Shivarajkumar: "ಇಷ್ಟು ಒಳ್ಳೆಯವನು, ಇಷ್ಟು ಕೆಟ್ಟವನಾ? ಥೂ ಅಂದ್ಬಿಟ್ರೆ ಹೆಂಗೆ?": 'ಘೋಸ್ಟ್' ಶಿವಣ್ಣ ಹೀಗಂದಿದ್ಯಾಕೆ?
'ಘೋಸ್ಟ್' ಸ್ಯಾಂಡಲ್‌ವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ. ಈ ವಾರ ಈ ಸಿನಿಮಾ ರಿಲೀಸ್ ಆಗುತ್ತಿದೆ. ಈ ಕಾರಣಕ್ಕೆ ಶಿವರಾಜ್‌ಕುಮಾರ್, ನಿರ್ದೇಶಕ ಶ್ರೀನಿ ಸೇರಿದಂತೆ ಇಡೀ ತಂಡ ಕೊನೆಯ ಹಂತದ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಕರ್ನಾಟಕ, ಆಂಧ್ರ, ತೆಲಂಗಾಣ, ಕೇರಳ ಹಾಗೂ ಮುಂಬೈನಲ್ಲಿ ಪ್ರಚಾರ ಮಾಡಿ ಬಂದಿದ್ದಾರೆ.
ಬೆಂಗಳೂರಿನಲ್ಲಿ ನಿನ್ನೆ(ಅಕ್ಟೋಬರ್ 15) ಬಿಡುಗಡೆಗೂ ಮುನ್ನ ಕೊನೆಯ ಹಂತದ ಪ್ರಚಾರದಲ್ಲಿ ಶಿವಣ್ಣ (Link: ) ಭಾಗಿಯಾಗಿದ್ದರು. ಈ ವೇಳೆ 'ಘೋಸ್ಟ್' ಸಿನಿಮಾದ ಕಥೆಯ ಬಗ್ಗೆ ಹಾಗೂ ಅವರ ಪಾತ್ರದ ಬಗ್ಗೆ ಚಿಕ್ಕದೊಂದು ಸುಳಿವು ನೀಡಿದ್ದಾರೆ. ಈ ಮೂಲಕ 'ಘೋಸ್ಟ್' ಯಾರು ಅನ್ನೋ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಇದೇ ವೇಳೆ ಶಿವರಾಜ್‌ಕುಮಾರ್ "ಶಿವಣ್ಣನನ್ನೇ ತೆಗೆದುಕೊಳ್ಳಿ. ಇಷ್ಟು ಒಳ್ಳೆಯವನು, ಇಷ್ಟು ಕೆಟ್ಟವನಾ? ಥೂ ಅಂದ್ಬಿಟ್ರೆ ಹೆಂಗೆ?" ಅಂತ ಪ್ರಶ್ನೆ ಮಾಡಿದ್ದಾರೆ. ಅಷ್ಟಕ್ಕೂ ಈ ಪ್ರಶ್ನೆ ಯಾಕೆ ಬಂತು? ಶಿವಣ್ಣ ಹೀಗೆ ಹೇಳಿದ್ದೇಕೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
'ಘೋಸ್ಟ್' ಯಾರು? ಒಳ್ಳೆಯವನಾ.. ಕೆಟ್ಟವನಾ?
ಶಿವರಾಜ್‌ಕುಮಾರ್ ಸಿನಿಮಾ 'ಘೋಸ್ಟ್' ಒಂದಿಷ್ಟು ಪ್ರಶ್ನೆಯನ್ನಂತೂ ಹುಟ್ಟಾಕಿದೆ. ಘೋಸ್ಟ್ ಒಳ್ಳೆಯವನಾ? ಅಥವಾ ಕೆಟ್ಟವನಾ? ಪ್ರಶ್ನೆಗೆ ಶಿವಣ್ಣ ಉತ್ತರ ಕೊಟ್ಟಿದ್ದಾರೆ. ಶಿವಣ್ಣ ಈ ಪ್ರಶ್ನೆಗೆ ಉತ್ತರ ಅಂತೂ ಕೊಟ್ಟಿಲ್ಲ. ಆದರೆ, 'ಘೋಸ್ಟ್' ಸಿನಿಮಾದಲ್ಲಂತೂ ಟ್ವಿಸ್ಟ್ ಅಂಡ್ ಟರ್ನ್ ಇರುತ್ತೆ. ಅವರನು ಓಳ್ಳೆಯವನಾ? ಕೆಟ್ಟವನಾ? ಅನ್ನೋದ ಸಿನಿಮಾದಲ್ಲಿ ಗೊತ್ತಾಗುತ್ತೆ? ಅನ್ನೋದನ್ನು ರಿವೀಲ್ ಮಾಡಿದ್ದಾರೆ.

"61ನೇ ವಯಸ್ಸಿನಲ್ಲಿ ಒಳ್ಳೆಯವನಾ ಕೆಟ್ಟವನಾ ಹೇಗೆ ಹೇಳೋದು?"
'ಘೋಸ್ಟ್' ಒಳ್ಳೆಯವನಾ ಅಥವಾ ಕೆಟ್ಟವನಾ? ಅನ್ನೋದನ್ನು ನೀವೇ ನೋಡಿ ಹೇಳಬೇಕು. ನನಗೆ ಗೊತ್ತಿಲ್ಲ ಅಂತ ಎಸ್ಕೇಪ್ ಆಗಿಬಿಟ್ಟಿದ್ದಾರೆ. "ನನಗೆ ಗೊತ್ತಿಲ್ಲಮ್ಮ ನೀವೇ ನೋಡಿ ಹೇಳ್ಬೇಕು. ನಾನು ಒಳ್ಳೆಯವನು ಅಂದರೂ ತಪ್ಪಾಗುತ್ತೆ. ಕೆಟ್ಟವನು ಅಂದರೂ ತಪ್ಪಾಗುತ್ತೆ. ಎಲ್ಲದನ್ನೂ ಅವರಿಗೆ ಬಿಟ್ಟು ಬಿಡೋಣ. 61ನೇ ವರ್ಷದಲ್ಲಿ ಬಂದು ನಾನು ಒಳ್ಳೆಯವನಾ ಕೆಟ್ಟವನಾ ಅಂತ ಹೇಗೆ ಹೇಳುವುದಕ್ಕೆ ಆಗುತ್ತೆ." ಎಂದು ಶಿವಣ್ಣ ಪ್ರಶ್ನೆಯನ್ನೇ ತಿರುಗಿಸಿದ್ದಾರೆ.
"ಇಷ್ಟು ಒಳ್ಳೆಯವನು, ಇಷ್ಟು ಕೆಟ್ಟವನಾ? ಥೂ ಅಂದ್ರೆ ಹೇಗೆ?
'ಘೋಸ್ಟ್' ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಒಳ್ಳೆಯವರ ಕೆಟ್ಟವರಾ? 'ಘೋಸ್ಟ್' ಸಿನಿಮಾದ ಕಥೆಯೇನಿರಬಹುದು? ಅನ್ನೋ ಪ್ರಶ್ನೆಗೆ ಶಿವಣ್ಣ ಕೊಟ್ಟ ಉತ್ತರ ಹೀಗಿದೆ. "ಯಾವ ಸಿಸ್ಟಂ ತಪ್ಪು ಮಾಡಬಾರೋ ಅದೇ ಸಿಸ್ಟಂ ತಪ್ಪು ಮಾಡಿದರೆ, ಏನಾಗುತ್ತೆ ಅಂತ. ನಾವು ಒಳ್ಳೆಯದು ಅಂದುಕೊಳ್ಳುತ್ತೇವೆ. ಅದೇ ತಪ್ಪು ಮಾಡಿದರೆ. ಈಗ ಶಿವಣ್ಣನನ್ನೇ ತೆಗೆದುಕೊಳ್ಳಿ. ಇಷ್ಟು ಒಳ್ಳೆಯವನು, ಇಷ್ಟು ಕೆಟ್ಟವನಾ? ಥೂ ಅಂದ್ಬಿಟ್ರೆ ಹೆಂಗೆ? ಆತರ." ಎಂದು ಶಿವಣ್ಣ 'ಘೋಸ್ಟ್' ಸಿನಿಮಾದಲ್ಲಿ ತಮ್ಮ ಪಾತ್ರದ ಬಗ್ಗೆ ಹೇಳಿದ್ದಾರೆ.
"ಕೋಪ ಬಂದು ಏನಾದ್ರು ಹೇಳಿದ್ರೆ ಕಷ್ಟ"
"ಏನಾಗುತ್ತೆ ಅಂದರೆ, ಹೇಳುತ್ತಾ ಹೇಳುತ್ತಾ ಎಲ್ಲಾ ಬಂದು ಬಿಡುತ್ತೆ. ಅದಕ್ಕೆ ಬೇಡ. ಇನ್ನೊಂದು ಮೂರು ನಾಲ್ಕು ದಿನ ಅಷ್ಟೇನಮ್ಮ ಬುಧವಾರನೇ ಪ್ರೀಮಿಯರ್ ಮಾಡಬೇಕು ಅಂತ ಹೇಳುತ್ತಿದ್ದಾರೆ. ಆ ಆಸೆಯನ್ನೂ ಪೂರೈಸಿ ಬಿಡುತ್ತೇವೆ. ಯಾಕಂದ್ರೆ, ಇರೋದು ಒಂದೇ ಬ್ರೈನ್. ಮಾತಾಡಿ ಮಾತಾಡಿ ಸಾಕಾಗಿಬಿಟ್ಟಿದೆ. ಆ ಮೇಲೆ ಕೋಪದಲ್ಲಿ ಏನಾದ್ರೂ ಹೇಳಿದ್ರೆ ಕಷ್ಟ ಆಗುತ್ತೆ" ಎಂದು ಘೋಸ್ಟ್ ಬಗ್ಗೆ ಶಿವರಾಜ್‌ಕುಮಾರ್ ಹೇಳಿಕೆ ಕೊಟ್ಟಿದ್ದಾರೆ.


Click it and Unblock the Notifications











