Ghost-Box Office: ಮೊದಲನೇ ದಿನಕ್ಕಿಂತ 3ನೇ ದಿನ ದುಪ್ಪಟ್ಟು ಕಲೆಕ್ಷನ್.. ಹೇಗಿದೆ ವೀಕೆಂಡ್ ಟ್ರೆಂಡ್?

ಶಿವರಾಜ್‌ಕುಮಾರ್ 'ಘೋಸ್ಟ್'ಗೆ ಮೊದಲ ದಿನವೇ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಶಿವಣ್ಣನ ಖದರ್, ಮಾಸ್ ಲುಕ್‌ ಪ್ರೇಕ್ಷಕರಿಗೆ ಇಷ್ಟ ಆಗಿದೆ. ಮೊದಲ ದಿನ ಬಾಕ್ಸಾಫೀಸ್ ಕಲೆಕ್ಷನ್ ಡಲ್ ಇತ್ತು. ಆದರೆ, ಸಿನಿಮಾ ನೋಡಿದವರಿಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿತ್ತು.

ದಿನದಿಂದ ದಿನಕ್ಕೆ ಮೌತ್‌ ಪಬ್ಲಿಸಿಟಿಯಿಂದ 'ಘೋಸ್ಟ್' ಸಿನಿಮಾ ನೋಡಲು ಜನರು ಥಿಯೇಟರ್‌ಗೆ ಬರುತ್ತಿದ್ದಾರೆ. ಇನ್ನೊಂದು ಕಡೆ ವೀಕೆಂಡ್ ಹಾಗೂ ಬ್ಯಾಕ್ ರಜೆಗಳು 'ಘೋಸ್ಟ್‌' ಸಿನಿಮಾಗೆ ವರದಾನ ಆಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

Shivarajkumar Ghost movie box office collection Day 3 is greater than Day 1

'ಘೋಸ್ಟ್' ಮೊದಲ ದಿನದ ಗಳಿಕೆಗಿಂತ ಮೂರನೇ ದಿನದ ಕಲೆಕ್ಷನ್ ದುಪ್ಪಟ್ಟಾಗಿದೆ. ಈ ಮೂಲಕ ಶಿವಣ್ಣ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ತಮಿಳು ಸಿನಿಮಾ 'ಲಿಯೋ'ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಕರ್ನಾಟಕದಲ್ಲಿ ಘೋಸ್ಟ್‌ಗೆ ವರದಾನವಾಗುತ್ತಿದೆ. ಹಾಗಿದ್ದರೆ, ಮೂರನೇ ದಿನ 'ಘೋಸ್ಟ್' ಕಲೆಕ್ಷನ್ ಎಷ್ಟಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

'ಘೋಸ್ಟ್'ಗೆ ಬಾಕ್ಸಾಫೀಸ್ ರೆಸ್ಪಾನ್ಸ್ ಹೇಗಿದೆ?

ಶಿವಣ್ಣನ 'ಘೋಸ್ಟ್' ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿತ್ತು. ಪ್ರೇಕ್ಷಕರಿಗೆ ಈ ಥ್ರಿಲ್ಲರ್ ಸಿನಿಮಾ ಇಷ್ಟ ಆಗಿತ್ತು. ತಮಿಳು ಸಿನಿಮಾ 'ಲಿಯೋ' ಜೊತೆ ಕಂಪಿಟೇಷನ್‌ಗೆ ಇಳಿದಿದ್ದ 'ಘೋಸ್ಟ್' ಕರ್ನಾಟಕದಲ್ಲಿಯೇ ಹಿನ್ನೆಡೆಯಾಗಿತ್ತು. ಫಸ್ಟ್ ಡೇ ಬಾಕ್ಸಾಫೀಸ್‌ನಲ್ಲಿ ಹೇಳಿಕೊಳ್ಳುವಂತಹ ಜಾದು ಮಾಡಿರಲಿಲ್ಲ. ಆದರೆ, ಎರಡನೇ ದಿನದಿಂದ ಕೊಂಚ ಮಟ್ಟಿಗೆ ಚೇತರಿಕೆ ಕಂಡಿದೆ. ಮೌತ್ ಪಬ್ಲಿಸಿಟಿ 'ಘೋಸ್ಟ್' ಬಾಕ್ಸಾಫೀಸ್‌ ಕಲೆಕ್ಷನ್‌ಗೆ ನೆರವಾಗುತ್ತಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ ಹೇಳುತ್ತಿದ್ದಾರೆ.

ಮೂರನೇ ದಿನ 'ಘೋಸ್ಟ್' ಕಲೆಕ್ಷನ್ ಹೇಗಿದೆ?

'ಘೋಸ್ಟ್' ಸಿನಿಮಾಗೆ ಕರ್ನಾಟಕದ ಹಲವು ಭಾಗಗಳಲ್ಲಿ ವಿಭಿನ್ನ ಪ್ರತಿಕ್ರಿಯೆ ಸಿಕ್ಕಿದೆ. 'ಲಿಯೋ' ಬೆಂಗಳೂರಿನಲ್ಲಿ ಅಬ್ಬರಿಸಿದರೆ, 'ಘೋಸ್ಟ್' ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಆಕ್ಯೂಪೆನ್ಸಿ ರೇಟ್ ಹೆಚ್ಚಿಸಿಕೊಂಡಿದೆ. ಬೆಂಗಳೂರು 53%, ಶಿವಮೊಗ್ಗ 65%, ಕುಂದಾಪುರ 44%, ತುಮಕೂರು 60%, ಮಣಿಪಾಲ್ 51% ನಷ್ಟು ಥಿಯೇಟರ್‌ಗಳು ಫುಲ್ ಆಗಿವೆ. ಮೂರನೇ ದಿನಕ್ಕೆ ಮಣಿಪಾಲ್, ಹುಬ್ಬಳ್ಳಿ, ರಾಯಚೂರು ಭಾಗಗಳಲ್ಲಿ ಚೇತರಿಕೆ ಕಂಡಿದೆ. ಟ್ರೇಡ್ ಎಕ್ಸ್‌ಪರ್ಟ್ ಪ್ರಕಾರ, ಮೂರನೇ ದಿನ 4.40 ಕೋಟಿ ರೂಪಾಯಿ (Gross) ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ.

Shivarajkumar Ghost movie box office collection Day 3 is greater than Day 1

ಮೂರು ದಿನಗಳ ಒಟ್ಟು ಕಲೆಕ್ಷನ್ ಎಷ್ಟು?

'ಘೋಸ್ಟ್' ಸಿನಿಮಾ ಫಸ್ಟ್ ಡೇ ಕಲೆಕ್ಷನ್ ನಿರೀಕ್ಷೆ ಮಾಡಿದಷ್ಟು ಇರಲಿಲ್ಲ. ಅಡ್ವಾನ್ಸ್ ಬುಕಿಂಗ್ ಕೂಡ ಪಾಸಿಟಿವ್ ಆಗಿರಲಿಲ್ಲ. ಹೀಗಾಗಿ 1.40 ಕೋಟಿ ರೂಪಾಯಿ (gross) ಕಲೆಕ್ಷನ್ ಆಗಿತ್ತು. ಅದೇ ಎರಡನೇ ದಿನ 2 ಕೋಟಿ ರೂಪಾಯಿ (gross) ಗಳಿಕೆ ಕಂಡಿತ್ತು. ಮೂರನೇ ದಿನ 4.40 ಕೋಟಿ ರುಪಾಯಿ (gross) ಎನ್ನಲಾಗಿದೆ. ಈ ಮೂಲಕ ಸಿನಿಮಾ ಕಲೆಕ್ಷನ್ 7.80 ಕೋಟಿ ರೂಪಾಯಿ (gross) ಕಲೆಕ್ಷನ್ ಮಾಡಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ಸ್ ಹೇಳುತ್ತಿದ್ದಾರೆ.

'ಘೋಸ್ಟ್' ಟೀಮ್ ಏನು ಹೇಳುತ್ತಿದೆ?

'ಘೋಸ್ಟ್' ಟೀಮ್ ಇನ್ನೂ ಅಧಿಕೃತವಾಗಿ ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಮಾಹಿತಿ ಹಂಚಿಕೊಂಡಿಲ್ಲ. ಆದರೆ, ಮೊದಲ ದಿನಕ್ಕಿಂತ ಮೂರನೇ ದಿನ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ಹೇಳಿದ್ದಾರೆ. " ಎಲ್ಲಾ ಮಾಹಿತಿಗಳೊಂದಿಗೆ ಶೀಘ್ರದಲ್ಲಿಯೇ ಅನೌನ್ಸ್ ಮಾಡುತ್ತೇವೆ" ಎಂದು ಶ್ರೀನಿ ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ವೀಕೆಂಡ್ ಹಾಗೂ ದಸರಾ ರಜೆಯ ಗಳಿಕೆಯನ್ನು ಸೇರಿಸಿ ಬಾಕ್ಸಾಫೀಸ್ ಕಲೆಕ್ಷನ್ ಅನೌನ್ಸ್ ಮಾಡುವ ಸಾಧ್ಯತೆಯಿದೆ.

More from Filmibeat

English summary
Shivarajkumar Ghost movie box office collection Day 3
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X