INDIA VS PAKISTAN: ಇಂಡಿಯಾ ಸಪೋರ್ಟ್ ಮಾಡೋಕೆ ಬರ್ತಾರೆ 'ಘೋಸ್ಟ್'.. ಮೀಟ್ ಮಾಡ್ಬೇಕಾ?

ವರ್ಲ್ಡ್ ಕಪ್ ಜ್ವರ ಶುರುವಾಗಿದೆ. ಈಗಾಗಲೇ ಪಂದ್ಯಗಳು ಕೂಡ ನಡೆಯುತ್ತಿವೆ. ಆದರೆ, ಪ್ರತಿ ವಿಶ್ವಕಪ್‌ನಲ್ಲೂ ಭಾರತ ಹಾಗೂ ಪಾಕಿಸ್ತಾನದ ನಡುವೆ ಹೈ ವೋಲ್ಟೇಜ್ ಪಂದ್ಯ ನಡೆಯುತ್ತೆ. ಈ ಬಾರಿಗೆ ಕೂಡ ಅಂತಹದ್ದೇ ಒಂದು ಪಂದ್ಯವನ್ನು ನಿರೀಕ್ಷೆ ಮಾಡಲಾಗುತ್ತಿದೆ. ಭಾರತ ತಮ್ಮ ಎದುರಾಳಿ ಪಾಕಿಸ್ತಾನವನ್ನು ತನ್ನದೇ ನೆಲದಲ್ಲಿ ಎದುರಿಸಲಿದೆ.

ಭಾರತ ಹಾಗೂ ಪಾಕಿಸ್ತಾನ ಪಂದ್ಯ ಎಷ್ಟು ರೋಚಕ ಹಾಗೂ ಇಂಟ್ರೆಸ್ಟಿಂಗ್ ಆಗಿರುತ್ತೋ.. ಅಷ್ಟೇ ಇಂಟ್ರೆಸ್ಟಿಂಗ್ ಆಗಿರೋ ಸಂಗತಿಯೊಂದು ಇದೆ. ಇದು ಕನ್ನಡಿಗರಿಗೆ, ಅದರಲ್ಲೂ ಶಿವಣ್ಣ ಅಭಿಮಾನಿಗಳಿಗೆ ಹಬ್ಬ ಅಂತಲೇ ಹೇಳಬೇಕು. ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಸ್ಟಾರ್ ಸ್ಪೋರ್ಟ್ಸ್ 1 ಕನ್ನಡದಲ್ಲಿ ಶಿವರಾಜ್‌ಕುಮಾರ್ ಮುಖ್ಯ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Shivarajkumar grace the stage of Star Sports Kannada for India Vs Pakistan match on oct 14th

ಟೀಂ ಇಂಡಿಯಾವನ್ನು ಬೆಂಬಲಿಸುವುದಕ್ಕೆ ಶಿವಣ್ಣ ಸ್ಟಾರ್ ಸ್ಪೋರ್ಟ್ಸ್ 1 ಕನ್ನಡಕ್ಕೆ ಬರುತ್ತಿದ್ದಾರೆ. ಈಗಾಗಲೇ ಸ್ಟಾರ್ ಸ್ಪೋರ್ಟ್ಸ್ ಕನ್ನಡ ಪ್ರೋಮೊವನ್ನು ಕೂಡ ರಿಲೀಸ್ ಮಾಡಿದೆ. ಇದರಲ್ಲಿ ಸ್ವತ: ಶಿವಣ್ಣ ಭಾರತ VS ಪಾಕಿಸ್ತಾನ ಪಂದ್ಯವನ್ನು ನೋಡಲು ಬರುತ್ತಿರುವುದಾಗಿ ಹೇಳಿದ್ದಾರೆ. ಈ ಪ್ರೋಮೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

"ಫೀಲ್ಡ್‌ನಲ್ಲಿ ಫೈಟ್ ಮಾಡೋಕೆ ಇಂಡಿಯಾ ರೆಡಿ.. ಸಪೋರ್ಟ್ ಮಾಡೋಕೆ ಘೋಸ್ಟ್ ರೆಡಿ.. ಈ ಓಜಿನ ಮೀಟ್ ಮಾಡ್ಬೇಕಾ..? ಸಿಗ್ತೀನಿ.. ಯಾವಾಗ ಅಕ್ಟೋಬರ್ 14. ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲಿ.. ಗೊತ್ತಲ್ಲ ಈ ಓಜಿನಾ ಮೀಟ್ ಮಾಡ್ಬೇಕು ಅಂದರೆ ಗ್ಯಾಂಗ್ ಜೊತೆ ಬರಬೇಕು. ನೀವು ಬರೋದು ಬೇಡ. ನಾನೇ ಹುಡ್ಕೊಂಡು ಬರ್ತೀನಿ. ಅಕ್ಟೋಬರ್ 19 ನಿಮ್ಮ ಹತ್ತಿರದ ಚಿತ್ರಮಂದಿರಕ್ಕೆ ಬನ್ನಿ ನೋಡಿ ಆಶೀರ್ವಾದ ಮಾಡಿ." ಎಂದು ಶಿವಣ್ಣ ಪ್ರೋಮೊದಲ್ಲಿ ಹೇಳಿದ್ದಾರೆ.

ಅಕ್ಟೋಬರ್ 14ರಂದು ಟೀಮ್ ಇಂಡಿಯಾವನ್ನು ಸಪೋರ್ಟ್ ಮಾಡುವುದಕ್ಕೆ ಬರುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅಕ್ಟೋಬರ್ 19ರಂದು ರಿಲೀಸ್ ಆಗುತ್ತಿರುವ 'ಘೋಸ್ಟ್' ಸಿನಿಮಾದ ಪ್ರಚಾರವನ್ನೂ ಮಾಡುತ್ತಿದ್ದಾರೆ. ಹೈ ವೋಲ್ಟೇಜ್ ಪಂದ್ಯದ ವೇಳೆ 'ಘೋಸ್ಟ್' ಸಿನಿಮಾ ಪ್ರಚಾರ ಮಾಡುತ್ತಿರುವುದು ಸಿನಿಮಾಗೆ ಪ್ಲಸ್ ಪಾಯಿಂಟ್ ಆಗಲಿದೆ.

ಈ ಆಕ್ಷನ್ ಥ್ರಿಲ್ಲರ್ ಸಿನಿಮಾದಲ್ಲಿ ಶಿವಣ್ಣನೊಂದಿಗೆ ಬಾಲಿವುಡ್ ನಟ ಅನುಪಮ್ ಖೇರ್, ಜಯರಾಮ್, ಪ್ರಶಾಂತ್ ನಾರಾಯಣ್, ಸತ್ಯ ಪ್ರಕಾಶ್, ಅರ್ಚನಾ ಜೋಯಿಸ್ ಸೇರಿದಂತೆ ಹಲವು ಪ್ರಮುಖರು ನಟಿಸಿದ್ದಾರೆ. ಈಗಾಗಲೇ ಸಿನಿಮಾ ಟ್ರೈಲರ್ ಆಕ್ಷನ್ ಪ್ರಿಯರಿಗೆ ಸಖತ್ ಕಿಕ್ ಕೊಟ್ಟಿದೆ. ಈ ಸಿನಿಮಾ ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ.

ಭಾರತ vs ಪಾಕಿಸ್ತಾನ್ ಪಂದ್ಯದ ಹಿನ್ನೆಲೆ " ಭಾರತದಲ್ಲಿ ಈ ಮಹಾ ಪೈಪೋಟಿಗೆ ಇರುವ ಉತ್ಸಾಹ ನಿಜಕ್ಕೂ ವಿಶೇಷ. ಈ ಮಹಾ ಯುದ್ಧಕ್ಕೆ ಸ್ಟಾರ್ ಸ್ಪೋರ್ಟ್ಸ್ ಕನ್ನಡದ ಭಾಗವಾಗಿರುವುದು ನನಗೆ ಸಂತೋಷ ಹಾಗೂ ಉತ್ಸಾಹವನ್ನು ಹೆಚ್ಚಿಸುತ್ತದೆ. ನಮ್ಮವರೇ ಆದ ಕೆಎಲ್ ರಾಹುಲ್, ಕ್ರಿಕೆಟ್ ಹೀರೋಗಳಾದ ಕೊಹ್ಲಿ, ಶರ್ಮಾ ಮತ್ತು ಬುಮ್ರಾ ಅವರ ಅದ್ಭುತ ಪ್ರದರ್ಶನಗಳನ್ನು ಕಾತುರದಿಂದ ನಿರೀಕ್ಷಿಸುತ್ತಿದ್ದೇವೆ. ಟೀಮ್ ಇಂಡಿಯಾ ಹಾಗೂ ಕರ್ನಾಟಕಕ್ಕೆ ಶುಭವಾಗಲಿ" ಎಂದು ಶಿವಣ್ಣ ಸ್ಟಾರ್‌ ಸ್ಪೋರ್ಟ್ಸ್ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

More from Filmibeat

English summary
Shivarajkumar grace the stage of Star Sports Kannada for India Vs Pakistan match on oct 14th
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X