಪುನೀತ್ ರಾಜ್ ಕುಮಾರ್ ನಟನೆಯ 'ರಾಜಕುಮಾರ' ಚಿತ್ರನೋಡಿ ಪ್ರೇಕ್ಷಕರು ಭಾವುಕರಾಗಿದ್ದರು. ಈಗ ಶಿವಣ್ಣ ಸಹ ಚಿತ್ರ ನೋಡಿ ಮನಸೋತಿದ್ದಾರೆ. ಇಂದು (ಏಪ್ರಿಲ್ 2) ಒರಾಯನ್ ಮಾಲ್ ನಲ್ಲಿ ಚಿತ್ರ ವೀಕ್ಷಿಸಿದ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಭಾವುಕರಾಗಿ ಮಗುವಿನಂತೆ ಕಣ್ಣೀರು ಸುರಿಸಿದರು.

'ರಾಜಕುಮಾರ' ನೋಡಿದ ಶಿವಣ್ಣ, ಚಿತ್ರದಲ್ಲಿ ಕಂಡುಬಂದ ಎಮೋಶನಲ್ ಎಲಿಮೆಂಟ್ ಗಳನ್ನು ನೋಡಿ ಅಪ್ಪನನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ತಂದೆ-ತಾಯಿ, ಜೀವನದ ಮೌಲ್ಯಗಳು ಮತ್ತು ಡಾ.ರಾಜ್ ಕುಮಾರ್ ಅವರು ಹೇಳಿದ ಮೌಲ್ಯಗಳನ್ನು ಚಿತ್ರದಲ್ಲಿ ಸಂತೋಷ್ ಆನಂದ್ ರಾಮ್ ಸರಳವಾಗಿ ಕಟ್ಟಿಕೊಟ್ಟಿದ್ದರು. ಈ ಎಲ್ಲಾ ಅಂಶಗಳನ್ನು ಚಿತ್ರದಲ್ಲಿ ನೋಡಿದ ಶಿವಣ್ಣ ಹೆಚ್ಚು ಭಾವುಕರಾದರು. [ವಿಮರ್ಶೆ: ಡಾ'ರಾಜಕುಮಾರ' ಹೆಸರು ಉಳಿಸಿದ ಸಿನಿಮಾ]

Shiva Rajkumar shed tears after watched 'Raajakumar' Movie 2

ಚಿತ್ರ ಕೃಪೆ: Sagar Manasu

ಪುನೀತ್ ರಾಜ್ ಕುಮಾರ್ ನನಗೆ ಸ್ಫೂರ್ತಿ ಎಂದು ಯಾವಾಗಲು ಹೇಳುವ ಶಿವಣ್ಣ, ಚಿತ್ರದಲ್ಲಿ ತಮ್ಮನ ಅಭಿನಯದಲ್ಲಿ ಅಪ್ಪನನ್ನು ನೋಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನೂ 'ರಾಜಕುಮಾರ' ಚಿತ್ರದ ಬಗ್ಗೆ ಪ್ರತಿಕ್ರಿಯಿಸಿರುವ ರಾಘವೇಂದ್ರ ರಾಜ್ ಕುಮಾರ್ "ಪುನೀತ್ ರಾಜ್ ಕುಮಾರ್ ನಿಜವಾದ 'ರಾಜಕುಮಾರ'. ತಮ್ಮ ತಂದೆ ಮತ್ತೆ ಬಂದ ಹಾಗೆ ಫೀಲ್ ಆಗಿದೆ" ಎಂದಿದ್ದಾರೆ.

English summary
Kannada Actor Shiva Rajkumar shed tears after watching 'Raajakumara' Movie in Orion mall,Bengaluru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada