Shivarajkumar: ಮಗಳಿಗಾಗಿ ಪಿಜ್ಞಾ ಡೆಲಿವರಿ ಬಾಯ್ ಆದ ಶಿವರಾಜ್‌ಕುಮಾರ್; ಶಿವಣ್ಣನಿಗೆ ಶಿವಣ್ಣನೇ ಸಾಟಿ

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅನಾರೋಗ್ಯ ಹಿನ್ನೆಲೆಯಲ್ಲಿ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದರು. ಹೆಚ್ಚು ಕಡಿಮೆ ಆರೇಳು ತಿಂಗಳು ಸಿನಿಮಾರಂಗದಿಂದ ದೂರವಿದ್ದರು. ಅಮೆರಿಕದಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದು ಬಂದಿರುವ ನಟ ಮತ್ತೆ ಆಕ್ಟಿವ್ ಆಗಿದ್ದಾರೆ. ಸಿನಿಮಾಗಳಲ್ಲಿ ನಟಿಸುವುದಕ್ಕೆ ಬೇಕಿರುವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಈಗಾಗಲೇ ಶಿವಣ್ಣ ಒಪ್ಪಿಕೊಂಡಿರುವ ಸಿನಿಮಾಗಳು ಒಂದೊಂದಾಗಿಯೇ ಟೇಕಾಫ್ ಆಗುತ್ತಿವೆ. ರಾಮ್‌ ಚರಣ್ ನಟಿಸುತ್ತಿರುವ ಸಿನಿಮಾಗೆ ಇತ್ತೀಚೆಗೆ ಲುಕ್ ಟೆಸ್ಟ್ ನಡೆದಿದ್ದು ಕೂಡ ನಡೆದಿದೆ. ಈ ಮಧ್ಯೆ ಪುತ್ರಿಯ ಸಿನಿಮಾ ಪ್ರಚಾರದಲ್ಲಿ ಶಿವಣ್ಣ ಬ್ಯುಸಿಯಾಗಿದ್ದಾರೆ. ಹೌದು, ಪುತ್ರಿ ನಿವೇದಿತಾ ಶಿವರಾಜ್‌ಕುಮಾರ್ ನಿರ್ಮಿಸಿರುವ 'ಫೈರ್‌ ಫ್ಲೈ' ಸಿನಿಮಾ ರಿಲೀಸ್ ರೆಡಿಯಾಗಿದ್ದು ಭರ್ಜರಿ ಪ್ರಚಾರ ನಡೆಯುತ್ತಿದೆ.

Shivarajkumar become Pizza delivery boy in daughter Niveditha produced Fire Fly movie

ಇಂದು (ಏಪ್ರಿಲ್ 13) 'ಫೈರ್‌ ಫ್ಲೈ' ಸಿನಿಮಾದ ಟ್ರೈಲರ್ ಲಾಂಚ್ ಆಗಿದೆ. ಶಿವಣ್ಣನ ನಿವಾಸದಲ್ಲಿ ಚಿತ್ರತಂಡದೊಂದಿಗೆ ಟ್ರೈಲರ್ ಲಾಂಚ್ ಆಗಿದ್ದು, ಇಲ್ಲಿ ಫ್ಯಾನ್ಸ್‌ಗೆ ಭರ್ಜರಿ ಸರ್ಪ್ರೈಸ್ ಸಿಕ್ಕಿದೆ. ಟ್ರೈಲರ್ ಕೊನೆಯಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಫಿಜ್ಜಾ ಡೆಲಿವರಿ ಬಾಯ್ ಆಗಿ ಎಂಟ್ರಿ ಕೊಟ್ಟಿದ್ದು ಫ್ಯಾನ್ಸ್‌ ಥ್ರಿಲ್ ಆಗಿದ್ದಾರೆ. ಈ ಟ್ರೈಲರ್‌ನಲ್ಲಿ ಶಿವಣ್ಣ ಎಂಟ್ರಿ ಹೇಗಿದೆ? ಮ್ಯಾನರಿಸಂ? ಎಲ್ಲವನ್ನು ನೋಡೋಣ.

ಮದುವೆ, ಸೆಲೆಬ್ರೆಟಿ ಕ್ರಶ್ ಬಗ್ಗೆ ಶಿವಣ್ಣನ ಪುತ್ರಿ ನಿವೇದಿತಾ ಏನಂತಾರೆ? ಸಿನಿಮಾ ನಿರ್ಮಾಣಕ್ಕಿಳಿದಾಗ ಅಪ್ಪು ಹೇಳಿದಿದ್ದೇನು?
ಕಳೆದ ಹಲವು ದಿನಗಳಿಂದ 'ಫೈರ್ ಫ್ಲೈ' ಸಿನಿಮಾದ ಪ್ರಚಾರ ಮಾಡಲಾಗುತ್ತಿದೆ. ಆದರೆ, ಈ ಸಿನಿಮಾದಲ್ಲಿ ಶಿವಣ್ಣ ಎಂಟ್ರಿ ಇರುತ್ತೆ ಎನ್ನುವ ಚಿಕ್ಕದೊಂದು ಸುಳಿವನ್ನು ಬಿಟ್ಟುಕೊಟ್ಟಿರಲಿಲ್ಲ. ಈ ಸಿನಿಮಾದ ಟ್ರೈಲರ್ ರಿಲೀಸ್ ಆಗುವವರೆಗೂ ಆ ಗೌಪ್ಯತೆಯನ್ನು ಕಾಪಾಡಿಕೊಂಡೇ ಬಂದಿದ್ದರು. ಆದ್ರೀಗ ಸಿನಿಮಾ ಟ್ರೈಲರ್ ರಿಲೀಸ್ ಆಗಿದ್ದು, ಅದರಲ್ಲಿ ಹ್ಯಾಟ್ರಿಕ್ ಹೀರೋ ಹಿಂದೆಂದೂ ಕಾಣಿಸದ ಹಾಗೆ ಎಂಟ್ರಿ ಕೊಟ್ಟಿದ್ದಾರೆ.

'ಫೈರ್ ಫ್ಲೈ' ಸಿನಿಮಾದ ಟ್ರೈಲರ್ ಕೊನೆಯಲ್ಲಿ ಸೆಂಚುರಿ ಸ್ಟಾರ್ ಪಿಜ್ಜಾ ಡೆಲಿವರಿ ಬಾಯ್ಸ್ ಅವತಾರದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಲಿಫ್ಟ್ ಓಪನ್ ಆಗುತ್ತಿದ್ದಂತೆ ಶರ್ಟ್ ಮೇಲೆ 'ದಿ ಕಿಂಗ್ಸ್ ಫಿಜ್ಜಾ ಅನ್ನೋದು ಕಾಣಿಸುತ್ತೆ. ಹೆಡ್‌ ಫೋನ್ ಹಾಕೊಂಡು, ಕೈಯಲ್ಲಿ ಫಿಜ್ಜಾವನ್ನು ಇಟ್ಕೊಂಡು ರೆಡಿ ಎನ್ನುವ ದೃಶ್ಯದಿಂದ ಶಿವಣ್ಣ ಎಂಟ್ರಿ ಆಗುತ್ತೆ. ಕೆಲವೇ ಸೆಕೆಂಡುಗಳಲ್ಲಿ ಎಂಟ್ರಿ ಕೊಟ್ಟು ಮರೆಯಾಗುವ ಸೆಂಚುರಿ ಸ್ಟಾರ್ ಲುಕ್‌ಗೆ, ಝಲಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

Shivarajkumar become Pizza delivery boy in daughter Niveditha produced Fire Fly movie

ಈ ಸಿನಿಮಾದ ಟ್ರೈಲರ್‌ನಲ್ಲಿ ಶಿವಣ್ಣ ಸಿಕ್ಕಾಪಟ್ಟೆ ಯಂಗ್ ಆಗಿ ಕಾಣಿಸಿಕೊಂಡಿರೋದು ಮತ್ತೊಂದು ವಿಶೇಷ. ಈ ಜನರೇಷನ್‌ನ ಯಂಗ್ ಡೆಲಿವರಿ ಬಾಯ್ ಲುಕ್‌ನಲ್ಲಿ ಶಿವಣ್ಣ ಸಿಕ್ಕಾಪಟ್ಟೆ ಇಷ್ಟ ಆಗುತ್ತಾರೆ. ಆದರೆ, ಈ ಸಿನಿಮಾ ಶಿವಣ್ಣ ಪೂರ್ಣ ಪ್ರಮಾಣದಲ್ಲಿ ಇರುತ್ತಾರಾ? ಇಲ್ಲ ಅತಿಥಿ ಪಾತ್ರದಲ್ಲಿ ಅಷ್ಟೇನಾ? ಇಲ್ಲವೇ ಶಿವಣ್ಣನ ಎಂಟ್ರಿ ಕೇವಲ ಪ್ರಮೋಷನ್‌ಗಾಗಿ ಮಾತ್ರನಾ ಅನ್ನೋದು ಇನ್ನಷ್ಟೇ ತಿಳಿಯಬೇಕಿದೆ.

ನಿವೇದಿತಾ ಶಿವರಾಜ್‌ಕುಮಾರ್ ನಿರ್ಮಿಸಿರುವ 'ಫೈರ್ ಫ್ಲೈ' ಸಿನಿಮಾವನ್ನು ವಂಶಿ ನಿರ್ದೇಶನ ಮಾಡಿದ್ದಾರೆ. ಅಲ್ಲದೇ ಅವರೇ ಈ ಸಿನಿಮಾ ಹೀರೋ ಕೂಡ ಹೌದು. ಇವರಿಗೆ ನಾಯಕಿಯಾಗಿ ರಚನಾ ಇಂದರ್ ನಟಿಸಿದ್ದಾರೆ. ಇನ್ನು ಕನ್ನಡದ ಹಿರಿಯ ನಟರಾದ ಸುಧಾರಾಣಿ, ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ಸಿನಿಮಾ ಇದೇ ಏಪ್ರಿಲ್ 24ರಂದು ಅಣ್ಣಾವ್ರ ಹುಟ್ಟುಹಬ್ಬದ ವಿಶೇಷ ದಿನದಂದು ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಈ ನ್ಯೂ ಏಜ್ ಸಿನಿಮಾಗೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರುತ್ತೆ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

More from Filmibeat

English summary
Shivarajkumar become Pizza delivery boy in daughter Niveditha produced Fire Fly movie
Read more about: shivarajkumar daughter movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X