»   » 'ರಾಜಕುಮಾರ' ಚಿತ್ರತಂಡದಿಂದ ಹೊಸ ಅಭಿಯಾನ!

'ರಾಜಕುಮಾರ' ಚಿತ್ರತಂಡದಿಂದ ಹೊಸ ಅಭಿಯಾನ!

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟಿಸಿ, ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಿರುವ 'ರಾಜಕುಮಾರ' ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಭಾವನಾತ್ಮಕ ಸಂಬಂಧಗಳು ಮತ್ತು ಅದರ ಮೌಲ್ಯವನ್ನ ಎತ್ತಿ ಹಿಡಿಯುವಂತಹ ಕಥೆಯನ್ನ ಹೊಂದಿರುವ 'ರಾಜಕುಮಾರ' ಚಿತ್ರವನ್ನ ಚಿತ್ರಪ್ರೇಮಿಗಳು ಎರಡು ಕೈಯಿಂದ ಅಪ್ಪಿಕೊಂಡಿದ್ದಾರೆ. ಈ ಖುಷಿಯಲ್ಲಿರುವ ನಿರ್ದೇಶಕ ಸಂತೋಷ್ ಅವರು, ಈಗ ಹೊಸ ಅಭಿಯಾನ ಕೈಗೊಂಡಿದ್ದಾರೆ. ಅದ್ರ ಹೆಸರು ''Selfie With Parents'.....ಇದರ ಬಗ್ಗೆ ತಿಳಿಯಲು ಮುಂದೆ ಓದಿ.....

'Selfie With Parents' ಏನದು?

''ನಿಮ್ಮ ತಂದೆ-ತಾಯಿ ಜೊತೆ ಒಂದು ಸೆಲ್ಫಿ ತೆಗೆದು ನಿಮ್ಮ ಫೇಸ್ ಬುಕ್ ಅಥವಾ ವಾಟ್ಸಪ್ ಪ್ರೋಪೈಲ್ ಗೆ ಡಿ.ಪಿ ಆಗಿ ಹಾಕಿಕೊಳ್ಳಬೇಕು''.['ರಾಜಕುಮಾರ' ನೋಡಿ 100% ಗುಣಗಾನ ಮಾಡಿದ ಪ್ರೇಕ್ಷಕರು]

ಖುಷಿ ಹಂಚಿಕೊಳ್ಳಿ

ಸಂತೋಷ್ ಆನಂದ್ ರಾಮ್ ಹೇಳದಾಗೆ, ನಿಮ್ಮ ತಂದೆ-ತಾಯಿ ಜೊತೆ ಸೆಲ್ಫಿ ತೆಗೆದು ಮುಂದೆ ನೀಡಿರುವ ಹ್ಯಾಷ್ ಟ್ಯಾಗ್ ಬಳಸಿ (#celebrateTogetherness) ಪೋಸ್ಟ್ ಮಾಡಿ. ಇದರಿಂದ ಖುಷಿಯನ್ನ ಹಂಚಿಕೊಳ್ಳಿ.[ಮೊದಲ ದಿನ 'ರಾಜಕುಮಾರ'ನ ಕಲೆಕ್ಷನ್ ಎಷ್ಟು? ]

ಸಂತೋಷ್ ಅವರ ಸೆಲ್ಫಿ!

'ರಾಜಕುಮಾರ' ಚಿತ್ರದ ನಿರ್ದೇಶಕ ಸಂತೋಷ್ ಹೇಳಿದಾಗೆ, ತಮ್ಮ ತಂದೆ-ತಾಯಿ ಜೊತೆಯಲ್ಲಿ ಸೆಲ್ಫಿ ತೆಗೆದು ಪೋಸ್ಟ್ ಮಾಡಿದ್ದಾರೆ.['ರಾಜಕುಮಾರ'ನಲ್ಲಿ ಕಸ್ತೂರಿ ಸುವಾಸನೆ ಸವಿದು ಖುಷಿಯಾದ ವಿಮರ್ಶಕರು ]

ಪುನೀತ್ ರಾಜ್ ಕುಮಾರ್ ಮಾಡಲಿದ್ದಾರೆ!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಕೂಡ ಅವರ ತಾಯಿ ಜೊತೆ ಸೆಲ್ಫಿ ತೆಗೆದು ಪೋಸ್ಟ್ ಮಾಡಲಿದ್ದಾರೆಂದು ಸಂತೋಷ್ ತಿಳಿಸಿದ್ದಾರೆ.

'ರಾಜಕುಮಾರ' ಅಭಿಯಾನಗೆ ಅಭಿಮಾನಿಗಳ ಪ್ರತಿಕ್ರಿಯೆ

'ರಾಜಕುಮಾರ' ಚಿತ್ರತಂಡದ ಪರವಾಗಿ ಹಮ್ಮಿಕೊಂಡಿರುವ 'ಸೆಲ್ಫಿ ವಿತ್ ಪೇರೆಂಟ್ಸ್' ಅಭಿಯಾನಗೆ ಅಭಿಮಾನಿಗಳಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ತಮ್ಮ ಪೋಷಕರ ಜೊತೆ ಸೆಲ್ಫಿ ತೆಗೆದು ಪೋಸ್ಟ್ ಮಾಡುತ್ತಿದ್ದಾರೆ.['ರಾಜಕುಮಾರ' ನೋಡುವುದಕ್ಕೂ ಮುಂಚೆ ಈ ಸಂಗತಿಗಳನ್ನ ತಿಳಿದುಕೊಳ್ಳಿ!]

English summary
Raajakumara Director Santhosh Anandram Conduct New Campaign Called As 'Selfie With Parents'' is a Campaign From Raajakumara.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada