Ghost Trailer: 'ಘೋಸ್ಟ್' ಕನ್ನಡಕ್ಕಿಂತ ಹಿಂದಿ ಟ್ರೈಲರ್‌ಗೆ ಹೆಚ್ಚು ವೀವ್ಸ್.. ಯಾಕಿಂಗೆ? ತೆಲುಗು ತಮಿಳಿನಲ್ಲೆಷ್ಟು?

'ಘೋಸ್ಟ್' ಸ್ಯಾಂಡಲ್‌ವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟ್ ಸಿನಿಮಾ. ದಸಾರ ಹಬ್ಬಕ್ಕೆ ಅದ್ದೂರಿಯಾಗಿ ಸಿನಿಮಾ ಬಿಡುಗಡೆಯಾಗುತ್ತಿದೆ. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, ಬಾಲಿವುಡ್ ನಟ ಅನುಪಮ್ ಖೇರ್, ಮಲಯಾಳಂ ನಟ ಜಯರಾಮ್ ಸೇರಿದಂತೆ ದಿಗ್ಗಜರೇ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಹೀಗಾಗಿ ಸಿನಿಮಾಗೆ ಸಹಜವಾಗಿಯೇ ಕ್ರೇಜ್ ಇದೆ.

ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಐದೂ ಭಾಷೆಗಳಲ್ಲೂ ರಿಲೀಸ್ ಆಗುತ್ತಿದೆ. ಇತ್ತೀಚೆಗಷ್ಟೇ ಐದೂ ಭಾಷೆಯಲ್ಲೂ 'ಘೋಸ್ಟ್' ಟ್ರೈಲರ್ ರಿಲೀಸ್ ಆಗಿದೆ. ಶ್ರೀನಿ ಆಕ್ಷನ್ ಕಟ್ ಹೇಳಿದ ಸಿನಿಮಾದ ಟ್ರೈಲರ್‌ಗೆ ಮೆಚ್ಚುಗೆನೂ ಸಿಕ್ಕಿದೆ.

Shivarajkumar Anupam Kher Movie Ghost Hindi Trailer got more views than Kannada

ಶಿವಣ್ಣನ ಸಿನಿಮಾಗೆ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಹೆಚ್ಚು ರೆಸ್ಪಾನ್ಸ್ ಸಿಗಬಹುದು ಎಂದೇ ನಿರೀಕ್ಷೆ ಮಾಡಲಾಗಿತ್ತು. ಆದರೆ, ಆಶ್ಚರ್ಯ ಎಂಬಂತೆ 'ಘೋಸ್ಟ್' ಹಿಂದಿ ವರ್ಷನ್ ಟ್ರೈಲರ್‌ಗೆ ಕನ್ನಡಕ್ಕಿಂತಲೂ ಹೆಚ್ಚು ವೀವ್ಸ್ ಸಿಕ್ಕಿದೆ. ಈ ಲೆಕ್ಕಾಚಾರ ಸಿನಿಮಾ ಮಂದಿಯನ್ನು ಕನ್ಫ್ಯೂಸ್ ಮಾಡಿರೋದಂತೂ ನಿಜ. ಅಷ್ಟಕ್ಕೂ 'ಘೋಸ್ಟ್' ಟ್ರೈಲರ್‌ಗೆ ಯಾವ್ಯಾವ ಭಾಷೆಗೆ ಎಷ್ಟೆಷ್ಟು ವೀವ್ಸ್ ಸಿಕ್ಕಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ದಕ್ಷಿಣ ಭಾರತದಲ್ಲಿ 'ಜೈಲರ್' ಕ್ರೇಜ್

ಸೂಪರ್‌ಸ್ಟಾರ್ ರಜನಿಕಾಂತ್ ನಟಿಸಿದ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಸಣ್ಣದೊಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇಡೀ ಸಿನಿಮಾದಲ್ಲಿ ಅದೇ ಪಾತ್ರ ಹೈಲೈಟ್ ಆಗಿತ್ತು. ತಮಿಳುನಾಡಿನಲ್ಲಂತೂ ಶಿವಣ್ಣನನ್ನು ಹೊಗಳಿಕೊಂಡಾಡಿದ್ದರು. ನರಸಿಂಹನ ಅವತಾರವೆತ್ತಿದ ಶಿವಣ್ಣನನ್ನು ಕಂಡು ಥ್ರಿಲ್ ಆಗಿದ್ದರು. ತಮಿಳು ಅಷ್ಟೇ ಅಲ್ಲ ತೆಲುಗು, ಮಲಯಾಳಂ ಚಿತ್ರರಂಗದಲ್ಲೂ ಶಿವಣ್ಣ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ಅದೇ ಜೋಷ್‌ನಲ್ಲೇ 'ಘೋಸ್ಟ್' ಅನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಮಾಡುತ್ತಿದ್ದಾರೆ. ಆದರೆ, ಕನ್ನಡಕ್ಕಿಂತಲೂ ಹಿಂದಿ ಟ್ರೈಲರ್‌ಗೆ ಹೆಚ್ಚು ವೀವ್ಸ್ ಸಿಕ್ಕಿದ್ದು ಅಚ್ಚರಿ ಮೂಡಿಸಿದೆ.

Shivarajkumar Anupam Kher Movie Ghost Hindi Trailer got more views than Kannada

'ಘೋಸ್ಟ್' ಹಿಂದಿ Vs ಕನ್ನಡ ಟ್ರೈಲರ್

ಮೂರು ದಿನಗಳಿಂದ 'ಘೋಸ್ಟ್' ಸಿನಿಮಾದ ಟ್ರೈಲರ್ ರಿಲೀಸ್ ಆಗಿತ್ತು. ಆದರೆ, ಕಳೆದ ಮೂರು ದಿನಗಳಲ್ಲಿ 'ಘೋಸ್ಟ್' ಸಿನಿಮಾ ಹಿಂದಿ ಟ್ರೈಲರ್ ಪೆನ್ ಮೂವೀಸ್ ಯೂಟ್ಯೂಬ್ ಚಾನೆಲ್‌ನಲ್ಲಿ ರಿಲೀಸ್ ಆಗಿತ್ತು. ಆ ಟ್ರೈಲರ್‌ಗೆ ಸುಮಾರು 13 ಮಿಲಿಯನ್ ವೀವ್ಸ್ ಸಿಕ್ಕಿದೆ. ಅಚ್ಚರಿ ವಿಷಯ ಏನಂದ್ರೆ, ಕನ್ನಡದ ಟ್ರೈಲರ್‌ಗೆ ಹಿಂದಿಯ ಅರ್ಧದಷ್ಟೂ ವೀವ್ಸ್ ಸಿಕ್ಕಿಲ್ಲ. ಕನ್ನಡದಲ್ಲಿ ಕೇವಲ 5.8 ಮಿಲಿಯನ್ ವೀವ್ಸ್ ಸಿಕ್ಕಿದೆ.

ಯಾವ್ಯಾವ ಭಾಷೆಯಲ್ಲಿ ಎಷ್ಟೆಷ್ಟು ವೀವ್ಸ್?

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ 'ಘೋಸ್ಟ್'ದ ಟ್ರೈಲರ್ ಐದು ಭಾಷೆಗಳಲ್ಲೂ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲೂ ನಿರೀಕ್ಷೆಯಿಂದ ಹೆಚ್ಚು ಪ್ರತಿಕ್ರಿಯೆ ಸಿಕ್ಕಿದೆ. ತಮಿಳಿನಲ್ಲಿ 'ಘೋಸ್ಟ್' ಟ್ರೈಲರ್‌ಗೆ 3.73 ಲಕ್ಷ ವೀವ್ಸ್ ಸಿಕ್ಕಿದೆ. ಅದೇ ತೆಲುಗಿನಲ್ಲಿ 5.68 ಲಕ್ಷ ವೀವ್ಸ್ ಸಿಕ್ಕಿದ್ದರೆ, ಅದೇ ಮಲಯಾಳಂನಲ್ಲಿ 1.50 ವೀವ್ಸ್ ಸಿಕ್ಕಿದೆ.

ಶಿವಣ್ಣ ಫ್ಯಾನ್ಸ್‌ ದಸರಾ ಧಮಾಕಾ

ಶಿವರಾಜ್‌ಕುಮಾರ್ ಅಭಿಮಾನಿಗಳಿಗೆ ದಸರಾ ಹಬ್ಬಕ್ಕೆ ಉಡುಗೊರೆ ಸಿಕ್ಕಿದೆ. ಅಕ್ಟೋಬರ್ 19ರಂದು 'ಘೋಸ್ಟ್' ದೇಶಾದ್ಯಂತ ರಿಲೀಸ್ ಆಗುತ್ತಿದೆ. ಎಲ್ಲಾ ಭಾಷೆಯ ಕಲಾವಿದರು ಇರೋದ್ರಿಂದ ಸಿನಿಮಾಗೆ ಒಳ್ಳೆ ಓಪನಿಂಗ್ ಸಿಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಕನ್ನಡದಲ್ಲಿ ಅತೀ ದೊಡ್ಡ ಓಪನಿಂಗ್ ಸಿಗಬಹುದು. ಟ್ರೈಲರ್‌ಗೆ ರೆಸ್ಪಾನ್ಸ್ ಸಿಕ್ಕಂತೆ ಸಿನಿಮಾಗೂ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ಸಿಗಬಹುದಾ? ಅನ್ನೋ ಕುತೂಹಲವಂತೂ ಇದ್ದೇ ಇದೆ.

More from Filmibeat

English summary
Shivarajkumar Anupam Kher Movie Ghost Hindi Trailer got more views than Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X